Advertisement
ಬೆಳಗಿನ ಜಾವ ಹಾಗೂ ಸಂಜೆಯ ವೇಳೆಯಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಲಿಕ್ಕೂ ಸಾಧ್ಯವಾಗಲ್ಲ, ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಈಗ ಕೊಳಚೆ ನೀರು ಕೆರೆಗೆ ಸೇರುತ್ತಿರುವುದರಿಂದ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿವೆ.ದನಕರು ಕುಡಿಯಲಿಕ್ಕೆ ಯೋಗ್ಯವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Related Articles
Advertisement
ಇದನ್ನೂ ಓದಿ:- ಇಶಾನ್ ಕಿಶನ್ ಓಪನರ್ ವಿವಾದ: ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಸ್ಪಷನೆ
ಅಧಿಕಾರಿಗಳೇ ಇತ್ತ ಗಮನ ಹರಿಸಿ: ಗ್ರಾಪಂಗೆ ಸೇರಿದ ಕೊಳವೆಬಾವಿಗಳು ಹೆಚ್ಚು ಇಲತೊರೆ ಕೆರೆಯಲ್ಲಿರು ವುದರಿಂದ ನೀರು ಕಲುಷಿತವಾಗುತ್ತಿದೆ. ದನಕರುಗಳಿಗೆ ಇದರಿಂದ ಸಾಕಷ್ಟು ತೊಂದರೆಗಳಾಗು ತ್ತಿದೆ. ಜನ ಇಂತಹ ನೀರನ್ನೇ ಕುಡಿಯುವ ಪರಿಸ್ಥಿತಿ ಬಂದೊದಗಿದೆ. ಏಳೆಂಟು ವರ್ಷದ ಹಿಂದೆ ಕೆರೆ ತುಂಬಿತ್ತು. ಈಗ ಉತ್ತಮ ನೀರು ಬಂದಿದೆ. ಇನ್ನಾ ದರೂ ಸಂಬಂಧಪಟ್ಟವರು ತ್ಯಾಜ್ಯ ನೀರನ್ನು ಕೆರೆಗೆ ಬಿಡಬಾರದು. ರಾಜಕಾಲುವೆಗಳ ಮೂಲಕ ನೀರನ್ನು ಬಿಟ್ಟಿರುತ್ತಾರೆ. ರಾತ್ರಿ ವೇಳೆಯಂತೂ ಹೆಚ್ಚು ಜೋರಾಗಿ ನೀರು ಹರಿಯುತ್ತದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕು ಎಂದು ಸ್ಥಳೀಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
“ಸಾರ್ವಜನಿಕರ ಮೌಖೀಕ ದೂರನ್ನು ಆಧರಿಸಿ ಹಾಲಿವುಡ್ ಟೌನ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಎಸ್‌ಟಿಪಿ ಪ್ಲಾಂಟ್ ನೀರನ್ನು ಅವರೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೊರಗೆ ಬಿಡುತ್ತಿಲ್ಲ. ಒಂದು ವೇಳೆ ಶುದ್ಧೀಕರಣ ಮಾಡದೇ ಹೊರಗೆ ಬಿಟ್ಟರೆ ನೊಟೀಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುತ್ತದೆ.” – ಆದರ್ಶ್, ಪಿಡಿಒ ಕನ್ನಮಂಗಲ ಗ್ರಾಪಂ.
“ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಿದ್ದು, ಸ್ಥಳ ಪರಿಶೀಲನೆ ನಡೆಸಿ ಮಳೆ ನೀರು ಹೊರತುಪಡಿಸಿ, ಹಾಲಿವುಡ್ ಟೌನ್‌ನಲ್ಲಿ ಉಪಯೋಗವಾಗುತ್ತಿರುವ ನೀರು ಶುದ್ಧೀಕರಿಸದೇ ಹೊರಗೆ ಬಿಡುತ್ತಿದ್ದರೆ ಅವರಿಗೆ ನೋಟಿಸ್ ಜಾರಿ ಮಾಡುವಂತೆ ಸೂಚನೆ ನೀಡಲಾಗಿದೆ.” – ಎಚ್.ಡಿ. ವಸಂತಕುಮಾರ್, ತಾಪಂ ಇಒ.
“ಹಾಲಿವುಡ್ ಟೌನ್ ಬಹುಮಹಡಿ ಕಟ್ಟಡಗಳಿಂದ ತ್ಯಾಜ್ಯ ನೀರು ಇಲತೊರೆ ಕೆರೆಗೆ ಬಿಡುತ್ತಿದ್ದಾರೆ. ಕೆರೆ ನೀರು ಕಲುಷಿತವಾಗುತ್ತಿದೆ. ಕುಡಿಯಲು ಯೋಗ್ಯವಾಗುತ್ತಿಲ್ಲ. ದನಕರುಗಳಿಗೂ ಇದರಿಂದ ಸಮಸ್ಯೆ ಎದುರಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು.” – ವೆಂಕಟೇಶ್, ಗ್ರಾಪಂ ಸದಸ್ಯ.