ಬೀಜಿಂಗ್: ಅಮೆರಿಕದ ಸಂಸತ್ತಿನ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಗೆ ಭೇಟಿ ನೀಡಿದ ನಂತರ ಚೀನಾ ಮತ್ತು ಅಮೆರಿಕ ನಡುವೆ ಸಮರ ಭೀತಿ ಮೂಡಿಸಿರುವ ನಡುವೆಯೇ ತೈವಾನ್ ರಕ್ಷಣಾ ಸಚಿವಾಲಯ ಸಂಶೋಧನಾ ಮತ್ತು ಅಭಿವೃದ್ಧಿ ಘಟಕದ ಉಪ ಮುಖ್ಯಸ್ಥ ಔ ಯಾಂಗ್ ಲಿ ಹಸಿಂಗ್ ದಕ್ಷಿಣ ತೈವಾನ್ ನ ಹೋಟೆಲ್ ಕೋಣೆಯೊಂದರಲ್ಲಿ ಶವವಾಗಿ ಪತ್ತೆಯಾಗಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಭಾರತದ ಉಪ ರಾಷ್ಟ್ರಪತಿಯವರ ವೇತನ ಎಷ್ಟು? ಅವರಿಗಿರುವ ಸವಲತ್ತುಗಳೇನು?
ಸೆಂಟ್ರಲ್ ನ್ಯೂಸ್ ಏಜೆನ್ಸಿ (ಸಿಎನ್ ಎ) ಮಾಹಿತಿ ಪ್ರಕಾರ, ಔ ಯಾಂಗ್ ಸಾವಿನ ಕಾರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಔ ಯಾಂಗ್ ಅವರು ವಿವಿಧ ಕ್ಷಿಪಣಿ ಉತ್ಪಾದನಾ ಯೋಜನೆಗಳ ಮೇಲ್ವಿಚಾರಣೆಗಾಗಿ ಈ ವರ್ಷದ ಆರಂಭದಲ್ಲಿ ಸೇನಾ ಒಡೆತನದ ನ್ಯಾಷನಲ್ ಚುಂಗ್ ಶಾನ್ ಇನ್ಸ್ ಟಿಟ್ಯೂಟ್ ಆಫ್ ಸೈನ್ಸ್ ಆ್ಯಂಡ್ ಟೆಕ್ನಾಲಜಿಯ ಉಪ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡಿದ್ದರು ಎಂದು ಸಿಎನ್ ಎ ವಿವರಿಸಿದೆ.
ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ರಕ್ಷಣೆಯ ಹಿನ್ನೆಲೆಯಲ್ಲಿ ಚೀನಾದ ಪ್ರಬಲ ವಿರೋಧದ ನಡುವೆಯೂ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ತೈವಾನ್ ಗೆ ಭೇಟಿ ನೀಡಿದ್ದರು.
ಈ ಘಟನೆಯ ನಂತರ ಚೀನಾ ತೈವಾನ್ ನತ್ತ ಯುದ್ಧ ಟ್ಯಾಂಕರ್, ಮಿಸೈಲ್ಸ್, ಸಬ್ ಮೆರೈನ್ಸ್ ಗಳನ್ನು ರವಾನಿಸಿ, ರಾಕೆಟ್ ದಾಳಿ ನಡೆಸಿದೆ. ಮತ್ತೊಂದೆಡೆ ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಶುಕ್ರವಾರ ಘೋಷಿಸಿತ್ತು.
ಇತ್ತೀಚೆಗೆ ತನ್ನ ಪ್ರಬಲ ವಿರೋಧದ ನಡುವೆಯೂ ತೈವಾನ್ ಗೆ ಭೇಟಿ ನೀಡಿದ್ದ ಅಮೆರಿಕ ಸಂಸತ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಮತ್ತು ಅವರ ಕುಟುಂಬಕ್ಕೆ ತೈವಾನ್ ಗೆ ಯಾವತ್ತೂ ಭೇಟಿ ನೀಡಬಾರದೆಂದು ಚೀನಾ ನಿಷೇಧ ಹೇರಿದೆ.