Advertisement

‘ಅನರ್ಥ’ ನಂಬಿ ಬಂದ ಹೊಸಬರು; ಹಾಡು-ಟೀಸರ್‌ ರಿಲೀಸ್‌

06:50 PM May 23, 2024 | Team Udayavani |

“ಅನರ್ಥ’ ಎಂಬ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಟೀಸರ್‌ ಹಾಗೂ ಹಾಡು ಬಿಡುಗಡೆಯಾಯಿತು. “ಮೆಲ್ಲುಸಿರೆ ಸವಿಗಾನ’ ಚಿತ್ರವನ್ನು ನಿರ್ದೇಶನ ಮಾಡಿರುವ ರಮೇಶ್‌ ಕೃಷ್ಣ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

Advertisement

ಚಿತ್ರದ ಬಗ್ಗೆ ಮಾತನಾಡಿದ ಅವರು, “ಅವಕಾಶ್‌-ಆಕೃತಿ ಎರಡು ಪಾತ್ರಗಳ ಸುತ್ತ ಚಿತ್ರವು ಸಾಗುತ್ತದೆ. ಇಬ್ಬರು ಒಂದು ಮಟ್ಟಕ್ಕೆ ಪ್ರೀತಿಸಿರುತ್ತಾರೆ. ಬ್ರೇಕಪ್‌ ಎನ್ನುವ ಪದವನ್ನು ನಮ್ಮ ಮನಸ್ಸಿನಿಂದ ಅಳಿಸಿ ಹಾಕಿದ ನಂತರ, ಅಮಾವ್ಯಾಸೆಯ ದಿನ ಯಮಗಂಡ ಕಾಲದಲ್ಲಿ ಮದುವೆಯಾಗಲು ನಿರ್ಧರಿಸಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಸ್ಥಳಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋದಾಗ ಏನಾಗುತ್ತದೆ ಎಂಬುದು ಕಥಾಹಂದರ. ನೋಡುಗರಿಗೆ ಊಹಿಸಲಾಗದ ತಿರುವುಗಳಿವೆ. ನಮ್ಮ ಚಿತ್ರವು ಕಮರ್ಷಿಯಲ್‌ ಸಿನಿಮಾಗಳ ಅಂಶಗಳನ್ನು ಹೊಂದಿದ್ದರೂ, ಇಲ್ಲಿನ ಪ್ರತಿ ಅಂಶವು ಖಂಡಿತ ಭಿನ್ನವಾಗಿದೆ’ ಎಂದು ಚಿತ್ರದ ವಿವರ ನೀಡಿದರು.

ಶ್ರೀಧರ್‌ ಹೊಸಮನೆ ಈ ಸಿನಿಮಾದ ನಿರ್ಮಾಪಕರು. ವಿಶಾಲ್‌ ಮಣ್ಣೂರು ಚಿತ್ರದ ನಾಯಕ. ಮೆಡಿಕಲ್‌ ವ್ಯಾಸಂಗ ಮಾಡುತ್ತಿರುವ ಮಂಡ್ಯದ ವಿಹಾನಿ, ಕಿರುಚಿತ್ರಗಳಲ್ಲಿ ನಟಿಸಿ, ಈಗ ನಾಯಕಿಯಾಗಿ ಬಡ್ತಿಗೊಂಡಿದ್ದಾರೆ. ಉಳಿದಂತೆ ಸಿ.ವಿಜಯ್‌ ಕುಮಾರ್‌, ರಕ್ಷಿತ್‌, ಗಣೇಶ್‌, ಪ್ರಸನ್ನ ಬಾಗೀನ, ಅರ್ಪಿತ ಮುಂತಾದವರು ನಟಿಸಿದ್ದಾರೆ.

ಚಿತ್ರಕ್ಕೆ ಕುಮಾರ್‌ ಗೌಡ ನಾಗವಾರ ಛಾಯಾಗ್ರಹಣ, ನಿಶಿತ್‌ಪೂಜಾರಿ-ವಿನಯ್ ಸಂಕಲನ, ಕುಂಗು ಫ‌ು ಚಂದ್ರು ಸಾಹಸ ಇದೆ. ಅಕ್ಷರ ಫಿಲಂಸ್‌ ಮುಖಾಂತರ ಚಿತ್ರವು ಜೂನ್‌ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next