Advertisement

ಪ್ರಧಾನಿ ವಿಮಾನಕ್ಕೆ ಅಮೆರಿಕದ ರಕ್ಷಣೆ

12:30 AM Feb 08, 2019 | Team Udayavani |

ವಾಷಿಂಗ್ಟನ್‌: ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಿಸುವ ವಿಮಾನಗಳಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣೆ ವ್ಯವಸ್ಥೆ ಒದಗಿಸಲು ಅಮೆರಿಕ ಸಮ್ಮತಿ ನೀಡಿದೆ. 1300 ಕೋಟಿ ರೂ. ವೆಚ್ಚದಲ್ಲಿ ಈ ಶಸ್ತ್ರಾಸ್ತ್ರಗಳನ್ನು ಭಾರತ ಖರೀದಿಸಲಿದೆ.

Advertisement

ಇದರಿಂದ ಅಮೆರಿಕದ ಅಧ್ಯಕ್ಷರು ಪ್ರಯಾಣಿಸುವ ಏರ್‌ಫೋರ್ಸ್‌ ಒನ್‌ಗೆ ಸಮಾನವಾದ ರಕ್ಷಣಾ ವ್ಯವಸ್ಥೆಯನ್ನು ಏರ್‌ ಇಂಡಿಯಾ ಒನ್‌ ಕೂಡ ಪಡೆಯಲಿದೆ. ಇದನ್ನು ಬೋಯಿಂಗ್‌ 777 ವಿಮಾನಕ್ಕೆ ಅಳವಡಿಸಲಾಗುತ್ತದೆ. ಇದಕ್ಕೆಂದೇ 2 ಬೋಯಿಂಗ್‌ 777 ಇಆರ್‌ಗಳನ್ನು ಸರಕಾರ ಖರೀದಿಸಲಿದೆ. ಈ ಹಿಂದೆ ಪ್ರಧಾನಿ ಪ್ರಯಾಣಿಸುವ ವಿಮಾನಗಳು ಸಾಮಾನ್ಯ ವಾಣಿಜ್ಯ ಉದ್ದೇಶದ್ದಾಗಿರುತ್ತಿತ್ತು. ಆದರೆ ಈ ವಿಮಾನಗಳನ್ನು ಪ್ರಧಾನಿ ಹಾಗೂ ರಾಷ್ಟ್ರಪತಿ ಪ್ರಯಾಣಕ್ಕೆ ಸೀಮಿತಗೊಳಿಸಲಾಗುತ್ತದೆ. ಕ್ಷಿಪಣಿ ರಕ್ಷಣೆ ವ್ಯವಸ್ಥೆಯು ಸಂಪೂರ್ಣ ಸ್ವಯಂಚಾಲಿತವಾಗಿರಲಿದ್ದು, ಕ್ಷಿಪಣಿ ಗುರುತಿಸಲು ಲೇಸರ್‌ ವ್ಯವಸ್ಥೆಯನ್ನು ಹೊಂದಿದೆ. ವಿಮಾನದ ನಿರ್ದಿಷ್ಟ ಶ್ರೇಣಿಯಲ್ಲಿ ಕ್ಷಿಪಣಿ ಕಂಡುಬಂದಲ್ಲಿ ತತ್‌ಕ್ಷಣವೇ ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮಥ್ಯ ಹೊಂದಿದೆ.
 

Advertisement

Udayavani is now on Telegram. Click here to join our channel and stay updated with the latest news.

Next