Advertisement
ನಂಗೆ ಈ ತರ ಸಾವಿರ ಸಲ ಅನ್ಸಿದೆ. ನಿಮಗೂ ಅನಿಸಿರಬಹುದು. ತಾಯಿ ತನ್ನ ಮಗುವಿಗೆ ಚಂದಮಾಮ ತೋರಿಸಿ ಮಗು ಊಟ ಮಾಡ್ಲಿ ಅಂತ ಸತ್ಯವಲ್ಲದಿದ್ದರೂ ಏನೇನೊ ಕತೆ ಹೇಳ್ತಾರಲ್ಲ ಹಾಗೇ. ಅಂತದ್ದು ಯಾವುದೂ ಕೂಡ ನಿಜ ಆಗಲ್ಲ ಅಂತಾ ಗೊತ್ತಿದ್ರೂ ಕೂಡ ಆ ತರ ಆದ್ರೆ ಎಷ್ಟು ಚೆನ್ನಾಗಿರುತ್ತೆ ಅಂತ ಅನಿಸೋದಿದೆ!
Related Articles
Advertisement
ಕೆಲವೊಂದು ಕೆಟ್ಟ ಕನಸುಗಳು ನಮ್ಮ ನಿದ್ದೆಯನ್ನೇ ಹಾಳುಗೆಡುತ್ತವೆ. ಕೆಲವೊಂದು ಕನಸು ಬರಲಿ ಅಂತ ನಿದ್ದೆ ಮಾಡುತ್ತೇವೆ. ಆದರೆ ಕೆಲವೊಮ್ಮೆ ಕನಸಿಗಿಂತ ವಾಸ್ತವವೇ ತುಂಬಾ ಕರಾಳವಾಗಿರುತ್ತೆ ಅಲ್ವಾ? ನಾವು ಅಂದುಕೊಳ್ಳೋ ರೀತಿ ಜೀವನ ಇರಲ್ಲ ಅಂತ ಗೊತ್ತಿದ್ದರೂ ಕೂಡ ಹೀಗೆ ಇಬೇìಕು ಅಂತ ಅಂದುಕೊಳ್ಳುತ್ತೇವೆ. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುವುದೇ ಜೀವನವೆಂಬಂತೆ ಇಲ್ಲದನ್ನು ಬಯಸುವುದು, ಆಗದೇ ಇರುವುದನ್ನು ಕಲ್ಪಿಸಿಕೊಳ್ಳುವುದೇ ಮಾನವನ ಸಹಜ ಗುಣ.
ಕನಸಿಗೂ ಜೀವನದ ವಾಸ್ತವಕ್ಕೂ ಸಾಮ್ಯತೆಗಳಿವೆ. ಕನಸುಗಳಂತೆ ಕೆಲವೊಂದು ಘಟನೆಗಳೂ ಕೂಡ ನಮಗರಿವಿಲ್ಲದಂತೆ ಬಂದು ಬಿಡುತ್ತವೆ. ಕೆಲವೊಂದು ಘಟನೆಗಳನ್ನು ಮರೆಯಬೇಕೆಂದೆನಿಸಿದರೂ ಮರೆಯಲಾಗದೆ ಮರಳಿ ಮರಳಿ ಕಾಡುತಿರುತ್ತವೆ. ಎಲ್ಲವೂ ಅನಿಶ್ಚಿತವಾಗಿಯೇ ಇರುತ್ತವೆ.
ಕಣ್ಣು ಮುಚ್ಚಿ ಕಣೋ ಕನಸುಗಳು ಸಾವಿರ. ಆದ್ರೆ ಕಣ್ಣು ತೆರೆದು ಕಾಣೋ ಕನಸೊಂದೆ. ಆ ಒಂದು ಕನಸಿಗೋಸ್ಕರ ಇಡೀ ಜೀವನದುದ್ದಗಲಕ್ಕೂ ಓಡುತ್ತಾ ಓಡುತ್ತಾ ಕೆಲವೊಬ್ಬರ ಕನಸುಗಳು ನನಸಾದರೆ, ಕನಸಿನ ಜತೆ ಮನಸುಗಳೂ ಚೂರಾಗುವುದು ಸಹಜ.
ಕನಸುಗಳು ಚೂರಾದಷ್ಟು ಬಾರಿ ಪುನಃ ಚಿಗುರೊಡೆಯುತ್ತವೆ. ಜೀವನದಲ್ಲಿ ಕನಸುಗಳಿಗೆಂದೂ ಕೊನೆಯಿಲ್ಲ ಹಾಗೆಯೇ ಅವುಗಳು ಕೊಡುವ ಉಲ್ಲಾಸ, ಚಡಪಡಿಕೆ, ನಿರೀಕ್ಷೆ, ಭರವಸೆ, ಹತಾಶೆ,ಹಾಗೂ ಕಣ್ಣೀರ ಧಾರೆಗೂ ಕೂಡ!
-ಪ್ರೇರಣಾ ಸುವರ್ಣ
ವಿ.ವಿ.ಕಾಲೇಜು ಮಂಗಳೂರು