Advertisement
2001ನೇ ಸಾಲಿನಲ್ಲಿ ಸುಮಾರು 2.50 ಲ.ರೂ. ವೆಚ್ಚದಲ್ಲಿ ಈ ಕಟ್ಟಡವು ನಿರ್ಮಾಣವಾಗಿದ್ದು, ಯಾವುದೇ ಶೈಕ್ಷಣಿಕ ಚಟುವಟಿಕೆ ನಡೆಯದೇ ಪಾಳು ಬಿದ್ದು ಕುಸಿಯುವ ಹಂತದಲ್ಲಿದೆ.
ಈಗ ಶಾಲೆಯು ದಾನರೂಪದಲ್ಲಿ ಕೊಟ್ಟಿರುವ ಜಾಗದಲ್ಲಿ ನಡೆಯುತ್ತಿದ್ದು, ಸುಮಾರು 4 ಎಕ್ರೆ ಶಾಲೆಯ ಸ್ವಂತ ಜಾಗದಲ್ಲಿ 17 ವರ್ಷಗಳ ಹಿಂದೆ ಸರಕಾರದ ಅನುದಾನದಲ್ಲಿ ನಿರ್ಮಾಣವಾದ ಕಟ್ಟಡ ಇದಾಗಿದೆ. ಶಾಲೆಯ ಮೇಲ್ಛಾವಣಿಯ ಹೆಂಚು ನೆಲಕ್ಕೆ ಉರುಳಿ ಬಿದ್ದಿದ್ದು ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ನಿಲ್ಲುತ್ತಿದೆ. ಕಟ್ಟಡದ ಬಾಗಿಲು, ಕಿಟಕಿಯ ಗಾಜುಗಳು ತುಂಡಾಗಿ ಬಿದ್ದಿವೆ. ಸಮಾಜಬಾಹಿರ ಚಟುವಟಿಕೆ
ಶಾಲೆಯ ಕಟ್ಟಡದಲ್ಲಿ ಮದ್ಯದ ಬಾಟಲಿ, ಸಿಗರೇಟ್ ತುಂಡುಗಳು, ಪ್ಲಾಸ್ಟಿಕ್ ವಸ್ತುಗಳು, ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಸಮಾಜಬಾಹಿರ ಚಟುವಟಿಕೆ ನಡೆಯುತ್ತಿರುವುದು ಕಂಡುಬರುತ್ತಿದೆ. ಕಟ್ಟಡದ ಮುಂಭಾಗ ವಿಶಾಲವಾದ ಮೈದಾನವಿರುವುದರಿಂದ ಸ್ಥಳೀಯ ಮಕ್ಕಳು ಆಟವಾಡಲು ಪ್ರತಿನಿತ್ಯ ಇಲ್ಲಿಗೆ ಬರುತ್ತಾರೆ. ಈ ವೇಳೆ ಕಟ್ಟಡ ಕುಸಿದಲ್ಲಿ ಮಕ್ಕಳ ಜೀವದ ಗತಿ ಏನೆಂಬುದು ಸ್ಥಳೀಯರ ಪ್ರಶ್ನೆಯಾಗಿದೆ. ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಶೌಚಾಲಯ ಕೂಡ ನಿರ್ವಹಣೆ ಕಂಡಿಲ್ಲ.
Related Articles
Advertisement
ಮುತುವರ್ಜಿ ವಹಿಸಿಶಾಲೆಯ ಕಟ್ಟಡದ ಮೇಲ್ಛಾವಣಿ ದುರಸ್ತಿಪಡಿಸುವಂತೆ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾಗಿದ್ದ ಸಂದರ್ಭ ಜಿ.ಪಂ., ತಾ. ಪಂ., ಶಿಕ್ಷಣಾಧಿಕಾರಿ ಕಚೆೇರಿ, ಗ್ರಾ.ಪಂ.ಗಳಿಗೆ ಮನವಿ ಮಾಡಿದ್ದೆ. ಆದರೆ ದುರಸ್ತಿಯಾಗದೆ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಹಾನಿಗೀಡಾಗಿದೆ. ಇನ್ನಾದರೂ ಇಲಾಖೆ ಈ ಬಗ್ಗೆ ಮುತುವರ್ಜಿ ವಹಿಸಬೇಕು.
– ಗಿರೀಶ್ ಕಾಮತ್, ನಿಕಟಪೂರ್ವ ಅಧ್ಯಕ್ಷರು, ಶಾಲಾಭಿವೃದ್ಧಿ ಸಮಿತಿ