Advertisement
ಆರು ವರ್ಷಗಳ ಹಿಂದೆ ಆರು ಸೀಟರ್‌ಗಳ ಮಿನಿ ವಿಮಾನವನ್ನು ತನ್ನ ಮನೆಯ ಚಾವಣಿಯ ಮೇಲೆಯೇ ತಯಾರಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ 34 ವರ್ಷದ ಈ ಮಾಜಿ ಪೈಲಟ್‌ನ ಸಾಧನೆ ಮೆಚ್ಚಿರುವ ಮಹಾರಾಷ್ಟ್ರ ಸರಕಾರ, “ಮ್ಯಾಗ್ನೆಟಿಕ್ ಮಹಾರಾಷ್ಟ್ರ’ ಹೂಡಿಕೆದಾರರ ಸಮಾವೇಶದಲ್ಲಿ ಅಮೋಲ್ ಸ್ಥಾಪಿಸಿರುವ “ಥ್ರ್‌ಸ್ಟ್ ಏರ್‌ಕ್ರಾಫ್ಟ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಜತೆ 34 ಸಾವಿರ ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದೆ. ಇಷ್ಟೇ ಅಲ್ಲ, ಪಲ್ಗಾರ್ ಜಿಲ್ಲೆಯ ಕೆಳ್ವೆ ಪ್ರಾಂತ್ಯದಲ್ಲಿ 157 ಎಕರೆ ಭೂಮಿಯನ್ನು ಅಮೋಲ್ ಅವರ ಸಂಸ್ಥೆಗಾಗಿ ಮಂಜೂರು ಮಾಡಿದೆ.
Related Articles
ಜೆಟ್ ಏರ್‌ವೆàಸ್‌ನಲ್ಲಿ ಉಪ ಮುಖ್ಯ ಪೈಲಟ್ ಆಗಿ ಸೇವೆ ಸಲ್ಲಿಸುತ್ತಿದ್ದರೂ ಸ್ವಂತವಾಗಿ ವಿಮಾನ ನಿರ್ಮಾಣ ಮಾಡಬೇಕೆಂಬ ಕನಸು ಹೊಂದಿದ್ದ ಅಮೋಲ್ ಅವರು, ಈ ಪ್ರತಿಭೆ ಸಾಬೀತುಪಡಿಸಲು ತಾವಿದ್ದ ಮನೆಯನ್ನೇ ಮಾರಿದರು. ಅದರಿಂದ ಬಂದ ಹಣವನ್ನು ವಿಮಾನ ತಯಾರಿಕೆಗೆ ಬಳಸಿದ ಅವರು, ಕಂಡಿವಾಲಿ ಉಪನಗರದ ಅಪಾರ್ಟ್‌ಮೆಂಟ್‌ನಲ್ಲಿ ತಾವಿದ್ದ ಫ್ಲ್ಯಾಟ್ ಮೇಲಿನ ಸುಮಾರು 1,600 ಚದರಡಿ ಚಾವಣಿಯಲ್ಲಿ ತಮ್ಮ ಕನಸಿನ ವಿಮಾನ ನಿರ್ಮಿ ಸಿದರು. ಸುಮಾರು 4 ಕೋಟಿ ರೂ. ವೆಚ್ಚ ಮಾಡಿ, 6 ವರ್ಷಗಳಲ್ಲಿ ಏಕಾಂಗಿಯಾಗಿ, 6 ಸೀಟರ್‌ಗಳ, ಸುಮಾರು 13 ಸಾವಿರ ಕಿ.ಮೀ. ಎತ್ತರಕ್ಕೆ ಹಾರಬಲ್ಲ ಲಘು ವಿಮಾನ ನಿರ್ಮಿಸಿದರು.
Advertisement
ಆದರೆ, ಇದರ ನೋಂದಣಿಗೆ ಸರಕಾರಿ ಅಧಿಕಾರಿಗಳಿಂದ ಅಡೆ ತಡೆಗಳು ಬಂದವು. ಆಗಲೇ, ಇವರು ಪ್ರಧಾನಿ ಮೋದಿ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ರನ್ನು ಸಂಪರ್ಕಿಸಿದ್ದು. ಇವರ ಮಧ್ಯಪ್ರವೇಶದಿಂದಾಗಿ, ಅಮೋಲ್ ವಿಮಾನ ನೋಂದಣಿ ಸುಗಮವಾಯಿತಲ್ಲದೆ, ನಾಗರಿಕ ವಿಮಾನಯಾನ ಮಹಾ ನಿರ್ದೇ ಕರ ಕಚೇರಿ (ಡಿಜಿಸಿಎ) ಅಧಿಕಾರಿಗಳ ಮುಂದೆ ವಿಮಾನದ ಪ್ರಾತ್ಯ ಕ್ಷಿಕೆ ನೀಡಿದರು. ಇದಕ್ಕೆ ಡಿಜಿಸಿಎ ಒಪ್ಪಿಗೆಯೂ ದೊರೆಯಿತು.