Advertisement
ಹವಾಮಾನ ಇಲಾಖೆಯ ಮುನ್ಸೂಚ ನೆಯಂತೆ ಜೂ. 11ರಿಂದ ಕರಾವಳಿ ಭಾಗದಲ್ಲಿ ಮುಂಗಾರು ಮತ್ತಷ್ಟು ಚುರುಕುಗೊಳ್ಳುವ ಸಾಧ್ಯತೆ ಇದ್ದು, ಉತ್ತಮ ಮಳೆಯಾಗಲಿದೆ. ಕಳೆದ ಕೆಲವು ದಿನಗಳ ಹಿಂದೆ ದಕ್ಷಿಣ ಕನ್ನಡದಲ್ಲಿ ಬಹುತೇಕ ಕಡೆ ಬಿಸಿಲು, ಮೋಡ ಮುಸುಕಿದ ವಾತಾವರಣವಿತ್ತು. ಕಳೆದ ವರ್ಷ ಮುಂಗಾರು ಅಪ್ಪಳಿಸಿದ ಬಳಿಕ ಕೆಲವು ದಿನಗಳ ಕಾಲ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗಿತ್ತು. ಆದರೆ ಈ ಬಾರಿ ಜೂ. 4ರಂದು ಕರಾವಳಿ ಭಾಗಕ್ಕೆ ಮುಂಗಾರು ಪ್ರವೇಶ ಪಡೆದಿದ್ದು, ಆ ದಿನ ಮಧ್ಯಾಹ್ನ ವೇಳೆ ಮಳೆಯಾಗಿತ್ತೇ ವಿನಾ ಬಳಿಕ ಮಳೆ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು.
ಕಳೆದ ಕೆಲವು ದಿನಗಳ ಹಿಂದೆ ದ.ಕ. ಜಿಲ್ಲೆಯಲ್ಲಿ ಮಳೆಯಾಗಿತ್ತು. ಇದೇ ಕಾರಣಕ್ಕೆ ಸುಮಾರು 2 ಡಿ.ಸೆ.ನಷ್ಟು ಇಳಿಕೆಗೊಂಡ ಗರಿಷ್ಠ ಉಷ್ಣಾಂಶ ಮತ್ತೆ ಏರಿಕೆಯಾಗಿದೆ. ಈ ಹಿಂದೆ 29.2 ಡಿ.ಸೆ.ನಷ್ಟು ದಾಖಲಾಗಿದ್ದ ಗರಿಷ್ಠ ಉಷ್ಣಾಂಶ ಇದೀಗ 31 ಡಿ.ಸೆ.ಗೆ ಏರಿಕೆಗೊಂಡಿದೆ. ಮುಂದಿನ ದಿನಗಳಲ್ಲಿ ಮಳೆಯಾದ ಬಳಿಕ ಮತ್ತೆ ಉಷ್ಣಾಂಶದಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ.
Related Articles
ಅರಬಿ ಸಮುದ್ರದಲ್ಲಿ ಸದ್ಯಕ್ಕೆ ಯಾವುದೇ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇಲ್ಲ. ಇತ್ತೀಚೆಗೆಯಷ್ಟೇ “ನಿಸರ್ಗ’ ಚಂಡಮಾರುತ ಕರಾವಳಿ ಭಾಗಕ್ಕೆ ಪರಿಣಾಮ ಬೀರಿದ್ದು, ಸದ್ಯದ ಮಾಹಿತಿಯ ಪ್ರಕಾರ ಆ ಭಾಗದಲ್ಲಿ ಯಾವುದೇ ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇಲ್ಲ. ಕಳೆದ ಎರಡು ವರ್ಷಗಳಲ್ಲಿ ಕರಾವಳಿ ಭಾಗಕ್ಕೆ ಓಖೀ, ಸಾಗರ್, ಮೆಕುನು, ಕ್ಯಾರ್, ವಾಯು, ಮಹಾ ಮತ್ತು ಇತ್ತೀಚೆಗೆ “ನಿಸರ್ಗ’ ಎಂಬ ಹೆಸರಿನ ಚಂಡಮಾರುತ ಕರಾವಳಿ ಮೇಲೆ ಪರಿಣಾಮ ಬೀರಿತ್ತು.
Advertisement
ಮಳೆ ಸಾಧ್ಯತೆಕರಾವಳಿ ಭಾಗಕ್ಕೆ ಒಂದು ವಾರದ ಹಿಂದೆ ಮುಂಗಾರು ಅಪ್ಪಳಿಸಿದ್ದು, ತುಸು ದುರ್ಬಲಗೊಂಡಿತ್ತು. ನಿಗರ್ಸ ಚಂಡಮಾರುತದ ಪರಿಣಾಮ ಮುಂಗಾರು ಮೇಲೆ ಬಿದ್ದಿತ್ತು. ಮಳೆ ತರುವ ಮೋಡಗಳ ಚಲನೆಯಿಂದಾಗಿ ಮಳೆ ಕಡಿಮೆಯಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಮುಂಗಾರು ಮತ್ತೆ ಪ್ರಬಲಗೊಳ್ಳಲಿದ್ದು, ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
-ಡಾ| ರಾಜೇಗೌಡ
ಬೆಂಗಳೂರು ಕೃಷಿ ವಿ.ವಿ. ಹವಾಮಾನ ವಿಜ್ಞಾನಿ