Advertisement
ಮಹಾರಾಷ್ಟ್ರದಲ್ಲಿ 350 ಕೋಟೆಗಳಿವೆ. ಈ ಪೈಕಿ ಕೆಲವು ಕೋಟೆಗಳು ಪುರಾತತ್ವ ಇಲಾಖೆಯ ಸಂರಕ್ಷಿತ ಪಟ್ಟಿಯಲ್ಲಿವೆ. ಸಂರಕ್ಷಿತ ಪಟ್ಟಿಯಲ್ಲಿಲ್ಲದ ಕೋಟೆಗಳನ್ನು ಮಾತ್ರ ವಿವಾಹ ಹಾಗೂ ಹೋಟೆಲ್ಗಳಿಗೆ ಬಾಡಿಗೆ ನೀಡಲು ನಿರ್ಧರಿಸಲಾಗಿದೆ. ಆದರೆ ಶಾಶ್ವತ ನಿರ್ಮಾಣ ಕಾರ್ಯಕ್ಕೆ ಅನುಮತಿ ನೀಡುವುದಿಲ್ಲ. ಅಷ್ಟೇ ಅಲ್ಲ, ಇಲ್ಲಿನ ಪರಿಸರದ ಮೇಲೆ ಯಾವುದೇ ಪರಿಣಾಮ ಉಂಟಾಗದಂತೆಯೂ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. ಇವುಗಳನ್ನು ಅಭಿವೃದ್ಧಿಪಡಿ ಸಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ಲಭ್ಯವಾಗುತ್ತದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. Advertisement
ಕೋಟೆಗಳಲ್ಲಿ ವಿವಾಹ ಸಮಾರಂಭಕ್ಕೆ ಅವಕಾಶ
01:11 AM Sep 07, 2019 | mahesh |