ಅಮೃತಸರ/ಚಂಡೀಗಢ: ಖಲಿಸ್ತಾನ ಪ್ರತ್ಯೇಕತಾವಾದಿ ನಾಯಕ ಅಮೃತ್‌ಪಾಲ್ ಸಿಂಗ್‌ನ ಪತ್ನಿ ಕಿರಣ್‌ದೀಪ್ ಕೌರ್‌ಳ ದೇಶ ತ್ಯಜಿಸುವ ಯತ್ನಕ್ಕೆ ತಡೆಯೊಡ್ಡಲಾಗಿದೆ. ಅಮೃತಸರದ ವಿಮಾನ ನಿಲ್ದಾಣದಲ್ಲಿ ಲಂಡನ್ ವಿಮಾನ ಏರಲು ಸಿದ್ಧತೆಯ ಹಂತದಲ್ಲಿ ಇರುವ ವೇಳೆಯಲ್ಲಿ ವಲಸೆ ವಿಭಾಗದ ಅಧಿಕಾರಿಗಳು ಮತ್ತು ಇತರ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದು ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿ, ಬಿಡುಗಡೆ ಮಾಡಿದ್ದಾರೆ. ಆಕೆ ಯುನೈಟೆಡ್ ಕಿಂಗ್‌ಡಮ್‌ನಲ್ಲಿರುವ ಭಾರತೀಯ ಮೂಲದ ಮಹಿಳೆ. ಫೆ.10ರಂದು ಅಮೃತ್‌ಪಾಲ್ ಸಿಂಗ್ ಮತ್ತು ಕೌರ್ ವಿವಾಹ ನಡೆದಿತ್ತು. ಆಕೆಯ ವಿರುದ್ಧ ಲುಕೌಟ್ ನೋಟಿಸ್ ಜಾರಿಗೊಳಿಸಲಾಗಿತ್ತು.
ಒಂದು ತಿಂಗಳು:
ಮತ್ತೂಂದೆಡೆ, ಖಲಿಸ್ತಾನಿ ನಾಯಕ ಅಮೃತ್‌ಪಾಲ್ ಸಿಂಗ್ ನಾಪತ್ತೆಯಾಗಿ ಮಾ.18ಕ್ಕೆ ಬರೋಬ್ಬರಿ ಒಂದು ತಿಂಗಳು ಪೂರ್ತಿಯಾಗಿದೆ. ಆತನನ್ನು ಸೆರೆ ಹಿಡಿಯಲು ಪಂಜಾಬ್ ಮತ್ತು ಹರ್ಯಾಣದ ಪೊಲೀಸರು ಯತ್ನಿಸುತ್ತಿದ್ದರೂ, ಯಶಸ್ಸು ಸಿಕ್ಕಿಲ್ಲ. ಆದರೆ, ವಿವಿಧ ಸ್ಥಳಗಳಲ್ಲಿ ಆತನ ಇದ್ದ ಬಗ್ಗೆ ಸಿಸಿಟಿವಿ ಕೆಮರಾಗಳಲ್ಲಿ ವಿಡಿಯೋ ದಾಖಲಾಗಿದೆ.