Advertisement

Shivamma movie review; ಗಟ್ಟಿಗಿತ್ತಿಯ ಬದುಕಿನ ಕನಸು

02:38 PM Jun 15, 2024 | Team Udayavani |

ಕಂಟೆಂಟ್‌ ಮೂಲಕ ಗಮನ ಸೆಳೆಯುವ ಪ್ರಯತ್ನವನ್ನು ಈಗ ಕನ್ನಡ ಚಿತ್ರರಂಗದಲ್ಲಿ ಆನೇಕರು ಮಾಡುತ್ತಿದ್ದಾರೆ. ಅದರಲ್ಲೂ ಚಿತ್ರರಂಗಕ್ಕೆ ಹೊಸದಾಗಿ ಬರುವ ನಿರ್ದೇಶಕರು ಇಂತಹ ಪ್ರಯತ್ನಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದಾರೆ. ಈ ವಾರ ತೆರೆಕಂಡಿರುವ ಶಿವಮ್ಮ ಕೂಡಾ ಇದೇ ಸಾಲಿಗೆ ಸೇರುವ ಸಿನಿಮಾ. ನಿರ್ದೇಶಕ ಜೈ ಶಂಕರ್‌ ಒಂದು ಊರಿನ ಮುಗ್ಧ ಹಾಗೂ ಮಹತ್ವಕಾಂಕ್ಷಿ ಮಹಿಳೆಯೊಬ್ಬರ ಕಥೆಯನ್ನು ಈ ಚಿತ್ರದಲ್ಲಿ ಹೇಳಿದ್ದಾರೆ.

Advertisement

ಇಡೀ ಸಿನಿಮಾ ಯರೇಹಂಚಿನಾಳ ಎಂಬ ಊರಿನಲ್ಲಿ ನಡೆಯುತ್ತದೆ. ಮನುಷ್ಯರಿಗೆ ಆರೋಗ್ಯ ಮುಖ್ಯ ಎಂದು ನಂಬಿರುವ ಶಿವಮ್ಮ ಪ್ರಾಡಕ್ಟ್ವೊಂದರ ಮಾರಾಟದಲ್ಲಿ ತೊಡಗಿರುತ್ತಾರೆ. ಇದರ ಹಿಂದೊಂದು ಉದ್ದೇಶವಿದೆ. ತನ್ನ ಕಡುಬಡತನದಿಂದ ಮುಕ್ತಿ ಪಡೆಯಲು ಈ ಬಿಝಿನೆಸ್‌ ಕೈ ಹಿಡಿಯಬಹುದು ಎಂಬ ಬಲವಾದ ನಂಬಿಕೆ ಶಿವಮ್ಮ ಅವರದ್ದು. ಇಡೀ ಸಿನಿಮಾ ನಿಂತಿರೋದೇ ಶಿವಮ್ಮ ಪಾತ್ರದ ಆತ್ಮವಿಶ್ವಾಸದಲ್ಲಿ. ತನ್ನ ಬಿಝಿನೆಸ್‌ಗೆ ಆಕೆ ಗ್ರಾಹಕರನ್ನು ಹಿಡಿಯುವ, ಅವರನ್ನು ಒಪ್ಪಿಸುವ ರೀತಿ ಮಜವಾಗಿದೆ. ಬಡತನವನ್ನು ಬಂಡವಾಳವನ್ನಾಗಿಸದೇ ಆತ್ಮವಿಶ್ವಾಸದೊಂದಿಗೆ ಜೀವನ ಸಾಗಿಸುವ ಶಿವಮ್ಮ ಪ್ರೇಕ್ಷಕರಿಗೊಂದಷ್ಟು ಸಂದೇಶ, ಪ್ರಶ್ನೆ, ಯೋಚನೆಗಳನ್ನು ಬಿಟ್ಟು ಮುಂದೆ ಸಾಗುತ್ತಾಳೆ.

ಸುಳ್ಳು, ಸಾಲ, ಆಕೆ ಮಾತನಾಡುವ ಇಂಗ್ಲೀಷ್‌, ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಮುಂದೆ ಸಾಗುವ ರೀತಿ, ಕೋಪ ಎಂಬ ಪದದಿಂದ ದೂರವಿದ್ದು ಜೀವನ ಸಾಗಿಸುವ ಪರಿ… ಇವೆಲ್ಲವೂ ಶಿವಮ್ಮನನ್ನು ಮತ್ತಷ್ಟು ಚೆಂದಗಾಣಿಸಿದೆ. ಬದುಕನ್ನು ತುಂಬಾ ಲೆಕ್ಕಾಚಾರದಲ್ಲಿ ನೋಡದೇ ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸಬೇಕು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ನೋಡಬಹುದು.

ನಿರ್ದೇಶಕ ಜೈ ಶಂಕರ್‌ ಇಡೀ ಸಿನಿಮಾವನ್ನು ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಮಾತು, ಮೌನದ ಜೊತೆಗೆ ಕಾಡುವ ಹಲವು ಅಂಶಗಳು ಈ ಸಿನಿಮಾದ ಹೈಲೈಟ್‌. ಇಡೀ ಸಿನಿಮಾವನ್ನು ಎಷ್ಟು ನೈಜವಾಗಿ ಕಟ್ಟಿಕೊಡಲು ಸಾಧ್ಯವೋ ಅದನ್ನು ಮಾಡಿದ್ದಾರೆ ಜೈ ಶಂಕರ್‌. ಮೂಲ ಕಲಾವಿದರಲ್ಲದವರನ್ನಿಟ್ಟುಕೊಂಡು ಸಿನಿಮಾ ಮಾಡುವುದು ಸುಲಭವಲ್ಲ. ಆದರೆ ಜೈ ಶಂಕರ್‌ ಈ ವಿಚಾರದಲ್ಲಿ ಗೆದ್ದಿದ್ದಾರೆ.

ಮೊದಲೇ ಹೇಳಿದಂತೆ ಶಿವಮ್ಮ ಪಾತ್ರದಲ್ಲಿ ನಟಿಸಿರುವ ಶರಣಮ್ಮ ಅವರ ನಟನೆ ಈ ಸಿನಿಮಾದ ಹೈಲೈಟ್‌. ಉಳಿದಂತೆ ಚಿತ್ರದ ಪ್ರತಿ ಕಲಾವಿದರು ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next