Advertisement

ಮೊದಲ ಬಾರಿಗೆ ಅಮೆರಿಕದಲ್ಲಿ ತೃತೀಯ ಲಿಂಗಿಗೆ ಗಲ್ಲು ಶಿಕ್ಷೆ

06:55 PM Jan 04, 2023 | Team Udayavani |

ವಾಷಿಂಗ್ಟನ್‌: ಅಮೆರಿಕದಲ್ಲಿ ಮೊದಲ ಬಾರಿಗೆ ತೃತೀಯ ಲಿಂಗಿ ಆ್ಯಂಬರ್‌ ಮೆಕ್‌ಲಾಗಿನ್‌ ಎಂಬಾಕೆಗೆ ಮರಣ ದಂಡನೆ ವಿಧಿಸಲಾಗಿದೆ. 2003ರಲ್ಲಿ ಆಕೆಯ ಸ್ನೇಹಿತೆಯನ್ನು ಕೊಲೆ ಮಾಡಿ, ಮೃತದೇಹವನ್ನು ಮಿಸ್ಸಿಸಿಪ್ಪಿ ನದಿಯಲ್ಲಿ ಎಸೆದಿದ್ದಳು ಎಂದು ಆರೋಪಿಲಾಗಿತ್ತು. ಸದರಿ ಪ್ರಕರಣದಲ್ಲಿ ಆಕೆಯನ್ನು ಪೊಲೀಸರು ಬಂಧಿಸಿದ್ದರು. ವಿಷದ ಇಂಜೆಕ್ಷನ್‌ ನೀಡುವ ಮೂಲಕ ಮರಣ ದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ ಎಂದು ಮಿಸ್ಸೋರಿ ಪ್ರಾಂತ್ಯದ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಗಂಭೀರ ಅಪರಾಧವನ್ನು ಎಸಗಿದ ತೃತೀಯ ಲಿಂಗಿ ಪರ ನ್ಯಾಯವಾದಿ ಮಿಸ್ಸೋರಿ ಪ್ರಾಂತ್ಯದ ಗವರ್ನರ್‌ ಮೈಕ್‌ ಪಾರ್ಸನ್‌ ಅವರಿಗೆ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಬೇಕು ಎಂದು ಕೋರಿಕೆ ಸಲ್ಲಿಸಿದ್ದರೂ, ತಿರಸ್ಕೃತಗೊಂಡಿತ್ತು. ಜತೆಗೆ ಅಮೆರಿಕದ ಸಂಸತ್‌ ಸದಸ್ಯರಾಗಿರುವ ಕಾರಿ ಬುಷ್‌ ಮತ್ತು ಇಮ್ಯಾನ್ಯುವೆಲ್‌ ಕ್ಲೆವರ್‌ ಕೂಡ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next