Advertisement
ನಗರದ ನ್ಯೂ ಇಂಗ್ಲೀಷ್ ಶಾಲೆ ಆವರಣದಲ್ಲಿ ನಡೆದ ಗೋಕಾಕ ಪಂಚಮಸಾಲಿ 2ಎ ಮೀಸಲಾತಿ ಹಕ್ಕೊತ್ತಾಯ ಸಮಾವೇಶದಲ್ಲಿ ಶ್ರೀಗಳು ಮಾತನಾಡಿ, ಹತ್ತು ಲಕ್ಷ ಜನರನ್ನ ಸೇರಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ಮಾಡಿದ್ರೂ ಸರ್ಕಾರದ ಕಿವಿ ಕೇಳಲಿಲ್ಲ. ಮುಖ್ಯಮಂತ್ರಿ ನಿವಾಸದ ಎದುರು ಹೋರಾಟ ಮಾಡಿದ್ರೂ ಮೀಸಲಾತಿ ಕೊಡಲಿಲ್ಲ. ಕೊನೆಯದಾಗಿ ಡಿ.12ರಂದು ಬೆಂಗಳೂರಿನಲ್ಲಿ ಇಪ್ಪತ್ತೈದು ಲಕ್ಷ ಜನರನ್ನ ಸೇರಿಸಿ ಮಾಡು ಇಲ್ಲವೇ ಮಡಿ ಎನ್ನುವಂತೆ ಹೋರಾಟ ಮಾಡುತ್ತೇವೆ ಎಂದರು.
Related Articles
Advertisement
ವಾಲ್ಮೀಕಿ ಸಮುದಾಯ, ಪರಿಶಿಷ್ಟ ಸಮಾಜಕ್ಕೆ ಮೀಸಲಾತಿ ಬೇಕು ಎಂದು ವಿಧಾನಸಭೆಯಲ್ಲಿ ಕೇಳಿದ್ದೆ. ನಾನು ಕೇವಲ ಪಂಚಮಸಾಲಿ ಸಮಾಜದ ಬಗ್ಗೆ ಮಾತನಾಡಿಲ್ಲ. ಎಲ್ಲ ಸಮಾಜದ ಜನರ ವಿಚಾರ ಮಾತನಾಡಿದೀನಿ. ನೀವೆಂದು ಮಾತನಾಡಿದ್ದೀರಿ ಎಂದು ಪ್ರಶ್ನಿಸಿ, ಯಮಕನಮರಡಿ ಮತಕ್ಷೇತ್ರದಲ್ಲಿ ಜನರಲ್ ಇದ್ದರೆ ನಾನೇ ಬಂದ್ ನಿಲ್ತಿàನಿ ಅಲ್ಲೇ ಎಂದು ಸವಾಲು ಹಾಕಿದರು.
ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ಗೋಕಾಕನಲ್ಲಿ ಸಮಾವೇಶ ಮಾಡುವಾಗ ಬಹಳಷ್ಟು ವಿಘ್ನ ಎದುರಾಯಿತು. ನಾವು ಸಂಘಟಿತರಾದ್ರೆ ಉಳಿದವರಿಗೆ ಹೊಟ್ಟೆ ಕಿಚ್ಚು ಏಕೆ? ನಾನು ರಾಜ್ಯಸಭಾ ಸದಸ್ಯ. ನನಗೇನು ಶಾಸಕನಾಗಬೇಕಿಲ್ಲ. ರಾಜಕಾರಣ ಯಾರ ಅಪ್ಪನ ಸ್ವತ್ತಲ್ಲ ಎಂದು ಜಾರಕಿಹೋಳಿ ಸಹೋದರರ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದರು.
ನಮ್ಮ ನಮ್ಮಲ್ಲಿ ಒಳ ಜಗಳ ಸರಿಯೇ? ಎನ್ನುವುದನ್ನು ಪರಾಮರ್ಶೆ ಮಾಡಿಕೊಳ್ಳಬೇಕಿದೆ. ನಾವು ಯಾರ ಗುಲಾಮರಲ್ಲ. ನಾನು ರಾಜ್ಯಸಭಾ ಸದಸ್ಯನಾದ ನಂತರ ನನ್ನ ಹತ್ತಿರ ಜನ ಹೆದರಿ ಬರುತ್ತಿಲ್ಲ. ನಮ್ಮ ಜನರು ಮುಂದಿನ ದಿನದಲ್ಲಿ ರಾಜಕೀಯ ನಿರ್ಣಯ ಮಾಡಿ, ನನ್ನ ಜೊತೆಗೆ ನಿಲ್ಲಬೇಕು ಎಂದರು.
ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮಾತನಾಡಿ, ಮೀಸಲಾತಿ ಸಿಗುವವರೆಗೂ ನಾವು ಶ್ರಮಿಸುವುದಿಲ್ಲ. ನಮ್ಮನ್ನ ಅಶಕ್ತರು, ದುರ್ಬಲರೆಂದು ಭಾವಿಸಿ ನಮ್ಮ ಸಹನೆ ಪರೀಕ್ಷೆ ಮಾಡಬೇಡಿ. ಮೀಸಲಾತಿಗಾಗಿ ಎಷ್ಟಂತಾ ಹೋರಾಟ ಮಾಡಬೇಕು. ನಿಸ್ವಾರ್ಥತೆಯಿಂದ ಸ್ವಾಮೀಜಿ ಹೋರಾಟ ಮಾಡುತ್ತಿದ್ದಾರೆ. ಬೇರೆ ಯಾರಿಗಾದರೂ ನಾವು ತೊಂದರೆ ಕೊಟ್ಟಿದ್ದೇವಾ. ಬೇರೆ ಸಮಾಜದವರನ್ನೇ ನಾವು ನಮ್ಮವರು ಅಂತಾ ಹೇಳೆ¤ವಿ. ಮುಖ್ಯಮಂತ್ರಿಗಳೇ ಸರ್ ನೀವು ಕೂಡ ನಮ್ಮ ಸಮಾಜದವರು. ನೀವೇ ಮೀಸಲಾತಿ ಕೊಡದಿದ್ರೆ ಇನ್ಯಾರು ಬಂದು ಕೊಡ್ತಾರೆ ಎಂದು ಕೇಳಿದರು.
ಇದಕ್ಕೂ ಮುಂಚೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ನ್ಯೂ ಇಂಗ್ಲೀಷ ಶಾಲೆ ಆವರಣದಲ್ಲಿ ನಿರ್ಮಿಸಿದ ವೇದಿಕೆಯವರೆಗೆ ಪಂಚಮಸಾಲಿ ಸಮಾಜ ಬಾಂಧವರಿಂದ ಮೆರವಣಿಗೆ ಮಾಡಲಾಯಿತು.
ವೇದಿಕೆಯ ಮೇಲೆ ಮಾಜಿ ಸಚಿವ ವಿನಯ ಕುಲಕರ್ಣಿ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಎಚ್ ಎಸ್ ಶಿವಶಂಕರ. ಶಶಿಕಾಂತ ನಾಯಿಕ, ಆರ್ ಕೆ ಪಾಟೀಲ, ನಿಂಗಪ್ಪ ಪಿರೋಜಿ ಸೇರಿದಂತೆ ಅನೇಕರು ಇದ್ದರು.