Advertisement

ಮೈಸೂರು ಸಯ್ಯಾಜಿ ರಾವ್ ರಸ್ತೆಯಲ್ಲಿ ಅನಾಮಧೇಯ ಸೂಟ್ ಕೇಸ್ ಪತ್ತೆ: ಬಿಗುವಿನ ವಾತಾವರಣ

03:34 PM Jun 16, 2020 | keerthan |

ಮೈಸೂರು: ನಗರದ ನ್ಯೂ ಸಯ್ಯಾಜಿ ರಾವ್ ರಸ್ತೆಯಲ್ಲಿ ಅನಾಮಧೇಯ ಸೂಟ್ ಕೇಸ್ ಒಂದು ಪತ್ತೆಯಾಗಿ ಕೆಲ ಕಾಲ ಜನರಲ್ಲಿ ಆತಂಕ ಸೃಷ್ಟಿಯಾದ ಘಟನೆ ಮಂಗಳವಾರ ಜರುಗಿದೆ.

Advertisement

ಅನುಮಾನಾಸ್ಪದ ನೀಲಿ ಬಣ್ಣದ ಟ್ರಾವೆಲರ್ ಸೂಟ್ ಕೇಸ್ ಪತ್ತೆಯಾದ ಹಿನ್ನೆಲೆ ಸ್ಥಳಕ್ಕೆ ಪೊಲೀಸರು ಹಾಗೂ ಬಾಂಬ್ ಪತ್ತೆದಳ ಆಗಮಿಸಿ ಪರಿಶೀಲಿಸಿದರು. ಬಳಿಕ ಅನಾಮಧೇಯ ಸೂಟ್ ಕೇಸನ್ನು ನಗರ ಪೊಲೀಸ್ ಮೈದಾನಕ್ಕೆ ಕೊಂಡೊಯ್ದರು.

ಕೆ.ಆರ್. ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದ್ದು, ಸೂಟ್ ಕೇಸ್ ಸುತ್ತ ಬ್ಯಾರಿಕೇಡ್ ಹಾಕಿ ಬಾಂಬ್ ಪತ್ತೆ ದಳ ತಪಾಸಣೆ ನಡೆಸುತ್ತಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಎರಡು ಕಡೆ ರಸ್ತೆ ಬಂದ್ ಸಾರ್ವಜನಿಕರು ಸುಳಿದಾಡದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next