Advertisement

ಮೀಸಲಾತಿಯಿಂದ ಬದಲಾವಣೆ ಅಸಾಧ್ಯ: ದಿನೇಶ್‌ ಅಮೀನ್‌ ಮಟ್ಟು

01:55 AM Dec 24, 2018 | Karthik A |

ಉಡುಪಿ: ಮೀಸಲಾತಿಯಿಂದ ಆರ್ಥಿಕ ಸಮಾನತೆಯಾಗಬಹುದೇ ಹೊರತು ಸಾಮಾಜಿಕ ತಾರತಮ್ಯ ಹೋಲಾಡಿಸಲು ಸಾಧ್ಯವಿಲ್ಲ ಎಂದು ಚಿಂತಕ ದಿನೇಶ್‌ ಅಮೀನ್‌ ಮಟ್ಟು ಅಭಿಪ್ರಾಯಪಟ್ಟರು. ರವಿವಾರ ಬನ್ನಂಜೆ ನಾರಾಯಣಗುರು ಕಲ್ಯಾಣಮಂಟಪದಲ್ಲಿ ಅಂಬೇಡ್ಕರ್‌ ಯುವಸೇನೆ ಉಡುಪಿ ಇದರ ಲಾಂಛನ ಬಿಡುಗಡೆ, ಬ್ಲಡ್‌ಬ್ಯಾಂಕ್‌ ಉದ್ಘಾಟನೆ, ಸಾಧಕರಿಗೆ ಸಮ್ಮಾನ ಮತ್ತು ಸಾಂಸ್ಕೃತಿಕ ವೈವಿಧ್ಯಮಯವನ್ನೊಳಗೊಂಡ ‘ಅಂಬೇಡ್ಕರ್‌ ಯುವಜನೋತ್ಸವ 2018’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಮೀಸಲಾತಿಯನ್ನು ಜಾರಿಗೆ ತಂದಿರುವುದು ಜಾತಿ ಬಲಪಡಿಸುವುದಕ್ಕಲ್ಲ, ಬದಲಾಗಿ ಜಾತಿ ವ್ಯವಸ್ಥೆಯನ್ನು ನಾಶಪಡಿಸುವುದಕ್ಕಾಗಿ. ಕಣ್ಣಿಗೆ ಕಾಣುವ ಅಸ್ಪೃಶ್ಯತೆಯಿಂದಲೂ ಮನಸ್ಸಿನ ಒಳಗಿರುವ ಅಸ್ಪೃಶ್ಯತೆ ಅಪಾಯಕಾರಿ. ಖಾಸಗೀಕರಣದಿಂದ ಮೀಸಲಾತಿಗೆ ಪೆಟ್ಟು ಬೀಳುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಕೊಟ್ಟರೆ ಮೀಸಲಾತಿ ಬೇಕಾಗಿಲ್ಲ ಎಂದು ದಿನೇಶ್‌ ಅಮೀನ್‌ ಮಟ್ಟು ಹೇಳಿದರು.

ಸಾಮಾಜಿಕ ಬದಲಾವಣೆಗೆ ಜನಜಾಗೃತಿಯ ಕುಲುಮೆ ಸದಾ ಉರಿಯುತ್ತಿರಬೇಕು. ಅಂಬೇಡ್ಕರ್‌ ಅವರ ಹೆಸರಿನಲ್ಲಿ ಸಂಘಟನೆಗಳನ್ನು ಸ್ಥಾಪಿಸಿದಾಗ ಅವರ ಆಶಯಗಳ ಖಚಿತತೆ ಸಂಘಟನೆಯವರಿಗೆ ಇರುತ್ತದೆ. ಸಂಘಟನೆಗಳು ತುಂಬಾ ಇರಬಾರದು ಎಂದು ಬಯಸುವುದು ಮೂರ್ಖತನ ಎಂದು ಅವರು ಹೇಳಿದರು.

ಬ್ಲಡ್‌ ಬ್ಯಾಂಕ್‌ನ್ನು 72 ಬಾರಿ ರಕ್ತದಾನ ಮಾಡಿರುವ ಮಜುನಾಥ್‌ ಕಿನ್ನಿಮೂಲ್ಕಿ ಅವರು ಉದ್ಘಾಟಿಸಿದರು. ಅಂಬೇಡ್ಕರ್‌ ಯುವಸೇನೆಯ ಅಧ್ಯಕ್ಷ ಹರೀಶ್‌ ಸಾಲ್ಯಾನ್‌ ಮಲ್ಪೆ, ಪತ್ರಕರ್ತ ಬಿ.ಆರ್‌.ರಂಗಸ್ವಾಮಿ, ಮುಖಂಡರಾದ ರಾಧಾ ತೊಟ್ಟಂ, ಶಶಿಕಲಾ ಪಾಲನ್‌ ತೊಟ್ಟಂ, ಅನಿಲ್‌ ಅಂಬಲಪಾಡಿ, ದಿನೇಶ್‌ ಮೂಡುಬೆಟ್ಟು, ಸಂಪತ್‌ ಗುಜ್ಜರಬೆಟ್ಟು, ರಮೇಶ್‌ ಮಾಬೆನ್‌ ಅಮ್ಮುಂಜೆ, ಮಂಜುನಾಥ ಕಪ್ಪೆಟ್ಟು ಉಪಸ್ಥಿತರಿದ್ದರು. ಜಯ ಸಾಲ್ಯಾನ್‌ ಪಾಳೆಕಟ್ಟೆ ಸ್ವಾಗತಿಸಿದರು. ರೋಹಿತ್‌ ಉಳ್ಳಾಲ್‌ ಕಾರ್ಯಕ್ರಮ ನಿರ್ವಹಿಸಿದರು. ಕಪ್ಪೆಟ್ಟಿನಿಂದ ಬ್ರಹ್ಮಗಿರಿ-ಕೆಎಂಮಾರ್ಗ ಮೂಲಕ ಅಂಬೇಡ್ಕರ್‌ ಜಾಥಾ ನಡೆಯಿತು. 

Advertisement

Udayavani is now on Telegram. Click here to join our channel and stay updated with the latest news.

Next