Advertisement

ಅಂಬಿ ಸಮಾಧಿಗೆ ಹಾಲು,ತುಪ್ಪ; ಅಭಿಮಾನಿಗಳಿಗೂ ಚಿತಾಭಸ್ಮ!

10:50 AM Nov 28, 2018 | |

ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿ ನಟ ರೆಬೆಲ್‌ ಸ್ಟಾರ್‌ ಅವರ ಸಮಾಧಿಗೆ ಬುಧವಾರ ಹಾಲು ತುಪ್ಪ ಬಿಡಲಾಯಿತು.ಅಸ್ಥಿ ಸಂಗ್ರಹಣ ,ಚಿತಾಭಸ್ಮವನ್ನು ಸಂಗ್ರಹಿಸಿ ಉಳಿದ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತಿದೆ. 

Advertisement

ಅರ್ಚಕರ ನೇತೃತ್ವದಲ್ಲಿ  ಪುತ್ರ ಅಭಿಷೇಕ್‌ ಅವರು ಧಾರ್ಮಿಕ ವಿಧಿಗಳನ್ನು  ನಡೆಸಿದರು. , ಅಂಬರೀಶ್‌ ಅವರ ಪತ್ನಿ ಸುಮಲತಾ ಅವರೂ ಕುಟುಂಬದ ಇತರ ಸದಸ್ಯರೊಂದಿಗೆ ಆಗಮಿಸಿದ್ದರು 

ಅಭಿಮಾನಿಗಳಿಗೂ ಚಿತಾಭಸ್ಮ !
ಇಂದೂ ಕಂಠೀರವ ಸ್ಟುಡಿಯೋ ಬಳಿ ಸಾವಿರಾರು ಮಂದಿ ಅಂಬರೀಶ್‌ ಅವರ ಅಭಿಮಾನಿಗಳು ಜಮಾವಣೆಗೊಂಡಿದ್ದರು. ಧಾರ್ಮಿಕ ವಿಧಿಗಳು ಮುಗಿಯುವ ವರೆಗೆ ಸಮಾಧಿ ಬಳಿ ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿತ್ತು. 

ಚಿತಾಭಸ್ಮವನ್ನು ಅಭಿಷೇಕ್‌ ಅವರು ಕೆಲ ಅಭಿಮಾನಿಗಳಿಗೆ ವಿತರಿಸಿದರು. ಚಿತಾಭಸ್ಮ ಪಡೆದ ಅಭಿಮಾನಿಗಳು ಸಂಭ್ರಮದಲ್ಲಿ ತೇಲಾಡಿ ನೆಚ್ಚಿನ ನಾಯಕರನ್ನು ನೆನೆದು ಕಣ್ಣೀರಿಟ್ಟರು. ಅಭಿಷೇಕ್‌ ಅವರಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು. 

Advertisement

 ಅಂಬರೀಶ್‌ ನಿಧನವಾದ ದಿನದಿಂದಲೂ ಎಲ್ಲ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದ ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌, ಅಂಬರೀಶ್‌ ಆಪ್ತ ಸೀನಣ್ಣ, ನಟ ದೊಡ್ಡಣ್ಣ, ದರ್ಶನ್‌  ಸೇರಿ ಹಲವು ಗಣ್ಯರು ಮತ್ತು  ಸಂಬಂಧಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಚಿತ್ರಂಗದ ನೂರಾರು ಮಂದಿ ಗಣ್ಯರು ಆಗಮಿಸಿದ್ದರು. 

ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ವಿಸರ್ಜಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next