ಬೆಂಗಳೂರು: ಉಡುಪಿಯ ಮಲ್ಪೆ ಬೀಜ್‌ನಲ್ಲಿ ಅಂಬರ್‌ಗ್ರೀಸ್(ತಿಮಿಂಗಿಲದ ವಾಂತಿ) ಗಟ್ಟಿಯನ್ನು ಸಂಗ್ರಹಿಸಿ ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಎಸ್.ಜೆ.ಪಾರ್ಕ್ ಠಾಣೆಪೊಲೀಸರು ಬಂಧಿಸಿದ್ದಾರೆ.
ಇಬ್ಬರು ಆರೋಪಿಗಳನ್ನು ಎಸ್.ಜೆ.ಪಾರ್ಕ್‌ನಲ್ಲಿರುವ ಲಾಡ್ಜ್ವೊಂದರಲ್ಲಿ ಬಂಧಿಸಿದ್ದು,ಅವರ ಮಾಹಿತಿ ಮೇರೆಗೆ ಇತರೆ ಇಬ್ಬರು ಆರೋಪಿಗಳನ್ನು ಹೊಸಕೋಟೆಯಲ್ಲಿ ಬಂಧಿಸಲಾಗಿದೆ. ನಾಲ್ವರು ಆರೋಪಿಗಳಿಂದ20ಕೋಟಿ ಮೌಲ್ಯದ ಒಟ್ಟು20ಕೆ.ಜಿ. ಅಂಬರ್‌ಗ್ರೀಸ್‌ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಬಂಧಿತರ ಪೈಕಿ ಒಬ್ಬ ಮೆಕ್ಯಾನಿಕ್, ಮತ್ತೂಬ್ಬಕಟ್ಟಡ ನಿರ್ಮಾಣದ ಮೇಸಿŒಯಾಗಿದ್ದಾನೆ. ಇತರೆಇಬ್ಬರು ಸಣ್ಣಪುಟ್ಟಕೆಲಸ ಮಾಡಿಕೊಂಡಿದ್ದರು. ಈ ಪೈಕಿಒಬ್ಬ ಮಂಗಳೂರು ಕಡೆಯವರಿಗೆ ಮೀನುಹಿಡಿಯಲು ಬಲೆಯನ್ನು ಮಾರಾಟ ಮಾಡುತ್ತಿದ್ದ. ಈವೇಳೆ ಪರಿಚಯವಾದ ವ್ಯಕ್ತಿಯೊಬ್ಬನಿಂದ ಅಂಬರ್‌ಗ್ರೀಸ್ ಪಡೆದಿದ್ದಾಗಿ ಹೇಳಿಕೆ ನೀಡಿದ್ದಾನೆ.
ತನಿಖೆಮುಂದುವರಿದಿದೆ ಎಂದು ಪೊಲೀಸರು ಹೇಳಿದರು.ಅಂಬರ್‌ಗ್ರೀಸ್ ಸಮುದ್ರಗಳಲ್ಲಿ ತಿಮಿಂಗಿಲಪ್ರಾಣಿಯ ವಾಂತಿ ಅಥವಾ ವೀರ್ಯ ಆಗಿದ್ದು, ಅದನ್ನುಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸುಗಂಧ ದ್ರವ್ಯಗಳತಯಾರಿಕೆಯಲ್ಲಿ ಬಳಸುತ್ತಾರೆ. ಹೀಗಾಗಿ ವಿದೇಶಗಳಲ್ಲಿ ಈ ವಸ್ತುವಿಗೆ ಭಾರೀ ಬೇಡಿಕೆ ಇದೆ. ಆರೋಪಿಗಳು ಉಡುಪಿಯ ಮಲ್ಪೆ ಬೀಚ್‌ನಲ್ಲಿ ಅಂಬರ್‌ಗ್ರಿಸ್‌ಗಟ್ಟಿಗಳನ್ನು ಸಂಗ್ರಹಿಸಿದ್ದರು.
ಸುಲಭವಾಗಿ ಹಣಗಳಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ ಮಾಡಿ ಹಣಸಂಪಾದಿಸಲು ಯತ್ನಿಸಿದ ªರು.ಆರೋಪಿಗಳು ಮಂಗಳವಾರ ಎಸ್.ಜೆ.ಪಾರ್ಕ್‌ಠಾಣಾ ವ್ಯಾಪ್ತಿಯ ಎನ್.ಆರ್ ರಸ್ತೆಯಲ್ಲಿರುವ ಲಾಡ್ಜ್ನಲ್ಲಿ ಅಂಬರ್‌ಗ್ರೀಸ್ ಗಟ್ಟಿ ಇಟ್ಟುಕೊಂಡು ಮಾರಾಟಕ್ಕೆಮುಂದಾಗಿದ್ದರು.
ಈ ಮಾಹಿತಿ ಮೇರೆಗೆ ಪೊಲೀಸರುದಾಳಿ ನಡೆಸಿ, ಎರಡುವರೆ ಕೆ.ಜಿ. ಅಂಬರ್‌ಗ್ರೀಸ್‌ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಯಿತು.ಆರೋಪಿಗಳನ್ನುಹೆಚ್ಚಿನ ವಿಚಾರಣೆಗೆ ಇನ್ನಿಬ್ಬರು ಆರೋಪಿಗಳ ಬಗ್ಗೆಬಾಯ್ಬಿಟ್ಟಿದ್ದರು. ಹೊಸಕೋಟೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ, 17.5 ಕೆ.ಜಿಯ ಅಂಬರ್‌ಗ್ರೀಸ್ ಜಪ್ತಿಮಾಡಲಾಯಿತು ಎಂದು ಪೊಲೀಸರು ಹೇಳಿದರು.