Advertisement

ಐದು ದಶಕ ಕಳೆದರೂ ಅಭಿವೃದ್ಧಿ ಕಾಣದ ರಸ್ತೆ

02:57 PM Jun 22, 2023 | Team Udayavani |

ಕೆಜಿಎಫ್‌: ನಗರದಿಂದ ಕಾಮಸಮುದ್ರ ಮಾರ್ಗವಾಗಿ ನೆರೆಯ ತಮಿಳುನಾಡಿನ ಕೃಷ್ಣಗಿರಿಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯು ಅಭಿವೃದ್ಧಿ ಕಂಡು ಸುಮಾರು 50 ವರ್ಷಗಳೇ ಕಳೆದಿದ್ದು, ಈ ಮಾರ್ಗದಲ್ಲಿ ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರು ನರಕಯಾತನೆ ಅನುಭವಿಸುವಂತಾಗಿದೆ.

Advertisement

ಕೆಜಿಎಫ್‌ನಿಂದ ಕಾಮಸಮುದ್ರ 18 ಕಿಮೀ ದೂರವಿದ್ದು, ಬಂಗಾರಪೇಟೆ-ಕೆಜಿಎಫ್‌ ಎರಡೂ ತಾಲೂಕುಗಳಿಗೆ ಸೇರುತ್ತದೆ. ನಗರದ ಮಾರಿಕುಪ್ಪಂವರೆಗೆ ರಸ್ತೆಯನ್ನು ಡಾಂಬರೀಕರಣ ಮಾಡಿದ್ದು, ಅಲ್ಲಿಂದ ಮುಂದಕ್ಕೆ ಬಂಗಾರಪೇಟೆ ಗಡಿಯವರೆಗೆ ಸುಮಾರು 4 ಕಿಮೀ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟು ನಡೆದಾಡುವುದಕ್ಕೂ ಕಷ್ಟಕರವಾಗಿದೆ.

ಮಾರಿಕುಪ್ಪಂನಿಂದ ಬಂಗಾರಪೇಟೆ ಗಡಿಯವರೆಗಿನ ರಸ್ತೆಯು ಕಾಡಿನ ಮಧ್ಯೆ ಇದ್ದು, ರಾತ್ರಿ ವೇಳೆಯಲ್ಲಿ ಯಾವುದೇ ರೀತಿಯ ವಿದ್ಯುತ್‌ ದೀಪದ ವ್ಯವಸ್ಥೆಯಿಲ್ಲ. ಅಲ್ಲದೇ ಕಾಡು ಪ್ರದೇಶವಾಗಿರುವುದರಿಂದ ಮೂರ್‍ನಾಲ್ಕು ಕಿಮೀ ಉದ್ದಕ್ಕೂ ಯಾವುದೇ ಮೊಬೈಲ್‌ ನೆಟ್‌ವರ್ಕ್‌ ಬರುವುದಿಲ್ಲ. ಹೆರಿಗೆ, ಅಪಘಾತ, ಇಲ್ಲವೇ ಹಾವು ಕಚ್ಚಿರು ವಂತಹ ತುರ್ತು ಪರಿಸ್ಥಿತಿಗಳಲ್ಲಿ ಈ ಮಾರ್ಗದಲ್ಲಿ ಆಂಬುಲೆನ್ಸ್‌ ಸಂಚರಿಸಲು 2-3 ಗಂಟೆಗಳ ಸಮಯವಾ ಗುವು ದರಿಂದ ರೋಗಿಗಳು ಅಸುನೀಗಿರುವಂತಹ ಘಟನೆಗಳೂ ಸಹ ಸಂಭವಿಸಿವೆ ಎಂದು ಸಾರ್ವಜನಿಕರು ದೂರಿದ್ದಾರೆ.

ಮಳೆ‌ ಬಂದರೆ ಕೆಸರುಗದ್ದೆಯಂತಾಗುವ ರಸ್ತೆ: ಕಾಡು ಹಂದಿ, ಹಾವು, ಚಿರತೆ, ನರಿ, ತೋಳ ಮೊದಲಾದ ಕಾಡುಪ್ರಾಣಿಗಳ ಭೀತಿ ಒಂದೆಡೆ ಕಾಡುತ್ತಿದ್ದು, ಜೀವನೋಪಾಯಕ್ಕಾಗಿ ಈ ಮಾರ್ಗದಲ್ಲಿ ಸಂಚರಿ ಸುವ ದಿನಗೂಲಿ ನೌಕರರು ಮತ್ತು ದ್ವಿಚಕ್ರ ವಾಹನ ಸವಾರರು ಜೀವವನ್ನು ಅಂಗೈಯಲ್ಲಿಟ್ಟು ಕೊಂಡು ಸಂಚರಿಸಬೇಕಾಗಿದೆ. ಒಂದೊಮ್ಮೆ ದ್ವಿಚಕ್ರ ವಾಹನ ಮತ್ತು ನಾಲ್ಕು ಚಕ್ರದ ವಾಹನಗಳೇನಾದರೂ ಪಂಚರ್‌ ಆದರೆ ದೇವರೇ ಕಾಪಾಡಬೇಕು ಎನ್ನುವುದು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಅಳಲಾಗಿದೆ.

