Advertisement
ಅಂತಹ ಸಮಯವು ಹೆಚ್ಚಾಗಿ ನೆನಪಿನಲ್ಲಿ ಅಚ್ಚಾಗಿ ಉಳಿಯುತ್ತದೆ. ಅದರಲ್ಲಿ ಬಸ್ ಪ್ರಯಾಣವನ್ನು ಆನಂದ ಪಡುವ ಪ್ರಸಂಗಗಳು ಬಂದಿರುತ್ತವೆ. ಶಿಕ್ಷಣಕ್ಕಾಗಿ ಎಲ್ಲಿಂದಲೋ ಎಲ್ಲಿಗೋ ಬಸ್ ಮೂಲಕ ಪ್ರಯಾಣಿಸುವ ಪ್ರಸಂಗಗಳು ಬಹಳ ಸೋಜಿಗ. ಚಿರಸ್ಮರಣೀಯವಾಗಿ ನಿಲ್ಲುವಂತಹ ಸಂಗತಿಗಳಾಗಿರುತ್ತವೆ.
Related Articles
Advertisement
ಇಷ್ಟೂ ಮಾತ್ರವಲ್ಲದೆ ಅನೇಕ ವಿದ್ಯಾರ್ಥಿಗಳಿಗೆ ಪ್ರಕೃತಿಯ ಆಹ್ಲಾದಕ್ಕಾಗಿ ಕಿಟಕಿಯ ಬಳಿ ಜಾಗ ಬೇಕು, ಅದಕ್ಕಾಗಿ ಬಸ್ಸು ನಿಲ್ಲುವ ಮುಂಚೆ ಮಂಗಗಳಂತೆ ಹಾರುವ, ಹಿಂಬದಿಯ ಸೀಟು ಸಿಕ್ಕರೆ ಮನಸ್ಸು ಕುಣಿದಾಡುವ ಪ್ರಸಂಗವು ಬಂದಿರುತ್ತವೆ. ಇದರ ಜತೆ ಜತೆಗೆ ಕಿವಿಗೊಂದು ಇಂಪಾದ ಪದ್ಯವನ್ನು ಹಾಕಿಕೊಂಡು ಮನಸ್ಸನ್ನು ಮುದಗೊಳಿಸಿ ತನ್ಮಯತೆಯಿಂದ ತೇಲಾಡುವ ಅನುಭವಸ್ಥರನ್ನು ಕಾಣಬಹುದು.
ಇನ್ನು ಕಂಡೆಕ್ಟರ್ ವಿಷಯಕ್ಕೆ ಬರೋಣ, ಸಾಧರಣವಾಗಿ ದಿನನಿತ್ಯ ಒಂದೇ ಬಸ್ಸಿನಲ್ಲಿ ಪ್ರಯಾಣಿಸುವವರಿಗೆ ಕಂಡೆಕ್ಟರ್ ಪರಿಚಯವಾಗುವುದು ಉಂಟು, ಒಂದೋ ಜಗಳವಾಡಿ ಪರಿಚಯ ಇಲ್ಲವೊ ಕುಸಲಿನ ಮಾತಿನಿಂದಾಗಿರಬಹುದು. ಜಗಳ ಮಾಡಿಕೊಳ್ಳುವ ಸಂದರ್ಭವು ಬಂದಾಗ ಒಬ್ಬನಿಗಾಗಿ ಇತರ ಸ್ನೇಹಿತರು ಸೇರಿ ಹಬ್ಬ ಆಚರಿಸುವುದು ಇದೆ. ಚಾಲಕ ಲೇಟಾಗಿ ಬಂದರೆ ಕೊಪಿಸಿಕೊಳ್ಳುವ ಮನಸ್ಸುಗಳು ಹೆಚ್ಚಾಗಿರುತ್ತವೆ. ನಿಮಗೂ ಅನಿಸರಬಹುದು. ಹೀಗೆ ಹೇಳಲು ಹೊರಟರೆ ಇನ್ನೂ ಅನೇಕ ಚಿತ್ರ ವಿಚಿತ್ರ ಪ್ರಸಂಗಳಿವೆ. ಕೆಲವೊಂದು ನಿಮ್ಮ ಅನುಭವಕ್ಕೂ ಬಂದಿರಲೂ ಸಾಕು.
ಒಟ್ಟಾರೆಯಾಗಿ ವಿದ್ಯಾರ್ಥಿ ಜೀವನದ ಬಸ್ ಪ್ರಯಾಣವು ಒಂದು ತೆರನಾದ ಹೊಸ ಅನುಭವಗಳ ಬುತ್ತಿ, ಅನೇಕ ಹಾಸ್ಯ-ಗಂಭೀರತೆಗಳ ಪರಿಚಯ.
ಅಕ್ಷಯ್ ಕುಮಾರ್ ಎ., ಮಂಗಳೂರು ವಿವಿ