Advertisement

Kangana Ranaut ಕೆನ್ನೆಗೆ ಹೊಡೆದ CISF ಪೇದೆಗೆ ಉದ್ಯೋಗದ ಭರವಸೆ ನೀಡಿದ ವಿಶಾಲ್ ದದ್ಲಾನಿ

10:15 AM Jun 08, 2024 | Team Udayavani |

ಮುಂಬೈ: ಚಂಡೀಗಢ ವಿಮಾನ ನಿಲ್ದಾಣದಲ್ಲಿ ನಟಿ, ಸಂಸದೆ ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ಗೆ ಸಂಗೀತ ಸಂಯೋಜಕ ವಿಶಾಲ್ ದದ್ಲಾನಿ ಸಹಾಯ ಮಾಡಲು ಮುಂದಾಗಿದ್ದಾರೆ.

Advertisement

ವಿಶಾಲ್ ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಸ್ಟೋರಿಯೊಂದನ್ನು ಹಂಚಿಕೊಂಡಿದ್ದು ಇದರಲ್ಲಿ ಸಂಸದೆ ಕಂಗನಾ ರಣಾವತ್ ಕೆನ್ನೆಗೆ ಬಾರಿಸಿ ಕೆಲಸ ಕಳೆದುಕೊಂಡ ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ಗೆ ಉದ್ಯೋಗದ ಭರವಸೆಯನ್ನು ನೀಡುವ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜೂನ್ 6ರಂದು ಕಂಗನಾ, ಚಂಡೀಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆಯ ನಂತರ ಬೋರ್ಡಿಂಗ್ ಪಾಯಿಂಟ್‌ಗೆ ತೆರಳುತ್ತಿದ್ದಾಗ, ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರು ಕಂಗನಾಗೆ ಕಪಾಳಮೋಕ್ಷ ಮಾಡಿದ್ದಾರೆ. ಈ ವಿಚಾರವಾಗಿ ಕುಲ್ವಿಂದರ್ ಕೌರ್ ಅವರನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿತ್ತು ಅಲ್ಲದೆ ಕಪಾಳಮೋಕ್ಷ ಮಾಡಿರುವ ಕುರಿತು ಹೇಳಿಕೆ ನೀಡಿದ ಕುಲ್ವಿಂದರ್ ಕೌರ್ ರೈತರ ಪ್ರತಿಭಟನೆ ಕುರಿತು ಕಂಗನಾ ಅವಹೇಳನಕಾರಿಯಾಗಿ ಹೇಳಿಕೆಯನ್ನು ನೀಡಿದ್ದರು ನಾನು ಒಬ್ಬ ರೈತನ ಮಗಳು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಕುಲ್ವಿಂದರ್ ಕೌರ್ ನಡೆಗೆ ಬಾರಿ ಬೆಂಬಲವು ವ್ಯಕ್ತವಾಗಿತ್ತು, ಈ ನಡುವೆ ವಿಶಾಲ್ ತಮ್ಮ ಇಸ್ಟಾಗ್ರಾಮ್ ಪೋಸ್ಟ್ ನಲ್ಲಿ ಕುಲ್ವಿಂದರ್ ಕೌರ್ ಗೆ ಉದ್ಯೋಗದ ಭರವಸೆ ನೀಡುವ ಮೂಲಕ ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಅದರಲ್ಲಿ “ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ಸಂಸದೆ ಕೆನ್ನೆಗೆ ಬಾರಿಸಿದ ಸಿಬ್ಬಂದಿಯ ಕೋಪದ ಹಿಂದಿನ ಸತ್ಯವನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ. ಒಂದು ವೇಳೆ ಆಕೆಯ ಕೆಲಸದ ವಿಚಾರವಾಗಿ ಯಾವುದೇ ತೊಂದರೆ ಆದಲ್ಲಿ ಆಕೆಗೆ ಕೆಲಸದ ಭರವಸೆಯನ್ನು ನಾನು ನೀಡುತ್ತೇನೆ… ಜೈ ಹಿಂದ್. ಜೈ ಜವಾನ್. ಜೈ ಕಿಸಾನ್ ಎಂದು ಅವರು ಬರೆದಿದ್ದಾರೆ.

ಇದನ್ನೂ ಓದಿ: Modi ಪದಗ್ರಹಣ ಕಾರ್ಯಕ್ರಮಕ್ಕೆ ವಂದೇ ಭಾರತ್ ಲೋಕೋ ಪೈಲಟ್ ಐಶ್ವರ್ಯ ಮೆನನ್ ಗೆ ಆಹ್ವಾನ

Advertisement

Advertisement

Udayavani is now on Telegram. Click here to join our channel and stay updated with the latest news.

Next