Advertisement

ಅಂಧೇರಿ ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನ: ಶರನ್ನವರಾತ್ರಿ 

03:14 PM Oct 04, 2017 | Team Udayavani |

ಮುಂಬಯಿ: ಅಂಧೇರಿ ಪೂರ್ವದ ಶ್ರೀ ಕ್ಷೇತ್ರ ದತ್ತ ಜಗದಂಬಾ ದೇವಸ್ಥಾನದಲ್ಲಿ ವಾರ್ಷಿಕ ಶರನ್ನವರಾತ್ರಿ ಉತ್ಸವವು ಸೆ. 21ರಿಂದ ಸೆ. 30ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಕಾರ್ಯಕಾರಿ ಸಮಿತಿ ಹಾಗೂ ಸದಸ್ಯರ ನೇತೃತ್ವದಲ್ಲಿ ಪ್ರತಿದಿನ ಸಂಜೆ ದೇವಿಗ್ರಂಥ ಪಾರಾಯಣ, ಭಜನೆ, ಆರತಿ, ಸಾರ್ವಜನಿಕ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಅಷ್ಟಮಿಯ ದಿನದಂದು ಉದ್ಯಮಿ, ಸಂಘಟಕ ಹರೀಶ್‌ ಕೋಟ್ಯಾನ್‌ ದಂಪತಿ ಅವರ ಸಂಕಲ್ಪದೊಂದಿಗೆ ಮಹೇಶ್‌ ಶಾಂತಿ ಅವರ ಪೌರೋಹಿತ್ಯದಲ್ಲಿ ಚಂಡಿಕಾ ಹೋಮ ನಡೆಯಿತು.

ಅನ್ನಸಂತರ್ಪಣೆಗೆ ಸಹಕರಿಸಿದ ಆಶಾ ದೇವಾಡಿಗ, ಸುನಂದಾ ಕರ್ಕೇರ, ಉಮೇಶ್‌ ಕೋಟ್ಯಾನ್‌, ರತ್ನಾ ಪೂಜಾರಿ, ಸೂರಜ್‌ ದೇವಾಡಿಗ, ಪ್ರಮೀಳಾ ಶ್ರೀಯಾನ್‌, ಮೊಟ್ವಾಣಿ ಟ್ರಸ್ಟ್‌, ಸುರೇಂದ್ರ ಕುಮಾರ್‌ ಹೆಗ್ಡೆ, ಹರೀಶ್‌ ಕೋಟ್ಯಾನ್‌, ಸೋನಿ ಯಶವಂತ ಶೆಟ್ಟಿ, ಚರಿತ್ರಾ ಸುವರ್ಣ, ಸದಾನಂದ ಪರಬ್‌, ಅಲ್ಕಾ ಜೋಶಿ ಹಾಗೂ ಇನ್ನಿತರ ಸೇವೆ ನೀಡಿದವರನ್ನು ಶ್ರೀ ಕ್ಷೇತ್ರದ ವತಿಯಿಂದ ಗೌರವಿಸಲಾಯಿತು. ನವದುರ್ಗೆಯರ ವೇಷ ತೊಡಿಸಿದ ಮಕ್ಕಳಿಂದ ಅನ್ನಸಂತರ್ಪಣೆ ಹಾಗೂ ಅರಸಿನ ಕುಂಕುಮ ಕಾರ್ಯಕ್ರಮ ಜರಗಿತು.

ಉತ್ಸವದ ಅಂಗವಾಗಿ ಸ್ಥಾಪಿಸಲ್ಪಟ್ಟ ಕಲಶದ ಬೃಹತ್‌ ಶೋಭಾಯಾತ್ರೆಯು ಶ್ರೀ ಕ್ಷೇತ್ರದಿಂದ ಹೊರಟು ಅಂಧೇರಿಯ ವಸೋìವಾದಲ್ಲಿ ವಿಸರ್ಜಿಸಲ್ಪಟ್ಟಿತು. ಈ ಸಂದರ್ಭದಲ್ಲಿ ಸಂಸ್ಕೃತಿಯನ್ನು ಬಿಂಬಿಸುವ ಹುಲಿವೇಷ, ಪುರಾಣ ಆಧ್ಯಾತ್ಮವನ್ನು ಬಿಂಬಿಸುವ ಸ್ತಬ್ಧಚಿತ್ರ ವರ್ಣರಂಜಿತವಾಗಿ ಮೂಡಿಬಂದವು. ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ಸದಸ್ಯೆಯರು, ಸರ್ವ ಸದಸ್ಯರು, ಸ್ಥಳೀಯ ರಾಜಕೀಯ ನೇತಾರರು,ತುಳು-ಕನ್ನಡಿಗ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡು ಸಹಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next