Advertisement

ಅನಾಸ್‌ ರಾಷ್ಟ್ರೀಯ ದಾಖಲೆ

11:48 AM Jul 23, 2018 | |

ಪ್ರೇಗ್‌ (ಚೆಕ್‌ ಗಣರಾಜ್ಯ): ಕೇರಳದ ಖ್ಯಾತ ಓಟಗಾರ ಮೊಹಮ್ಮದ್‌ ಅನಾಸ್‌ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಉತ್ತಮ ಪಡಿಸಿದ್ದಾರೆ. ಇಲ್ಲಿ ನಡೆದ ಆ್ಯತ್ಲೆಟಿಕ್ಸ್‌ ಕೂಟದ 400 ಮೀ. ಓಟದಲ್ಲಿ ಅವರು ಚಿನ್ನ ಗೆದ್ದರು. ಈ ವೇಳೆ ಅವರು 45.24 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿದರು. ಇದಕ್ಕೂ ಮುನ್ನ ಅವರು 45.31 ಸೆಕೆಂಡ್‌ನ‌ಲ್ಲಿ ಗುರಿ ಮುಟ್ಟಿ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. 

Advertisement

ಮೊಹಮ್ಮದ್‌ ಅನಾಸ್‌ ಈ ವರ್ಷ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್ವೆಲ್ತ್‌ ಕ್ರೀಡಾಕೂಟದಲ್ಲಿ 4ನೇ ಸ್ಥಾನಿಯಾಗಿ ಅತ್ಯುತ್ತಮ ಸಾಧನೆ ಮಾಡಿದ್ದರು. 2016ರಲ್ಲೂ ಗಮ ನಾರ್ಹ ಪ್ರದರ್ಶನ ನೀಡಿದ್ದರು. ಮಿಲಾ ಸಿಂಗ್‌ ಮತ್ತು ಕೆ.ಎಂ. ಬಿನು ಅನಂತರ 400 ಮೀ.ನಲ್ಲಿ ಒಲಿಂಪಿಕ್ಸ್‌ ಅರ್ಹತೆ ಪಡೆದ ಮೊದಲ ಭಾರತೀಯನೆಂಬ ಹೆಗ್ಗಳಿಕೆ ಮೊಹಮ್ಮದ್‌ ಅನಾಸ್‌ ಅವರದಾಗಿತ್ತು. ಅನಾಸ್‌ ಕಳೆದ ರಿಯೋ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next