Advertisement

ಅಂಬಾಟಿ ರಾಯುಡು ಅಂತಾರಾಷ್ಟ್ರೀಯ ಕ್ರಿಕೆಟ್‌ ಬೌಲಿಂಗ್‌ನಿಂದ ಅಮಾನತು

10:12 AM Jan 28, 2019 | udayavani editorial |

ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ ತಂಡದ ಆಲ್‌ ರೌಂಡರ್‌ ಅಂಬಾಟಿ ರಾಯುಡು ಅವರನ್ನು ಐಸಿಸಿ, ತತ್‌ಕ್ಷಣದಿಂದ ಜಾರಿಗೆ ಬರುವಂತೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಬೌಲಿಂಗ್‌ನಿಂದ ಅಮಾನತುಗೊಳಿಸಿದೆ. ಈ ಅಮಾನತನ್ನು ಐಸಿಸಿ ಇಂದು ಸೋಮವಾರ ದೃಢಪಡಿಸಿದೆ. 

Advertisement

ಶಂಕಿತ ಬೌಲಿಂಗ್‌ ನಮೂನೆ ವರದಿಯಾದ 14 ದಿನಗಳ ವರೆಗೆ ರಾಯುಡುಗೆ  ಕಾನೂನು ಬದ್ಧ ಬೌಲಿಂಗ್‌ ಪರೀಕ್ಷೆಗೆ ಒಳಪಡುವುದಕ್ಕೆ ಅವಕಾಶ ಇರುವುದಿಲ್ಲ. ಹಾಗಾಗಿ ಅವರನ್ನು ತತ್‌ಕ್ಷಣದಿಂದ ಜಾರಿಗೆ ಬರುವಂತೆ ಐಸಿಸಿ ನಿಯಮಾವಳಿ 4.2ರ ಪ್ರಕಾರ ಬೌಲಿಂಗ್‌ನಿಂದ ಅಮಾನತುಗೊಳಿಸಲಾಗಿದೆ ಎಂದು ಐಸಿಸಿ ಹೇಳಿದೆ. 

ರಾಯುಡು ಅವರು ತನ್ನ ಬೌಲಿಂಗ್‌ ನಮೂನೆ ಕಾನೂನು ಬದ್ಧವಾಗಿದೆ ಎಂದು ಸಾಬೀತು ಪಡಿಸುವ ವರೆಗೆ ಈ ಅಮಾನತು ಮುಂದುವರಿಯಲಿದೆ. ಆಸ್ಟ್ರೇಲಿಯದ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ  ಕಳೆದ ಜನವರಿ 13ರಂದು ಸಿಡ್ನಿಯಲ್ಲಿ ನಡೆದಿದ್ದ  ಮತ್ತು ಭಾರತ ಏಳು ವಿಕೆಟ್‌ಗಳಿಂದ ಜಯಿಸಿದ್ದ  ಮೊದಲ ಪಂದ್ಯದಲ್ಲಿ  ಅಂಬಾಟಿ ರಾಯುಡು ಅವರ ಬೌಲಿಂಗ್‌ ನಮೂನೆ ಶಂಕಾಸ್ಪದವೆಂದು ವರದಿಯಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next