Advertisement

ಅಂಬೇಡ್ಕರ್ ಭವನ ನನ್ನ ಅಭಿಲಾಷೆ: ಶಾಸಕ

04:47 PM Feb 09, 2021 | Team Udayavani |

ಕುಣಿಗಲ್‌: ತಾಲೂಕು ಕೇಂದ್ರ ಕುಣಿಗಲ್‌ನಲ್ಲಿಕನಿಷ್ಠ 5 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಡಾ.ಬಿ.ಆರ್‌.ಅಂಬೇಡ್ಕರ್‌ ಭವನ ನಿರ್ಮಿಸುವುದು ನನ್ನ ಬಹುದಿನದ ಅಭಿಲಾಷೆಯಾಗಿದೆ. ಹೀಗಾಗಿ  ಕಟ್ಟಡ ನಿರ್ಮಾಣಕ್ಕೆ ಆತುರ ಬೇಡ ಎಂದು ಶಾಸಕ ಡಾ.ಎಚ್‌.ಡಿ.ರಂಗನಾಥ್‌ ದಲಿತ ಮುಖಂಡರಿಗೆ ಸಲಹೆ ನೀಡಿದರು.

Advertisement

ಮೊದಲ ಕಂತು 1.5 ಕೋಟಿ ಬಿಡುಗಡೆ ಆಗಿತ್ತು: ಪಟ್ಟಣದ ಸಪ್ತಗಿರಿ ಆಸ್ಪತ್ರೆ ಪಕ್ಕದಲ್ಲಿ ನಿರ್ಮಿಸಲಾಗಿದ್ದ ಡಾ. ಬಿ.ಆರ್‌.ಅಂಬೇಡ್ಕರ್‌ ಭವನ ಶಿಥಿಲಗೊಂಡ ಕಾರಣ ನೂತನವಾಗಿ  ನಿರ್ಮಿಸಲು ಭವನ ಕೆಡವಿ   ಎರಡು ವರ್ಷ ಕಳೆ ದಿತ್ತು. ಇದರ ಬಗ್ಗೆ ತಾಲೂಕು ಆಡಳಿತ ಕ್ರಮ ಕೈಗೊಂಡಿಲ್ಲ ಎಂದು ಪ.ಜಾತಿ, ಪ.ಪಂಗಡದ ಹಿತರಕ್ಷಣಾ ಸಭೆಯಲ್ಲಿ ದಲಿತ ಮುಖಂಡರು ಆರೋಪಿಸಿ ಸಭೆಯನ್ನು ಬಹಿ ಷ್ಕರಿಸಿದರು. ಈ ಹಿನ್ನೆಲೆಯಲ್ಲಿ ಸೋಮವಾರ ಇಲ್ಲಿನ ತಾಪಂ ಸಭಾಂಗಣದಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ಸಭೆಯಲ್ಲಿ ಮಾತನಾಡಿದರು.

ಪ್ರತಿಭಟನೆ ಎಚ್ಚರಿಕೆ: ದೂರವಾಣಿ ಮೂಲಕ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಅಂಬೇಡ್ಕರ್‌ ಭವನ ನಿರ್ಮಾಣ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಾ. ಮಂಜೂರಾಗಿದ್ದ 1.50 ಕೋಟಿ ರೂ. ಹಣ ಏತಕ್ಕೆ ವಾಪಸ್‌Õ ಪಡೆದಿದ್ದೀರಾ ಎಂದು  ತರಾಟೆ ತೆಗೆದುಕೊಂಡರು. ವಾರದ ಒಳಗೆ ಈ ಸಂಬಂಧ ಕ್ರಮ ಕೈಗೊಳ್ಳದಿದ್ದಲ್ಲಿ ನಿಮ್ಮ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಕ್ರಮ ಕೈಗೊಳ್ಳಿ: ತಾಪಂ ಮಾಜಿ ಅಧ್ಯಕ್ಷ ಎಸ್‌.ಆರ್‌.ಚಿಕ್ಕಣ್ಣ ಮಾತನಾಡಿ, ಹಳ್ಳಿಗಾಡಿನಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಮಾಡಲು ಜಾಗ ಇಲ್ಲದಿದ್ದರೂ ಹಣ ಮಂಜೂರಾಗಿದೆ. ಜಾಗ ಇದ್ದ ಕಡೆ ಹಣ ಬಿಡುಗಡೆಯಾಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಶಾಸಕರಿಗೆ ಮನವಿ ಮಾಡಿದರು. ಕೂಡಲೇ ಈ ಸಂಬಂಧ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌ ಅವರಿಗೆ ಶಾಸಕರು ಸೂಚಿಸಿದರು.

ಇದನ್ನೂ ಓದಿ :ಬೈ ಎಲೆಕ್ಷನ್‌: ವಾಸ್ತವ್ಯಕ್ಕೆ ಈಗಿನಿಂದಲೇ ಬುಕ್ಕಿಂಗ್‌!

Advertisement

ಕ್ರಮ ಕೈಗೊಳ್ಳಲು ಆಗ್ರಹ: ಮುಖಂಡರಾಮಲಿಂಗಯ್ಯ ಮಾತನಾಡಿ, ಎಸ್‌. ಬಂಗಾರಪ್ಪ ಅವರ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪಟ್ಟಣದ ಆಶ್ರಯ ಕಾಲೋನಿ ಸರ್ವೆ ನಂ 26 ಗೋಮಾಳ ಜಾಗದಲ್ಲಿ ಪ.ಜಾತಿ, ಪ.ಪಂಗಡದ ನಿರುದ್ಯೋಗಿ ಯುವ ಜನಾಂಗದ ಕೌಶಲ್ಯ ಅಭಿ ವೃದ್ಧಿ ತರಬೇತಿಗೆ ಕಟ್ಟಡ ಕಟ್ಟಲಾಗಿತ್ತು. ಅಲ್ಲಿ ಚರ್ಮ ಕೈಗಾರಿಕೆ ತರಬೇತಿ ನಡೆಯು ತ್ತಿತ್ತು. ಬಳಿಕ ಅಗರಬತ್ತಿ ತಯಾರು ಮಾಡ ಲಾಗುತ್ತಿತ್ತು. ಆದರೆ, ಅಧಿಕಾರಿಗಳ ನಿರ್ಲಕ್ಷತೆಯಿಂದ ಎಲ್ಲಾ ತರಬೇತಿ ಸ್ಥಗಿತಗೊಂಡು ಕಟ್ಟಡ ಏನಾಯಿತು ಎಂದು ತಿಳಿಯದಂತಾಗಿದೆ. ಈ ಸಂಬಂಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಪುರಸಭಾ ಅಧ್ಯಕ್ಷ ಎಸ್‌. ಕೆ.ನಾಗೇಂದ್ರ, ಮುಖ್ಯಾಧಿಕಾರಿ ಕೆ.ಪಿ.ರವಿಕುಮಾರ್‌, ಸದಸ್ಯರಾದ  ಶ್ರೀನಿವಾಸ್‌, ಉದ ಯ್‌, ದೇವರಾಜ್‌, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾಳಮ್ಮ, ಉಮೇ ಶ್‌, ದಲಿತ ಮುಖಂಡರಾದ ರಾಮಚಂದ್ರಯ್ಯ, ವರದರಾಜು, ನರಸಿಂಹಮೂರ್ತಿ, ದಲಿತ್‌ನಾರಾಯಣ್‌, ಶಿವಶಂಕರ್‌, ನರಸಿಂಹಪ್ರಸಾದ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next