Advertisement
ವಾಗ್ದೇವಿ ವಿದ್ಯಾಮಂದಿರ ಶಾಲೆಯಲ್ಲಿ ಗಣರಾಜ್ಯೋತ್ಸವ ನಿಮಿತ್ತ ಧ್ವಜಾರೋಹಣ ವೇಳೆ ಸರಕಾರ ನಿಯಮ ಶಿಕ್ಷಣ ಇಲಾಖೆ ಆದೇಶದಂತೆ ಮಹಾತ್ಮ ಗಾಂಧೀಜಿ, ಡಾ| ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ನೆರವೇರಿಸಬೇಕು ಎಂದು ಆದೇಶಿಸಲಾಗಿದೆ. ಇಲ್ಲಿನ ಶಾಲಾ ಆಡಳಿತ ಮಂಡಳಿ ಇಂತಹ ನಿಮಯ ಪಾಲನೆ ಮಾಡದೇ ಉಲ್ಲಂಘಿಸಿದೆ. ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾದಾಗ ತಾಲೂಕಾಡಳಿತ, ಶಾಲಾಡಳಿತ ಮಂಡಳಿ ನಿರ್ದೇಶಕ ಸಚಿನ್ ತಡವಾಗಿ ಆಗಮಿಸಿದರು. ನಿಮಯ ಪಾಲನೆ ಮಾಡಬೇಕಿತ್ತು. ನನ್ನಿಂದ ತಪ್ಪಾಗಿದೆ ಎಂದು ನಿರ್ದೇಶಕ ಸಚಿನ್ ಒಪ್ಪಿಕೊಂಡರು.
Related Articles
Advertisement
ಗಣರಾಜ್ಯೋತ್ಸವ ವೇಳೆ ಗಾಂಧೀಜಿ, ಡಾ| ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿರುವ ಹಿನ್ನೆಲೆ ಶಿಕ್ಷಣ ಇಲಾಖೆಯಿಂದ ಕಾರಣ ಕೇಳಿ ನೋಟಿಸ್ ಜಾರಿಗೆ ಮಾಡಲಾಗಿದೆ. ಗುರುವಾರ ಒಳಗಾಗಿ ಸ್ಪಷ್ಟ ಉತ್ತರ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಗಣರಾಜ್ಯೋತ್ಸವ ವೇಳೆ ಮಹಾತ್ಮ ಗಾಂಧೀಜಿ, ಡಾ| ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ ಮಾಡಿದ ಹಿನ್ನೆಲೆ ಸಂಘ- ಸಂಸ್ಥೆಗಳ ದೂರುಗಳ ಆಧರಿಸಿ ನಿರ್ದೇಶಕ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಶ್ರೀನಿವಾಸ ಚಾಪಲ್, ತಹಶೀಲ್ದಾರ್ ಗಣರಾಜ್ಯೋತ್ಸವ ಧ್ವಜಾರೋಹಣ ವೇಳೆ ಡಾ| ಬಿ.ಆರ್. ಅಂಬೇಡ್ಕರ್, ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಅಪಮಾನ ಮಾಡಿದ ಘಟನೆ ಕುರಿತು ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ. ಸಂಘಟನೆಗಳ ದೂರು ಮೇಲಧಿಕಾರಿಗಳಿಗೆ ಕ್ರಮಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಆರ್.ಇಂದಿರಾ, ಕ್ಷೇತ್ರ ಶಿಕ್ಷಣಾಧಿಕಾರಿ