Advertisement

ಅಂಬೇಡ್ಕರ್‌ ಭವನ ಅಧ್ಯಯನ ಕೇಂದ್ರವಾಗಲಿ

12:39 PM Jul 26, 2018 | Team Udayavani |

ಹುಣಸೂರು: ನಗರದಲ್ಲಿರುವ ಅಂಬೇಡ್ಕರ್‌ ಭವನವನ್ನು ಸಾಂಸ್ಕೃತಿಕ ಮತ್ತು ಅಧ್ಯಯನ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆ ಹಾಗೂ ದಲಿತ ಮುಖಂಡರನ್ನೊಳಗೊಂಡ ಸಮಿತಿ ರಚಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಶಾಸಕ ಎಚ್‌.ವಿಶ್ವನಾಥ್‌ ತಿಳಿಸಿದರು.

Advertisement

ಇತ್ತೀಚೆಗೆ ನಡೆದ ಎಸ್‌ಸಿ/ಎಸ್‌ಟಿ ಹಿತರಕ್ಷಣಾ ಸಮಿತಿ ಸಭೆಯಲ್ಲಿ ದಲಿತ ಮುಖಂಡರು ಅಂಬೇಡ್ಕರ್‌ ಭವನಕ್ಕೆ ಮೂಲ ಸೌಕರ್ಯ ಕಲ್ಪಿಸಬೇಕೆಂಬ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ದಲಿತ ಮುಖಂಡರೊಂದಿಗೆ ಬುಧವಾರ ಭವನಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 

ಈ ವೇಳೆ ದಸಂಸ ಮುಖಂಡ ನಿಂಗರಾಜ ಮಲ್ಲಾಡಿ ಮಾತನಾಡಿ, ಅಂಬೇಡ್ಕರ್‌ ಭವನ ದಲಿತರ ಪ್ರತೀಕವಾಗಿದ್ದು, ಇಲ್ಲಿಗೆ ಪೀಠೊಪಕರಣ ವ್ಯವಸ್ಥೆ ಕಲ್ಪಿಸಬೇಕು, ಪಕ್ಕದ ಖಾಲಿ ನಿವೇಶನದಲ್ಲಿ ಅಡುಗೆ ಕೋಣೆ, ಕುಡಿಯುವ ನೀರು ವ್ಯವಸ್ಥೆ, ಶೌಚಾಲಯ ನಿರ್ಮಿಸಿಕೊಡಬೇಕು, ಇದರಿಂದ ಬಡವರ ಮದುವೆಗಳಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು. 

ಉಪಹಾರ ಕೊಠಡಿ: ಈಗಾಗಲೆ ಪಕ್ಕದ ನಿವೇಶನದಲ್ಲಿ ಪೌರಕಾರ್ಮಿಕರಿಗೆ ಉಪಹಾರ ವ್ಯವಸ್ಥೆಗೆ ಕೊಠಡಿ ನಿರ್ಮಿಸಲು ಟೆಂಡರ್‌ ಕರೆದು ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಪೌರಾಯುಕ್ತ ಶಿವಪ್ಪನಾಯಕ ಮಾಹಿತಿ ನೀಡಿದರು. 

ಅಧ್ಯಯನ ಕೇಂದ್ರವಾಗಲಿ:  ಅಂಬೇಡ್ಕರ್‌ ಭವನದಲ್ಲಿ ಮದುವೆ ಬದಲಿಗೆ ಅಂಬೇಡ್ಕರ್‌, ಗಾಂಧೀಜಿಯಂತಹ ಮಹನೀಯರ ಕುರಿತು ಚರ್ಚೆ, ಸಂವಾದ ನಡೆಸಬೇಕು. ಗ್ರಂಥಾಲಯ ತೆರೆಯಬೇಕು. ಸೂಕ್ತ ಪೀಠೊಪಕರಣಗಳ ವ್ಯವಸ್ಥೆಗೆ ವಿವಿಧ ಇಲಾಖೆಗಳ ನೆರವು ಪಡೆಯಬೇಕು. ಭವನದ ಹಿಂಭಾಗದ ಖಾಲಿ ಸ್ಥಳದಲ್ಲಿ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗುವುದೆಂದು ಶಾಸಕ ವಿಶ್ವನಾಥ್‌ ತಿಳಿಸಿದರು.

Advertisement

ಭವನ ನಿರ್ವಹಣೆಗಾಗಿ ಉಪ ವಿಭಾಗಾಧಿಕಾರಿಗಳ ನೇತೃತ್ವದಲ್ಲಿ ನಗರಸಭೆ, ತಾಪಂ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು, ಸಮಾಜದ ಮುಖಂಡರ ಸಮಿತಿ ರಚಿಸಲಾಗುವುದೆಂದರು.

ಈ ವೇಳೆ ಉಪ ವಿಭಾಗಾಧಿಕಾರಿ ಕೆ.ನಿತೀಶ್‌, ನಗರಸಭೆ ಅಧ್ಯಕ್ಷ ಶಿವಕುಮಾರ್‌, ಮಾಜಿ ಅಧ್ಯಕ್ಷ ಲಕ್ಷ್ಮಣ್‌, ಸಮಾಜ ಕಲ್ಯಾಣಾಧಿಕಾರಿ ಮೋಹನ್‌ಕುಮಾರ್‌, ಎಇಇ ಪಾರ್ವತಿದೇವಿ, ಎಂಜಿನಿಯರ್‌ ಸದಾಶಿವಪ್ಪ, ನಗರಸಭಾ ಸದಸ್ಯ ಎಚ್‌.ವೈ.ಮಹದೇವ್‌, ಕುಮಾರ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next