Advertisement

Ryugu ಕ್ಷುದ್ರಗ್ರಹದಲ್ಲಿ ಜೀವಚೈತನ್ಯ ಅಂಶ ಪತ್ತೆ! 20 ರೀತಿಯ ಅಮಿನೊ ಆ್ಯಸಿಡ್‌ಗಳು ಪತ್ತೆ

10:28 PM Jun 07, 2022 | Team Udayavani |

ನವದೆಹಲಿ: ಸೌರವ್ಯೂಹದಲ್ಲಿ ಬರುವ ಗ್ರಹಗಳ ಪೈಕಿ ನಮಗೆ ನಿಕಟ ಜ್ಞಾನವಿರುವುದು ಭೂಮಿಯ ಬಗ್ಗೆ ಮಾತ್ರ. ಅದೂ ಅಲ್ಪಸ್ವಲ್ಪವೆನ್ನದೇ ವಿಧಿಯಿಲ್ಲ!

Advertisement

ಇಂತಹ ಹೊತ್ತಿನಲ್ಲಿ ಜಪಾನಿ ಬಾಹ್ಯಾಕಾಶ ವಿಜ್ಞಾನಿಗಳು ಅಪೂರ್ವ ಶೋಧವೊಂದನ್ನು ಮಾಡಿದ್ದಾರೆ.

ಸೌರವ್ಯೂಹದಲ್ಲಿ ಬರುವ ಸಣ್ಣ ಆಕಾಶಕಾಯವೊಂದರಲ್ಲಿ 20 ರೀತಿಯ ಅಮಿನೊ ಆ್ಯಸಿಡ್‌ಗಳನ್ನು ಪತ್ತೆ ಮಾಡಿದ್ದಾರೆ. ಅಮಿನೊ ಆ್ಯಸಿಡ್‌ಗಳು ಮನುಷ್ಯನ ಬದುಕಿಗೆ ನೆರವಾಗುವ ಅಂಶಗಳು. ಇವುಗಳು ಭೂಮಿಯ ಹೊರತಾಗಿಯೂ ಬೇರೆ ಕಡೆ ಜೀವಿಗಳಿರುವ ಬಗ್ಗೆ ವಿಜ್ಞಾನಿಗಳಿಗೆ ಖಚಿತ ಸುಳಿವನ್ನು ನೀಡಿವೆ.

ಪತ್ತೆ ಮಾಡಿದ್ದು ಹೇಗೆ?:
2014ರಲ್ಲಿ ಜಪಾನಿನ ಬಾಹ್ಯಾಕಾಶ ವಿಜ್ಞಾನ ಸಂಸ್ಥೆ ಜಾಕ್ಸಾ, ಹಯಬುಸ 2 ಎಂಬ ನೌಕೆಯನ್ನು ಅಂತರಿಕ್ಷಕ್ಕೆ ಹಾರಿಬಿಟ್ಟಿತ್ತು. ಇದರ ಕೆಲಸವೇ ಗ್ರಹೇತರ ಆಕಾಶಕಾಯಗಳನ್ನು ಪತ್ತೆಹಚ್ಚಿ, ಅವುಗಳೊಳಗಿನ ರಚನೆಯನ್ನು ಅಧ್ಯಯನ ಮಾಡುವುದು. ಈಗ ಸಿಕ್ಕಿರುವ ಆಕಾಶಕಾಯಕ್ಕೆ ಜಪಾನಿ ವಿಜ್ಞಾನಿಗು ರ್ಯುಗು ಎಂದು ಹೆಸರಿಟ್ಟಿದ್ದಾರೆ.

ಅಮಿನೊ ಆ್ಯಸಿಡ್‌ ಮಹತ್ವ:
ಹಯಬುಸ 2 ಕಳುಹಿಸಿರುವ ಮಾದರಿಗಳಲ್ಲಿ 20 ರೀತಿಯ ಅಮಿನೊ ಆ್ಯಸಿಡ್‌ಗಳು ಸಿಕ್ಕಿವೆ. ಈ ಆ್ಯಸಿಡ್‌ಗಳು ಅತಿಸಣ್ಣ ಕಣಗಳು. ಇವುಗಳು ಒಗ್ಗೂಡಿ ಪ್ರೊಟೀನ್‌ಗಳು ರಚನೆಯಾಗುತ್ತವೆ. ಈ ಪ್ರೊಟೀನ್‌ಗಳು ಮನುಷ್ಯನ ಶರೀರಕ್ಕೆ ಅತಿಮುಖ್ಯ ಅಂಶಗಳು. ಆಹಾರವನ್ನು ಜೀರ್ಣ ಮಾಡುವುದಕ್ಕೆ, ಶರೀರದ ಬೆಳವಣಿಗೆಗೆ, ಜೀವಕೋಶಗಳನ್ನು ದುರಸ್ತಿ ಮಾಡುವುದಕ್ಕೆ ನೆರವು ನೀಡುವುದೇ ಅಮಿನೊ ಆ್ಯಸಿಡ್‌ಗಳು.

Advertisement

ವಿಜ್ಞಾನಿಗಳಿಗೆ ಸಿಕ್ಕ ಸುಳಿವೇನು?:
ರ್ಯುಗುವಿನಲ್ಲಿ ಅಮಿನೊ ಆಮ್ಲಗಳು ಪತ್ತೆಯಾಗಿರುವುದರಿಂದ ಭೂಮಿಯ ರಚನೆ ಬಗ್ಗೆ ವಿಜ್ಞಾನಿಗಳಿಗೆ ಒಂದು ಸುಳಿವು ಸಿಕ್ಕಿದಂತಾಗಿದೆ. ಸಾವಿರಾರು ಕೋಟಿ ವರ್ಷಗಳ ಹಿಂದೆ ಭೂಮಿ ಇನ್ನೂ ಶೈಶವಾವಸ್ಥೆಯಲ್ಲಿದ್ದಾಗ ಸಣ್ಣ ಆಕಾಶಕಾಯಗಳಿಂದಲೇ ಭೂಮಿಗೆ ಜೀವಚೈತನ್ಯಗಳು ಪೂರೈಕೆಯಾದವೇ ಎಂಬ ಪ್ರಶ್ನೆ ಹುಟ್ಟಿಕೊಂಡಿವೆ. ರುÂಗು ಸೂರ್ಯನನ್ನು ಸುತ್ತುತ್ತದೆ. ಇದರಲ್ಲಿ ಇಂಗಾಲ, ಸಾವಯವ ಅಂಶಗಳಿವೆ. ನೀರು ಭಾರೀ ಪ್ರಮಾಣದಲ್ಲಿದೆ. ಹಾಗಾಗಿ ಭೂಮಿಯ ಹುಟ್ಟು ಬೆಳವಣಿಗೆಗಳಿಗೂ ಒಂದು ಆಧಾರ ಇಲ್ಲಿ ಸಿಗುತ್ತದೆ.

 

Advertisement

Udayavani is now on Telegram. Click here to join our channel and stay updated with the latest news.

Next