Advertisement

ತಾರಕಕ್ಕೇರಿದ ಬಾಂಗ್ಲಾ –ಪಾಕ್‌ ಕದನ!

02:39 AM Mar 31, 2017 | Karthik A |

ಹೊಸದಿಲ್ಲಿ: ಬಾಂಗ್ಲಾದೇಶ ಹಾಗೂ ಪಾಕಿಸ್ಥಾನದ ನಡುವಿನ ಯುದ್ಧ ತಾರಕಕ್ಕೇರಿದೆ. ಪಾಕ್‌ ಸೈನಿಕರನ್ನು ಗುಂಡಿಕ್ಕಿ ಕೊಲ್ಲುತ್ತಿರುವ ಬಾಂಗ್ಲಾ ಪ್ರಜೆಗಳು ಸಮರ ಗೆದ್ದ ಗತ್ತಿನಲ್ಲಿದ್ದಾರೆ. ಬಾಂಗ್ಲಾದೇಶದ ವಿಮೋಚನೆ ಅವರ ಗುರಿ. ಆದರೆ ಅತ್ತ ಪಾಕ್‌ ಕೂಡ ದಂಡು ದಂಡಾಗಿ ಸೈನಿಕರನ್ನು ಕಳಿಸುತ್ತಲೇ ಇದೆ! ಆತಂಕಪಡುವ ಅಗತ್ಯವಿಲ್ಲ. ಏಕೆಂದರೆ ಈ ಎರಡೂ ನೆರೆ ರಾಷ್ಟ್ರಗಳ ನಡುವೆ ಸಮರ ನಡೆಯುತ್ತಿರುವುದು ಗಡಿಯಲ್ಲಲ್ಲ, ವೀಡಿಯೋ ಗೇಮ್‌ನಲ್ಲಿ! ‘ಹೀರೋಸ್‌ ಆಫ್ 71: ರಿಟಾಲಿಯೇಷನ್‌’ ಎಂಬ ವರ್ಚುವಲ್‌ ವೀಡಿಯೋ ಗೇಮ್‌ ಈಗ ಬಾಂಗ್ಲಾ ಮಾತ್ರವಲ್ಲದೆ ಹೊರದೇಶಗಳಲ್ಲೂ ವೈರಲ್‌ ಆಗಿದೆ. ಈ ಆಂಡ್ರಾಯ್ಡ ಗೇಮ್‌ ಈಗಾಗಲೇ ಸುಮಾರು 40 ಲಕ್ಷ ಬಾರಿ ಡೌನ್‌ಲೋಡ್‌ ಆಗಿದ್ದು, ಬಾಂಗ್ಲಾದೇಶ ಹೊರತುಪಡಿಸಿ ಹೊರದೇಶಗಳಲ್ಲೇ 25 ಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಆಗಿದೆ ಎಂದು ಅಲ್ಲಿನ ‘ದಿ ಡೈಲಿ ಸ್ಟಾರ್‌’ ಪತ್ರಿಕೆ ವರದಿ ಮಾಡಿದೆ.

Advertisement

1971ರಲ್ಲಿ ನಡೆದ ಬಾಂಗ್ಲಾ ವಿಮೋಚನಾ ಯುದ್ಧದ ಹಿನ್ನೆಲೆಯಲ್ಲಿ ರೂಪುಗೊಂಡಿರುವ ಈ ವೀಡಿಯೋ ಗೇಮ್‌, ಬಾಂಗ್ಲಾದಲ್ಲಿ ಹೆಚ್ಚು ಜನಪ್ರಿಯವಾಗಿದ್ದು, ಗೇಮ್‌ನಲ್ಲಿ ಪಾಕಿಸ್ತಾನದ ವೈರಿಗಳನ್ನು ಹೊಡೆದುರುಧಿಳಿಸುತ್ತಿರುವ ಅಲ್ಲಿನ ಪ್ರಜೆಗಳು, ಅಪ್ಪಟ ದೇಶಭಕ್ತರಂತೆ ಬೀಗುತ್ತಿದ್ದಾರೆ. ಪೂರ್ವ ಹಾಗೂ ಪಶ್ಚಿಮ ಪಾಕಿಸ್ಥಾನ ಎಂಬ ಬಣಗಳ ನಡುವೆ ಬಾಂಗ್ಲಾ ವಿಮೋಚನಾ ಯುದ್ಧ ನಡೆದಿತ್ತು. ಯುದ್ಧದಲ್ಲಿ ಗೆದ್ದ ಪೂರ್ವ ಪಡೆ, ಬಾಂಗ್ಲಾದೇಶ ಎಂಬ ಪ್ರತ್ಯೇಕ ರಾಷ್ಟ್ರ ರಚಿಸಿಕೊಂಡಿತ್ತು. ಈ ಯುದ್ಧ ಗೆಲ್ಲುವಲ್ಲಿ ಬಾಂಗ್ಲಾಗೆ ಭಾರತ ನೆರವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next