Advertisement
ಈ ಹಿಂದೆ ಹಸಿ ಕೊಕ್ಕೊ ಧಾರಣೆ ಕೆ.ಜಿ.ಗೆ 300 ರೂ.ಗಡಿಗೆ ತಲುಪಿ ಸಾರ್ವಕಾಲಿಕ ದಾಖಲೆ ಬರೆದಿತ್ತು. ಅನಂತರ ಏಕಾಏಕಿ ಕುಸಿತ ಕಂಡು 100 ರೂ.ಗಿಂತ ಕೆಳಗೆ ಇಳಿದಿತ್ತು. ಪ್ರಸ್ತುತ ಹಸಿ ಕೊಕ್ಕೊ ಧಾರಣೆ ಏರಿಕೆ ಕಂಡರೆ, ಒಣ ಕೊಕ್ಕೊ ಧಾರಣೆ ಸ್ಥಿರವಾಗಿ ಮುಂದುವರಿದಿದೆ.
Related Articles
ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್ ಧಾರಣೆ ಏರಿಕೆಯತ್ತ ಮುಖ ಮಾಡಿದೆ. ನ.27ರಂದು ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್‌ಗೆ ಕೆ.ಜಿ.ಗೆ 447 ರೂ. ದಾಖಲಾಗಿದ್ದು 450 ರೂ. ಗಡಿಗೆ ತಲುಪುವ ಸುಳಿವು ನೀಡಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿ 435 ರೂ.ಧಾರಣೆ ಇತ್ತು. ಹೊರ ಮಾರುಕಟ್ಟೆಯಲ್ಲಿ ಸಿಂಗಲ್ ಚೋಲ್‌ಗೆ ಭಾರೀ ಬೇಡಿಕೆ ಕಂಡು ಬಂದಿದೆ. ಹೊಸ ಅಡಿಕೆಗೆ ಕ್ಯಾಂಪ್ಕೋದಲ್ಲಿ 335 ರೂ. ಇದ್ದರೆ ಹೊರ ಮಾರುಕಟ್ಟೆಯಲ್ಲಿ 355 ರೂ.ತನಕ ಇತ್ತು. ಡಬ್ಬಲ್ ಚೋಲ್ ಧಾರಣೆ ಕ್ಯಾಂಪ್ಕೋದಲ್ಲಿ 500 ರೂ. ಇದ್ದರೆ ಹೊರ ಮಾರುಕಟ್ಟೆಯಲ್ಲಿ 508 ರೂ. ತನಕವೂ ಖರೀದಿಯಾಗಿದೆ.
Advertisement
ರಬ್ಬರ್ ಏರುಮುಖಕ್ಯಾಂಪ್ಕೋದಲ್ಲಿ ರಬ್ಬರ್ ಗ್ರೇಡ್‌ಗೆ 186 ರೂ., ಸ್ಕಾಪ್‌ಗೆ 121 ರೂ. ದಾಖಲಾಗಿತ್ತು. ಕೆಲವು ದಿನಗಳಿಂದ ಧಾರಣೆ ಏರುಮುಖದತ್ತ ಸಾಗಿದೆ. ಕಾಳು ಮೆಣಸು ಧಾರಣೆಯು 615 ರೂ. ಇದ್ದು ಕಳೆದ ಹಲವು ತಿಂಗಳಿನಿಂದಲೂ ಧಾರಣೆ ಸ್ಥಿರವಾಗಿದೆ. ತೆಂಗಿನ ಕಾಯಿಗೆ ಕೆ.ಜಿ.ಗೆ 49 ರೂ.ನಿಂದ 50 ರೂ. ತನಕ ಧಾರಣೆ ಇದ್ದರೆ, ಕೊಬ್ಬರಿಗೆ 150 ರೂ. ತನಕ ಧಾರಣೆ ಕಂಡು ಬಂದಿದೆ.