Advertisement

ಅಫ್ಘಾನಿಸ್ತಾನಕ್ಕೆ ಭಾರತದ ನಿಯೋಗ ಭೇಟಿ : ಹಿರಿಯ ತಾಲಿಬಾನ್ ನಾಯಕರ ಭೇಟಿ

07:58 PM Jun 02, 2022 | Team Udayavani |

ಕಾಬೂಲ್ : ತಾಲಿಬಾನ್ ಆಡಳಿತವಿರುವ ಅಫ್ಘಾನಿಸ್ತಾನಕ್ಕೆ ಬಹು ಸದಸ್ಯರ ನಿಯೋಗ ಭೇಟಿ ನೀಡಿ ಮಾನವೀಯ ನೆರವು ವಿತರಣಾ ಕಾರ್ಯಾಚರಣೆಗಳನ್ನು ಪರಿಶೀಲನೆ ನಡೆಸಿ, ಹಿರಿಯ ತಾಲಿಬಾನ್ ನಾಯಕರನ್ನು ಭೇಟಿ ಮಾಡಿ

Advertisement

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ ಜೆಪಿ ಸಿಂಗ್ ನೇತೃತ್ವದ ತಂಡ ಕಾಬೂಲ್‌ಗೆ ಭೇಟಿ ನೀಡಿ , ಅಫ್ಘಾನಿಸ್ತಾನಕ್ಕೆ ಭಾರತದ ಮಾನವೀಯ ನೆರವು ವಿತರಣಾ ಕಾರ್ಯಗಳ ಮೇಲ್ವಿಚಾರಣೆ ನಡೆಸಿದರು. ಕಾಬೂಲ್‌ನಲ್ಲಿರುವ ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಭಾರತವು ಮಾನವೀಯ ನೆಲೆಯಲ್ಲಿ ಲಸಿಕೆಗಳನ್ನು ಈ ಆಸ್ಪತ್ರೆಗೆ ಕಳುಹಿಸಿತ್ತು.

ಕಾಬೂಲ್‌ಗೆ ಸಮೀಪದಲ್ಲಿರುವ ಚಿಮ್ತಾಲಾದಲ್ಲಿ ಪವರ್‌ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ಮಿಸಿದ ಚಿಮ್ತಾಲಾ ವಿದ್ಯುತ್ ಸಬ್‌ಸ್ಟೇಷನ್‌ಗೆ ಭೇಟಿ ನೀಡಿದರು.

ಕಾಬೂಲ್‌ನಲ್ಲಿ ಅಫ್ಘಾನಿಸ್ತಾನಕ್ಕೆ ಭಾರತದ ಮಾನವೀಯ ನೆರವಿನ ವಿತರಣಾ ಕಾರ್ಯಾಚರಣೆಗಳನ್ನು ಮೇಲ್ವಿಚಾರಣೆ ಮಾಡಿದರು. ಹಿರಿಯ ತಾಲಿಬಾನ್ ನಾಯಕರನ್ನು ಭೇಟಿ ಮಾಡಿದರು. ಭಾರತೀಯ ಯೋಜನೆಗಳನ್ನು ಪರಿಶೀಲಿಸಿದರು. ಕಳೆದ ವರ್ಷ ಅಮೆರಿಕಾ ಯುದ್ಧ ಪೀಡಿತ ಪ್ರದೇಶದಿಂದ ಹಿಂದೆ ಸರಿದ ನಂತರ ತಾಲಿಬಾನ್ ಜತೆ ನಡೆದ ಮೊದಲ ಸಭೆ ಇದಾಗಿದೆ.


Advertisement

Advertisement

Udayavani is now on Telegram. Click here to join our channel and stay updated with the latest news.

Next