Advertisement

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

07:15 PM Apr 30, 2024 | Team Udayavani |

ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅತ್ಯಾಚಾರ ಪ್ರಕರಣವನ್ನು ವೈಯಕ್ತಿಕ ಎಂದಿರುವ ಗೃಹ ಸಚಿವ ಅಮಿತ ಶಾ ಅವರಿಗೆ ನಾಚಿಕೆಯಾಗಬೇಕು. ಕೂಡಲೇ ಈ ಹೇಳಿಕೆಯನ್ನು ಹಿಂಪಡೆದು ರಾಷ್ಟ್ರದ ಮಹಿಳೆಯರ ಕ್ಷಮೆ ಕೇಳಬೇಕು. ಈ ಘಟನೆಯು ದೇಶದ ಅತೀ ದೊಡ್ಡ ಅತ್ಯಾಚಾರ ಪ್ರಕರಣವಾಗಿದ್ದು, ರಾಕ್ಷಸ ಪ್ರಜ್ವಲ್ ಬೆನ್ನಿಗೆ ಇಡಿ ಬಿಜೆಪಿ ನಿಂತಿದೆ ಎಂದು ಎಐಸಿಸಿ ಸಾಮಾಜಿಕ ಜಾಲತಾಣದ ಅಧ್ಯಕ್ಷೆ ಸುಪ್ರಿಯಾ ಶ್ರಿನೇಟ್ ಆರೋಪಿಸಿದರು.

Advertisement

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ದೇಶದ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯದ ಕುರಿತು ಪ್ರಧಾನಿ ನರೇಂದ್ರ ಮೋದಿ ವಿರೋಧ ವ್ಯಕ್ತಪಡಿಸಿಲ್ಲ ಬದಲಾಗಿ ಅಂತಹವರ ನೆರವಿಗೆ ನಿಂತ ಉದಾಹರಣೆಗಳು ಹೆಚ್ಚಿವೆ. ಬಿಲ್ಕಿಸ್ ಬಾನು ಪ್ರಕಣದಲ್ಲಿ ಅಪರಾಧಿಗಳ ಬಿಡುಗಡೆ, ಅತ್ರಾಸ್, ಮಣಿಪುರದಲ್ಲಿ ಅತ್ಯಾಚಾರ ಪ್ರಕರಣದ ಬಗ್ಗೆ ತುಟಿ ಬಿಚ್ಚಲಿಲ್ಲ. ಇದೀಗ ಹಾಸನದ ಸಂಸದ ಪ್ರಜ್ವಲ ರೇವಣ್ಣನ ಬಹುದ ದೊಡ್ಡ ಅತ್ಯಾಚಾರದ ಪ್ರಕರಣದ ಬಗ್ಗೆ ಮಾತನಾಡುತ್ತಿಲ್ಲ. ಬದಲಾಗಿ ಇವನ ರಾಕ್ಷಸಿ ಕೃತ್ಯ ಗೊತ್ತಿದ್ದರೂ ಸಾವಿರಾರು ಕಿ.ಮೀ ದೂರದಿಂದ ಬಂದು ಅವನ ಪರವಾಗಿ ಮತಯಾಚನೆ ಮಾಡಿರುವುದು ನಿರ್ಲಜ್ಜತನ ಎಂದು ತೀವ್ರವಾಗಿ ಟೀಕಿಸಿದರು.

ಇತ್ತೀಚೆಗೆ ಪ್ರಿಯಾಂಕಾ ಅವರು ಮಗಳ ಭೇಟಿಗಾಗಿ ವಿದೇಶಕ್ಕೆ ಹೋಗಿದ್ದರು. ಇದನ್ನು ಗೃಹ ಸಚಿವರು ಭಾಷಣವೊಂದರಲ್ಲಿ ವ್ಯಂಗ್ಯವಾಗಿ ಹೇಳಿದ್ದರು. ಆದರೆ ಅತ್ಯಾಚಾರಿ ಪ್ರಜ್ವಲ ರೇವಣ್ಣ ದೇಶ ಬಿಟ್ಟು ಹೋಗುತ್ತಿರುವುದು ಗಮನಕ್ಕೆ ಬಂದಿರಲಿಲ್ಲವೆ. ಇಲ್ಲಿಂದ ಪರಾರಿಯಾಗಲು ಬಿಜೆಪಿ ಸಂಪೂರ್ಣ ಸಾಥ್ ನೀಡಿದ್ದು, ಸದಾ ಇವರು ಅತ್ಯಾಚಾರಿಗಳ ಪರ ಎಂಬುವುದನ್ನು ಸಾಬೀತು ಮಾಡಿದ್ದಾರೆ. ಇದೊಂದು ವೈಯಕ್ತಿಕ ಎಂದಿರುವ ಗೃಹ ಸಚಿವ ಅಮಿತ ಶಾ ಅವರಿಗೆ ನಾಚಿಕೆಯಾಗಬೇಕು. ಇದೇನಾ ನೀವು ಮಹಿಳೆಯರಿಗೆ ನೀಡುವ ಗೌರವ. ಈ ಸ್ಥಾನದಲ್ಲಿ ಮುಂದೊರೆಯಲು ನಿಮಗೆ ನೈತಿಕತೆಯಿಲ್ಲ ಎಂದು ಹರಿಹಾಯ್ದರು.

Advertisement

Udayavani is now on Telegram. Click here to join our channel and stay updated with the latest news.

Next