Advertisement

ಅಮೂಲ್‌, ಮದರ್‌ ಡೈರಿ ಹಾಲಿನ ಬೆಲೆ ಏರಿಕೆ; ಲೀಟರ್ ಗೆ 2 ರೂ.ಹೆಚ್ಚಳ

12:08 AM Oct 16, 2022 | Team Udayavani |

ಹೊಸದಿಲ್ಲಿ: ಅಮೂಲ್‌ ಸಂಸ್ಥೆಯು ತನ್ನ ಗೋಲ್ಡ್‌ ಹಾಲು ಹಾಗೂ ಎಮ್ಮೆಯ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಏರಿಕೆ ಮಾಡಿದೆ.

Advertisement

ಗುಜರಾತ್‌ ಹೊರತುಪಡಿಸಿ ಬೇರೆಲ್ಲ ಸ್ಥಳಗಳಿಗೆ ಈ ಬೆಲೆ ಏರಿಕೆ ಅನ್ವಯವಾಗಲಿದೆ ಎಂದು ಗುಜರಾತ್‌ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ತಿಳಿಸಿದೆ.

ಇದೇ ವೇಳೆ, ಮದರ್‌ ಡೈರಿ ಸಂಸ್ಥೆಯು ತನ್ನ ಫುಲ್ ಕ್ರೀಂ ಹಾಲು ಹಾಗೂ ಹಸುವಿನ ಹಾಲಿನ ಬೆಲೆಯನ್ನು ಲೀಟರ್‌ಗೆ 2 ರೂ. ಏರಿಸಿರುವುದಾಗಿ ಘೋಷಿಸಿದೆ.

ಇದರಿಂದಾಗಿ ಫುಲ್ ಕ್ರೀಂ ಹಾಲಿನ ದರ ಲೀಟರ್‌ಗೆ 63 ರೂ. ಹಾಗೂ ಹಸುವಿನ ಹಾಲಿನ ಬೆಲೆ ಲೀಟರ್‌ಗೆ 55 ರೂ. ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next