Advertisement

ಅಮೆರಿಕದ ಟೆನಿಸಿಗ ಫ್ರಾನ್ಸೆಸ್‌ ಟಿಯಾಫೊಗೆ ಕೋವಿಡ್‌

10:57 PM Jul 05, 2020 | Sriram |

ಅಟ್ಲಾಂಟಾ: ಅಮೆರಿಕದ ಟೆನಿಸಿಗ ಪ್ರಾನ್ಸೆಸ್‌ ಟಿಯಾಫೊ ಕೋವಿಡ್‌ ಸೋಂಕಿಗೆ ಒಳಗಾಗಿದ್ದಾರೆ. “ಆಲ್‌ ಅಮೆರಿಕನ್‌ ಟೀಮ್‌ ಕಪ್‌ ಟೆನಿಸ್‌ ಟೂರ್ನಿ’ಯಲ್ಲಿ ಆಡುವಾಗ ಅವರಲ್ಲಿ ಪಾಸಿಟಿವ್‌ ಕಂಡುಬಂತು. ಕೂಡಲೇ ಕೂಟದಿಂದ ಹಿಂದೆ ಸರಿದರು.

Advertisement

ವಾರಾಂತ್ಯದ ಈ ಕೂಟದಲ್ಲಿ ಅಮೆರಿಕದ 8 ಮಂದಿ ಅಗ್ರ ಆಟಗಾರರು ಪಾಲ್ಗೊಂಡಿದ್ದರು. ಶನಿವಾರ ಫ್ರಾನ್ಸೆಸ್‌ ಟಿಯಾಫೊ ಮತ್ತು ಟೆನ್ನಿಸ್‌ ಸ್ಯಾಂಡ್‌ ಗೆನ್‌ ನಡುವೆ ಮುಖಾಮುಖಿ ನಡೆಯಬೇಕಿತ್ತು.

ಶುಕ್ರವಾರದ ಪಂದ್ಯದಲ್ಲಿ ಸ್ಯಾಮ್‌ ಕ್ವೆರ್ರಿ ವಿರುದ್ಧ ಟಿಯಾಫೊ ಜಯ ಸಾಧಿಸಿದ್ದರು. ಈ ಪಂದ್ಯದ ಬಳಿಕ ಪರೀಕ್ಷಿಸಿದಾಗ ಅವರಲ್ಲಿ ಕೋವಿಡ್‌ ಪಾಸಿಟಿವ್‌ ಇರುವುದು ಪತ್ತೆಯಾಯಿತು. ಟಿಯಾಫೋ ಬದಲು ಕ್ರಿಸ್ಟೋಫ‌ರ್‌ ಯುಬ್ಯಾಂಕ್ಸ್‌ ಅವರನ್ನು ಸೇರಿಸಿಕೊಳ್ಳಲಾಯಿತು.

ಒಂದು ವಾರದ ಹಿಂದೆ ಫ್ಲೋರಿಡಾದಲ್ಲಿ ಪರೀಕ್ಷಿಸಿದಾಗ ನೆಗೆಟಿವ್‌ ಫ‌ಲಿತಾಂಶ ಬಂದಿತ್ತು. ಈಗ ಪಾಸಿಟಿವ್‌ ಕಾಣಿಸಿಕೊಂಡಿದೆ ಎಂಬುದಾಗಿ ವಿಶ್ವ ರ್‍ಯಾಂಕಿಂಗ್‌ನಲ್ಲಿ 81ನೇ ಸ್ಥಾನದಲ್ಲಿರುವ 22 ವರ್ಷದ ಟಿಯಾಫೊ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next