ಕೆಜಿಎಫ್‌ ಮತ್ತು ಬಂಗಾರಪೇಟೆ ಎರಡೂ ತಾಲೂಕುಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದರೂ, ಸಹ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ಧಿ ಮಾಡುವ ಗೋಜಿಗೇ ಹೋಗದಿರುವು ದರಿಂದ ಸುಮಾರು 50 ವರ್ಷಗಳಾದರೂ ರಸ್ತೆ ಅಭಿವೃದ್ಧಿ ಕಂಡಿಲ್ಲ. ಕೆಲವು ಕಡೆಗಳಲ್ಲಿ ರಸ್ತೆಯಂಚಿನಲ್ಲಿ ಚರಂಡಿಗಾಗಿ ಸಿಡಿಗಳನ್ನು ಮಾಡಿ ಹಾಗೆಯೇ ಬಿಟ್ಟಿರುವುದರಿಂದ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದ್ದು, ಮಳೆ ಬಂತೆಂದರೆ ಸಾಕು ಇಡೀ ರಸ್ತೆಯೆಲ್ಲಾ ಕೆಸರು ಗದ್ದೆಯಂತಾಗುತ್ತದೆ ನಿತ್ಯ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ಏಳೆಂಟು ತಿಂಗಳ ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು, ಸರ್ಕಾರದ ಕಡೆಯಿಂದ ಅನು ಮೋ ದನೆ ಯಾಗಿ ಬಂದ ಕೂಡಲೇ ಟೆಂಡರ್‌ ಕರೆದು ಕಾಮಗಾರಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾ ಗುವುದು ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಾರಿಕುಪ್ಪಂ-ಕಾಮಸಮುದ್ರ ರಸ್ತೆ ಅಭಿವೃದ್ಧಿ ಕಂಡು ಐದಾರು ದಶಕಗಳೇ ಉರುಳಿದ್ದು, ಈ ಮಾರ್ಗದಲ್ಲಿ ದ್ವಿಚಕ್ರ ವಾಹನದಲ್ಲಿ ಸಂಚರಿಸುವಾಗ ಹಲವು ಬಾರಿ ಆಯತಪ್ಪಿ ಕೆಳಗೆ ಬಿದ್ದು ಗಾಯಗಳಾಗಿವೆ. ಇನ್ನಾದರೂ ರಸ್ತೆಯನ್ನು ಅಭಿವೃದ್ಧಿ ಮಾಡುತ್ತಾರೆಯೇ ಕಾದು ನೋಡಬೇಕಿದೆ. ● ರಘು, ದ್ವಿಚಕ್ರ ವಾಹನ ಸವಾರ

ರಸ್ತೆಯು ಸಂಪೂರ್ಣವಾಗಿ ಹಾಳಾಗಿರುವು ದರಿಂದ ಕೆಎಸ್‌ಆರ್‌ಟಿಸಿ ಬಸ್‌ಗಳೂ ಸಹ ಸಂಚರಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಜಿಎಫ್‌-ಕೃಷ್ಣಗಿರಿ ಮಾರ್ಗದಲ್ಲಿ ಓಡಾಡುತ್ತಿದ್ದ ತಮಿಳು ನಾಡಿನ ಅಂತರರಾಜ್ಯ ಬಸ್‌ಗಳು ಸಂಪೂರ್ಣ ವಾಗಿ ನಿಂತುಹೋಗಿವೆ. ದಿನನಿತ್ಯ ಕೆಜಿಎಫ್‌-ಕಾಮಸಮುದ್ರ ಮಾರ್ಗದಲ್ಲಿ ಈ ಮೊದಲು ಪ್ರತಿನಿತ್ಯ 10 ಬಾರಿ ಓಡಾಡುತ್ತಿದ್ದ ಬಸ್‌ಗಳು ಈಗ ಕೇವಲ 2-3 ಬಾರಿ ಮಾತ್ರ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ● ಸಾಯಿಕೃಷ್ಣ, ವಿದ್ಯಾರ್ಥಿ

ಮಾರಿಕುಪ್ಪಂನಿಂದ ಮೂರ್‍ನಾಲ್ಕು ಕಿಲೋಮೀಟರ್‌ವರೆಗಿನ ಅರಣ್ಯ ಪ್ರದೇಶದಲ್ಲಿ ಸೋಲಾರ್‌ ವಿದ್ಯುತ್‌ ದೀಪಗಳನ್ನಾಗಲೀ ಅಥವಾ ವಿದ್ಯುತ್‌ ದೀಪಗಳನ್ನಾಗಲೀ ಅಳವಡಿಸಬೇಕು. ಈ ಪ್ರದೇಶದಲ್ಲಿ ಸಂಪೂರ್ಣವಾಗಿ ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ಸರಿಪಡಿಸಲು ಸಂಬಂಧಪಟ್ಟ ಇಲಾಖೆಯವರು, ಜನಪ್ರತಿನಿಧಿ ಗಳು ಮುಂದಾಗಬೇಕಿದೆ. ● ಅನಂತರೆಡ್ಡಿ, ನಿತ್ಯ ಪ್ರಯಾಣಿಕ

ನಾಗೇಂದ್ರ ಕೆ

Advertisement

Udayavani is now on Telegram. Click here to join our channel and stay updated with the latest news.

Next