ಶುಭಾ ಪೂಂಜಾ ನಾಯಕಿ ಯಾಗಿರುವ “ಅಂಬುಜಾ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದೆ. ಇತ್ತೀಚೆಗಷ್ಟೇ ಟೀಸರ್ ಮೂಲಕ ಭರವಸೆ ಮೂಡಿಸಿದ್ದ ಚಿತ್ರತಂಡ ಈಗ ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಿದೆ.
ಅದು “ಲಾಲಿ ಹಾಡು’. ಸಾಮಾನ್ಯವಾಗಿ “ಲಾಲಿ ಹಾಡು…’ ಎಂದಾಕ್ಷಣ ತಾಯಿ ತನ್ನ ಮಗುವಿಗೆ ಹಾಡುವ ಹಾಡಾಗಿರುತ್ತದೆ. ಆದರೆ, “Ambuja ,Kannada Movie,ಶುಭಾ ಪೂಂಜಾ,ಅಂಬುಜಾ,udayavani Digital,Udayavani Online’ ಚಿತ್ರತಂಡ ಮಾತ್ರ ಮಗುವಿನಿಂದ ತಾಯಿಗೆ ಲಾಲಿ ಹಾಡು ಹಾಡಿಸಿದೆ.
ಚಿತ್ರತಂಡ ಹೇಳುವಂತೆ ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಮಗುವಿನಿಂದ ತಾಯಿಗೆ “ಲಾಲಿ ಹಾಡು’ ಬಂದಿರೋದು “ಅಂಬುಜಾ’ ದಲ್ಲಿ ಮಾತ್ರ. ಇತ್ತೀಚೆಗೆ ಬಿಡುಗಡೆಯಾಗಿರುವ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗು ತ್ತಿದೆ. ಅನೇಕರು ರೀಲ್ಸ್ ಮಾಡಿ, ಆ ಮೂಲಕ ಹಾಡಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಹಾಡನ್ನು ಕಾಶೀನಾಥ್ ಡಿ.ಎಂ ಬರೆದಿದ್ದು, ಬೇಬಿ ಆಕಾಂಕ್ಷಾ ಹಾಡಿದ್ದಾರೆ. ಈ ಚಿತ್ರವನ್ನು ಕಾಶೀನಾಥ್ ಡಿ.ಎಂ ನಿರ್ಮಿಸಿದ್ದು, ಶ್ರೀನಿ ಹನುಮಂತರಾಜು ನಿರ್ದೇಶನ ಮಾಡಿದ್ದಾರೆ.
ಇನ್ನು, “ಅಂಬುಜಾ’ ಚಿತ್ರದ ಹೈಲೈಟ್ ಏನು ಎಂದು ನೀವು ಕೇಳಬಹುದು. ಅದಕ್ಕೆ ಉತ್ತರ ಒಂದು ಹೊಸ ವಿಚಾರ ಎಂಬುದು ಚಿತ್ರತಂಡದ ಮಾತು.
Related Articles
ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಶ್ರೀನಿ, “ಚಿತ್ರದಲ್ಲಿ ಒಂದು ಹೊಸ ವಿಚಾರವನ್ನು ಹೇಳಿದ್ದೇವೆ. ಚಿತ್ರದ ಕಂಟೆಂಟ್ ತುಂಬಾ ಹೊಸದಾಗಿದೆ. ತುಂಬಾ ಫ್ರೆಶ್ ಆಗಿರುವ ಕಂಟೆಂಟ್ ಇದೆ. ಈವರೆಗೆ ಎಲ್ಲೂ ಬಾರದಿರುವ ವಿಚಾರವನ್ನು ಹೇಳಿದ್ದೇವೆ. ಈ ಘಟನೆ ಬೆಳಕಿಗೆ ಬಂದಿದ್ದೇ 2020ರಲ್ಲಿ. ಆ ಘಟನೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಇಷ್ಟು ದಿನ ಮಾಡಿದ ಚಿತ್ರೀಕರಣ ನನಗೆ ತುಂಬಾ ಖುಷಿಕೊಟ್ಟಿದೆ’ ಎನ್ನುವುದು ನಿರ್ದೇಶಕ ಶ್ರೀನಿ ಮಾತು.
ನಿರ್ಮಾಪಕರ ಸಿನಿಮಾ ಪ್ರೀತಿ ಬಗ್ಗೆ ಮಾತನಾಡುವ ಶ್ರೀನಿ, “ಇವತ್ತು ಸಿನಿಮಾ ಇಷ್ಟೊಂದು ಚೆನ್ನಾಗಿ ಮೂಡಿಬರುತ್ತಿದೆ ಎಂದರೆ ಅದಕ್ಕೆ ಕಾರಣ ನಿರ್ಮಾಪಕರ ಸಿನಿಮಾ ಪ್ರೀತಿ. ಬಜೆಟ್‌ನಲ್ಲಿ ಸ್ವಲ್ಪ ಆಚೀಚೆ ಆದರೂ ಯಾವುದೇ ಬೇಸರ ಮಾಡಿಕೊಳ್ಳದೇ, ಸಿನಿಮಾ ಚೆನ್ನಾಗಿ ಬರಲು ಶ್ರಮಿಸುತ್ತಿದ್ದಾರೆ’ ಎನ್ನುತ್ತಾರೆ.
ಶುಭಾ ಪೂಂಜಾ, ರಜನಿ, ಕಾಮಿಡಿಕಿಲಾಡಿ ಗೋವಿಂದೇಗೌಡ, ಪದ್ಮಜಾ ರಾವ್, ದೀಪಕ್ ಸುಬ್ರಮಣ್ಯ, ನಿಶಾ ಹೆಗ್ಡೆ, ಬೇಬಿ ಆಕಾಂಕ್ಷ, ಶರಣಯ್ಯ, ಸಂದೇಶ್ ಶೆಟ್ಟಿ, ಜಗದೀಶ್ ಹಲ್ಕುಡೆ “ಧರಣಿ ಮಂಡಲ ತಾರಾಗಣದಲ್ಲಿದ್ದಾರೆ.