ಚಿಕ್ಕಬಳ್ಳಾಪುರ: ಕಠಿಣ ಪರಿಶ್ರಮದ ಮೂಲಕ ಪುಸ್ತಕಗಳನ್ನು ಓದಿ ದೇಶದ ಸಮಸ್ತ ಶೋಷಿತ ಸಮುದಾಯಗಳ ದನಿಯಾಗಿ ಸಂವಿಧಾನದ ಜೊತೆಗೆ ಹಲವು ಶ್ರೇಷ್ಠ ಕೊಡುಗೆ ನೀಡಿದವರು ಡಾ.ಬಿ.ಆರ್.ಅಂಬೇಡ್ಕರ್ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ಶಿಶು ಸಾಹಿತ್ಯ) ಪುರಸ್ಕೃತ ಸಾಹಿತಿ ಟಿ.ಎಸ್.ನಾಗರಾಜಶೆಟ್ಟಿ ಅಭಿಪ್ರಾಯಪಟ್ಟರು.
ನಗರ ಹೊರವಲಯದ ಕೆ.ವೆಂಕಟಪತೆಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಓದು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾದವರು, ಶೋಷಿತರ ಗಟ್ಟಿ ದನಿ ಆದ ಅಂಬೇಡ್ಕರ್,ಮಹಾನ್ ಮಾನವತಾವಾದಿ ಮಾತ್ರವಲ್ಲದೆ, ಶ್ರೇಷ್ಠ ಚಿಂತಕರಾಗಿದ್ದರು ಎಂದು ಹೇಳಿದರು.
ಸ್ವಾಭಿಮಾನದ ಕಿಚ್ಚು ಹಚ್ಚಿದವರು: ದೇಶದ ಮಹಾನ್ ಸಾಧಕರಲ್ಲಿ ಅಂಬೇಡ್ಕರ್ ಅವರ ಚಿಂತನೆ,ವಿಚಾರಧಾರೆ ವಿದ್ಯಾರ್ಥಿ, ಯುವಜನರಿಗೆ ಸ್ಫೂರ್ತಿ ಆಗಬೇಕು. ತಳಸಮುದಾಯಗಳಲ್ಲಿ ಸ್ವಾಭಿಮಾನದಕಿಚ್ಚು ಹಚ್ಚಿದ ಅವರು, ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ಶೋಷಣೆಯಿಂದ ಬಿಡುಗಡೆ ಆಗುವ ಮಾರ್ಗ ತೋರಿದರು ಎಂದು ತಿಳಿಸಿದರು. ಸಾಹಿತ್ಯ ಶುದ್ಧ ಮಾನವ ದೀಕ್ಷೆ ಕೊಡುತ್ತೆ: ಸಾಹಿತ್ಯ ಮಾನವೀಯತೆ ಬಿತ್ತುತ್ತದೆ. ಅಲ್ಲದೆ, ಮನಸನ್ನುಉದಾತ್ತಗೊಳಿಸುತ್ತದೆ. ಇಂದು ವಿಜ್ಞಾನ ಬದಲಿ ಹೃದಯ ಜೋಡಿಸುವ ಮಟ್ಟಿಗೆ ಅಭಿವೃದ್ಧಿ ಆಗಿದೆ.ಆದರೆ, ಸಾಹಿತ್ಯ ಇರುವ ಹೃದಯ ಬದಲಿಸುವಚೈತನ್ಯ ಶಕ್ತಿ ಹೊಂದಿದೆ. ಶುದ್ಧ ಮಾನವ ದೀಕ್ಷೆಯನ್ನುಕೊಡುವುದೇ ಸಾಹಿತ್ಯದ ನಿಜವಾದ ಕೆಲಸ ಎಂದು ಹೇಳಿದರು.
ಗಂಭೀರ ಚಿಂತನೆಗೆ ಮುಂದಾಗಿ: ಅಸಾಮಾನ್ಯ ಜನರ ಅಸಾಧಾರಣ ಅನುಭವವೇ ಸಾಹಿತ್ಯವಾಗಿದ್ದು,ಸಾವಿರಾರು ವರ್ಷಗಳ ಸುದೀರ್ಘ ಪರಂಪರೆಯಿರುವ ಕನ್ನಡ ಸಾಹಿತ್ಯ ಕೃತಿಗಳಅಧ್ಯಯನ ಮತ್ತು ಅವುಗಳ ಕುರಿತು ಗಂಭೀರ ಚಿಂತನೆ ಮಾಡಲುವಿದ್ಯಾರ್ಥಿ, ಯುವಜನರು ಮುಂದಾಗಬೇಕು ಎಂದು ಕರೆ ನೀಡಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ ಬದುಕು, ಬರಹ, ಸಾಧನೆ ಮತ್ತು ಹೋರಾಟಗಳ ಕುರಿತು ಕನ್ನಡಉಪನ್ಯಾಸಕ ಎನ್.ಚಂದ್ರಶೇಖರ್ ಮಾತನಾಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕನಿರ್ದೇಶಕ ಡಿ.ಎಂ.ರವಿಕುಮಾರ್ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಅಂಬೇಡ್ಕರ್ ಬಗ್ಗೆ ಗೀತ ಗಾಯನ: ಅಂಬೇಡ್ಕರ್ ಓದು ಕಾರ್ಯಕ್ರಮದ ಅಂಗವಾಗಿ ಕಾಲೇಜಿನವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ ಸ್ಪರ್ಧೆಏರ್ಪಡಿಸಲಾಗಿತ್ತು. ವಿಜೇತ ವಿದ್ಯಾರ್ಥಿಗಳಿಗೆ ಇದೇವೇಳೆ ಬಹುಮಾನ ನೀಡಲಾಯಿತು. ಗಾಯಕಜನ್ನಘಟ್ಟ ಕೃಷ್ಣಮೂರ್ತಿ ಅವರಿಂದ ಅಂಬೇಡ್ಕರ್‌ಅವರ ಕುರಿತು ಗೀತ, ಜಾಗೃತಿ ಗೀತೆಗಳ ಗಾಯನ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನಪ್ರಾಂಶುಪಾಲರಾದ ಡಾ.ಪಿ.ಎನ್.ಶೇಖರ್‌ವಹಿಸಿದ್ದರು. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಸಿ.ಜಿ.ಗೋವಿಂದರಾಜು,ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯ ಶಂಕರಪ್ಪ, ನಿವೃತ್ತ ಆರೋಗ್ಯಾ ಕಾರಿಡಾ.ವೆಂಕಟಾಚಲಪತಿ, ಕಿರುತೆರೆ ಕಲಾವಿದ ಮತ್ತು ಸಾಹಿತಿ ನೊಣವಿನಕೆರೆ ರಾಮಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು.