Advertisement

ಕೊಹ್ಲಿಯನ್ನು ಕೆಣಕಲು ಹೋಗಬೇಡಿ; ಬೌಲರ್ ಗಳಿಗೆ ಎಚ್ಚರಿಸಿದ ಅಮಿತಾಭ್ ಬಚ್ಚನ್

09:35 AM Dec 08, 2019 | keerthan |

ಮುಂಬೈ: ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟಿ ಟ್ವೆಂಟಿ ಪಂದ್ಯದಲ್ಲಿ ಭಾರತದ ನಾಯಕ ವಿರಾಟ್ ಕೊಹ್ಲಿ ವಿರೋಚಿತ ಆಟವಾಡಿ ಭಾರತಕ್ಕೆ ಜಯ ತಂದಿತ್ತರು. ವಿಂಡೀಸ್ ನೀಡಿದ ಬೃಹತ್ ಮೊತ್ತವನ್ನು ಬೆನ್ನತ್ತಿದ ಭಾರತಕ್ಕೆ ಆಸರೆಯಾದ ವಿರಾಟ್ ಕೇವಲ 50 ಎಸೆತಗಳಲ್ಲಿ 94 ರನ್ ಬಾರಿಸಿ ಅಜೇಯರಾಗುಳಿದರು.

Advertisement

ಇದೇ ಪಂದ್ಯದಲ್ಲಿ ವಿಂಡೀಸ್ ನ ಕೆಸ್ರಿಕ್ ವಿಲಿಯಮ್ಸ್ ಓವರ್ ನಲ್ಲಿ 23 ರನ್ ಬಾರಿಸಿದ ಕೊಹ್ಲಿ, ವಿಲಿಯಮ್ಸ್ ವಿರುದ್ಧ ನೋಟ್ ಬುಕ್ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು.

ಈ ಸಂಭ್ರಮಾಚರಣೆಯ ಬಗ್ಗೆ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದು, ಕೊಹ್ಲಿಯನ್ನು ಕೆಣಕಬೇಡಿ ಎಂದಿದ್ದಾರೆ.

ವಿರಾಟ್ ಕೊಹ್ಲಿಯನ್ನು ಕೆಣಕಬೇಡಿ ಎಂದು ನಾನು ಎಷ್ಟು ಸಲ ಹೇಳಿದ್ದೇನೆ. ಆದರೆ ನೀವು ಕೇಳುವುದಿಲ್ಲ. ಈಗ ವಿರಾಟ್ ನಿಮಗೆ ಸರಿಯಾಗಿ ಉತ್ತರ ನೀಡಿದ್ಧಾನೆ. ವಿಂಡೀಸರ ಮುಖಗಳನ್ನು ನೊಡಿ ಎಂದು ಬಿಗ್ ಬಿ ಬಚ್ಚನ್ ಅವರು ‘ಅಮರ್ ಅಕ್ಬರ್ ಅಂತೋನಿ’ ಶೈಲಿಯಲ್ಲಿ ವಿಂಡೀಸ್ ಬೌಲರ್ ಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಅಮಿತಾಭ್ ಬಚ್ಚನ್ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ವಿರಾಟ್ ಕೊಹ್ಲಿ, ನಿಮ್ಮ ಈ ಡೈಲಾಗ್ ಇಷ್ಟವಾಯಿತು ಸರ್. ನೀವು ಯಾವಾಗಲೂ ನಮಗೆ ಸ್ಪೂರ್ತಿ ಎಂದಿದ್ದಾರೆ.

Advertisement

2017ರಲ್ಲಿ ವಿಂಡೀಸ್ ಸರಣಿಯಲ್ಲಿ ಕೊಹ್ಲಿ ವಿಕೆಟ್ ಪಡೆದ ಕೆಸ್ರಿಕ್ ವಿಲಿಯಮ್ಸ್ ನೋಟ್ ಬುಕ್ ಶೈಲಿಯಲ್ಲಿ ಸಂಭ್ರಮಾಚರಣೆ ಮಾಡಿದ್ದರು. ಇದಕ್ಕೆ ಈ ಸರಣಿಯಲ್ಲಿ ತಿರುಗೇಟು ನೀಡಿದ ಕೊಹ್ಲಿ ಹೈದರಾಬಾದ್ ಮೈದಾನದಲ್ಲಿ ಸಂಭ್ರಮಾರಣೆ ಮಾಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next