Advertisement

ಸಮಸ್ಯೆ ಇತ್ಯರ್ಥ್ಯಕ್ಕೆ ಸಂಘಟನೆ ಅವಶ್ಯ

12:51 PM Dec 15, 2017 | |

ಪಿರಿಯಾಪಟ್ಟಣ: ಸಂಘಟನೆ ಕೊರತೆಯಿಂದ ಸಮಸ್ಯೆಗಳಿಗೆ ನಿವಾರಣೆ ಸಿಗುತ್ತಿಲ್ಲ ಎಂದು ರಾಜ್ಯ ಪದವೀದರ ಪ್ರಾಥಮಿಕ ಶಿಕ್ಷಕರ ಸಂಘದ ನಂಜನಗೂಡು ತಾಲೂಕು ಅಧ್ಯಕ್ಷ ಪ್ರಕಾಶ್‌ ತಿಳಿಸಿದರು. ಪಟ್ಟಣದ ಕೋಟೆ ಸರ್ಕಾರಿ ಶಾಲೆಯಲ್ಲಿ ನಡೆದ ಪಿರಿಯಾಪಟ್ಟಣ ತಾಲೂಕು ಪದವೀದರ ಪ್ರಾಥಮಿಕ ಶಿಕ್ಷಕರ ಸಂಘದ ಉದ್ಘಾಟನೆಯಲ್ಲಿ ಮಾತನಾಡಿದರು.

Advertisement

ಪ್ರಾಥಮಿಕ ಶಿಕ್ಷಣದಲ್ಲಿ 1 ರಿಂದ 5 ಮತ್ತು 6 ರಿಂದ8 ಎಂಬ ವಿಭಾಗಗಳಿದ್ದು ಶಿಕ್ಷಕರ ಮೂಲ ವೇತನದಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ನೇಮಕಾತಿ ನಿಯಮದ ಅನುಸಾರ ಬಡ್ತಿಯಲ್ಲಿ ವಿಭಾಗ ಮಾಡಿ ಪದವೀದರ ಪ್ರಾಥಮಿಕ ಶಿಕ್ಷಕರಿಗೆ ಮೊದಲ ಅದ್ಯತೆ ನೀಡಬೇಕೆಂಬುದೇ ನಮ್ಮ ಕೋರಿಕೆ ಎಂದರು.

ಜಿಲ್ಲಾಧ್ಯಕ್ಷ ರವಿ, ರಾಜಾದ್ಯಂತ ಸಂಘದ ರಚನೆಯಾಗುತ್ತಿದ್ದು ಪದಾಧಿಕಾರಿಗಳ ಆಯ್ಕೆ ನಡೆಯುತ್ತಿದೆ. ಪದವೀದರ ಪ್ರಾಥಮಿಕ ಶಿಕ್ಷಕರು ತಮ್ಮ ಜೇಷ್ಠತ ಪಟ್ಟಿ ಸಿದ್ಧಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಲಿಗೆ ತಿಳಿಸಿಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ನಮ್ಮಗಳ ವೇತನದಲ್ಲಿ ಸದಸತ್ವ ಶುಲ್ಕಕ್ಕೆಂದು 200 ರೂ.,ಕಡಿತವಾಗುತ್ತಿದ್ದು ಅದನ್ನು ಮರು ಪಾವತಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ನೀಡಬೇಕೆಂದರು. ನೂತನ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಮನು.ಬಿ.ಆರ್‌, ತನಗೆ ವಹಿಸಿದ ಜವಾಬ್ದಾರಿಗೆ ಯಾವುದೇ ಚ್ಯುತಿ ಬಾರದಂತೆ ಶಿಕ್ಷಕರ ಸಮಸ್ಯೆ ನಿವಾರಣೆಗೆ ಶ್ರಮಿಸುತ್ತೇನೆಂದರು.

ಪದಾಧಿಕಾರಿಗಳ ಆಯ್ಕೆ: ತಾಲೂಕು ಘಟಕದ ಅಧ್ಯಕ್ಷರಾಗಿ ಮನು.ಬಿಆರ್‌, ಉಪಾಧ್ಯಕ್ಷರಾಗಿ ಯಶಸ್ವಿನಿ, ಪ್ರಧಾನ ಕಾರ್ಯದರ್ಶಿಯಾಗಿ ಗಿರೀಶ್‌, ಖಜಾಂಚಿಯಾಗಿ ಮಹಮದ್‌ ಅತಿಕ್‌ವುಲ್ಲ, ಸಂಘಟನಾ ಕಾರ್ಯದರ್ಶಿಯಾಗಿ ಲಂಕೇಶ್‌, ಮಾನಸ, ವಕ್ತಾರರಾಗಿ ಶಿವಣ್ಣ, ನಿರ್ದೇಶಕರಾಗಿ, ಸವಿತಾ, ಪುಷ್ಪವತಿ ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.

Advertisement

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್‌ರಾಜ್‌, ಸಂಘಟನಾ ಕಾರ್ಯದರ್ಶಿ ರೂಪೇಶ್‌, ರಂಗಪ್ಪ, ಶಿಕ್ಷಕರಾದ ಶ್ರೀನಿವಾಸ್‌, ಕವಿತಾ, ಮಮತಾ, ಉಷಾ, ರಂಜಿತಾ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next