ಅಮೇಠಿ: ಉತ್ತರ ಪ್ರದೇಶದಲ್ಲಿ ಎರಡನೇ ಹಂತದ ಮೂರು ದಿನಗಳ ಲೋಕಸಭಾ ಚುನಾವಣಾ ಪ್ರಚಾರಾಭಿಯಾನದ ಅಂಗವಾಗಿ ಇದೀಗ ಅಮೇಠಿ ಕ್ಷೇತ್ರದತ್ತ ಬರುತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ” ಫ್ರಾಡ್ ” ಎಂದು ಕರೆಯುವ ವ್ಯಂಗ್ಯಚಿತ್ರದ ಪೋಸ್ಟರ್‌ಗಳು ಈಗ ನಗರದ ವಿವಿಧೆಡೆಗಳಲ್ಲಿ ರಾರಾಜಿಸುತ್ತಿವೆ.
“ಕ್ಯಾ ಖೂಬ್ ಲಗ್‌ತೀ ಹೋ, kyo ಪಾಂಚ್ ಸಾಲ್ ಬಾದ್ ಹೀ ಅಮೇಠಿ ಮೇ ದಿಕ್ತೀ ಹೋ’ ಎಂದು ಈ ಪೋಸ್ಟರ್‌ಗಳಲ್ಲಿ ಪ್ರಿಯಾಂಕಾ ಳನು ಪ್ರಶ್ನಿಸಲಾಗಿದೆ.
ಇನ್ನೊಂದು ಪೋಸ್ಟರ್‌ನಲ್ಲಿ ಹೀಗೆ ಹೇಳಲಾಗಿದೆ : 2014 ಮೇ ಮಹೀನೇಮೆ ಬಹುತ್ ಕಿಯಾ ಥಾ ವಾದಾ, ಪಾಂಚ್ ಸಾಲ್ ಬಾದ್ kyo ಲೇಕೇ ಆಯೀ ಹೊ ಫಿರ್ ಅಮೇಠಿ ಕೋ ಚಲ್‌ನೇ ಕಾ ಇರಾದಾ. 60 ಸಾಲೋಂ ಕಾ ಹಿಸಾಬ್ ದೋ.
ಪ್ರಿಯಾಂಕಾ ಅವರೇ, ಐದು ವರ್ಷಗಳಿಗೊಮ್ಮೆ ಮಾತ್ರವೇ ಅಮೇಠಿಗೆ ಬರುವಿರಿ ಏಕೆ ? ನಮ್ಮನ್ನು ಮೂರ್ಖರನ್ನಾಗಿ ಮಾಡುವುದಕ್ಕಾಗಿಯೇ ? 2014 ಮೇ ತಿಂಗಳಲ್ಲಿ ಬಹಳಷ್ಟು ಆಶ್ವಾಸನೆ ನೀಡಿದ್ದೀರಿ. ಐದು ವರ್ಷಗಳ ಬಳಿಕ ಇದೀಗ ಪುನಃ ಇಲ್ಲಿಗೆ ಬಂದಿದ್ದೀರಿ; ಅಮೇಠಿಯ ಜನರನ್ನು ಮೂರ್ಖರನ್ನಾಗಿ ಮಾಡುವುದಕ್ಕಾಗಿಯೇ ? ಎಂದು ಈ ಪೋಸ್ಟರ್‌ಗಳಲ್ಲಿ ಪ್ರಿಯಾಂಕಾಗೆ ಪ್ರಶ್ನಿಸಲಾಗಿದೆ.
ಕೆಲವು ಪೋಸ್ಟರ್‌ಗಳಲ್ಲಿ ಪ್ರಿಯಾಂಕಾ ಚುನಾವಣಾ ಪ್ರಚಾರದ ವೇಳೆ ಮಾತ್ರವೇ ಸೀರೆ ಉಡುವುದನ್ನು ಲೇವಡಿ ಮಾಡಲಾಗಿದೆ. ಇಂತಹ ತಂತ್ರ ಕೆಲಸ ಮಾಡದು ಎಂಬ ಎಚ್ಚರಿಕೆಯನ್ನು ನೀಡಲಾಗಿದೆ.
ಸಹೋದರ ಮತ್ತು ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿಯಾದ ಬಳಿಕ ರಾಹುಲ್ ಅವರ ಅಮೇಠಿ ಕ್ಷೇತ್ರದಲ್ಲಿ ಪ್ರಚಾರಾಭಿಯಾನ ಕೈಗೊಂಡಿರುವ ಪ್ರಿಯಾಂಕಾ, ಇಲ್ಲಿಂದು ತನ್ನ ತಾಯಿ ಸೋನಿಯಾ ಗಾಂಧಿಯವರ ರಾಯ್ ಬರೇಲಿ ಕ್ಷೇತ್ರಕ್ಕೆ ಪ್ರಚಾರಾರ್ಥವಾಗಿ ಹೋಗಲಿದ್ದಾರೆ. ಶುಕ್ರವಾರ ದಿಲ್ಲಿಗೆ ಮರಳುವ ಮೊದಲು ಆಕೆ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ.