ಆಕ್ರೋಶಗೊಂಡು ಲ್ಯಾರಿಯತ್ತ ನುಗ್ಗಿದ ಪರಿಣಾಮ ನ್ಯಾಯಾಧೀಶರು ವಿಚಾರಣೆ ನಿಲ್ಲಿಸುವ ನಿರ್ಧಾರ ತೆಗೆದುಕೊಂಡರು.
Advertisement
ಭಾವುಕವಾಗಿದ್ದ ಮ್ಯಾಡಿಸನ್ ಮತ್ತು ಲಾರೆನ್ ಮಾಗ್ರೆವ್ಸ್ ತಂದೆ ರ್‍ಯಾಂಡಲ್, ನಿಮ್ಮ ಮಕ್ಕಳಿಗೆ ಹೀಗಾಗಿದ್ದರೆ ನೀವೇನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು. ಅಷ್ಟಲ್ಲದೇ ಅವರನ್ನು ಬಿಗಿಯಾಗಿ ಹಿಡಿದುಕೊಂಡಿದ್ದ ಪೊಲೀಸರತ್ತಲೂ ಕಿಡಿಕಾರಿದರು. ಈ ವೇಳೆ ಅವರು ನ್ಯಾಯಾಧೀಶರಿಗೆ ಮನವಿ ಮಾಡಿ, ಲ್ಯಾರಿಯನ್ನು ಇಟ್ಟಿರುವ ಬಂದೀಖಾನೆಯಲ್ಲಿ 5 ನಿಮಿಷ ಇರಲು ಅವಕಾಶಕೊಡಿ ಸಾಕು ಎಂದು ಕೇಳಿಕೊಂಡರು. ಆದರೆ ಇದಕ್ಕೆ ನ್ಯಾಯಾಧೀಶರು ಒಪ್ಪಲಿಲ್ಲ. ಈ ವೇಳೆ ಇಡೀ ಆವರಣದಲ್ಲಿ ಭಿನ್ನ ಭಿನ್ನ ಉದ್ಗಾರಗಳು ಕೇಳಿಬಂದವು.