Advertisement

75ರ ಸಂಭ್ರಮಕ್ಕೆ ಯೂನಿಟಿ ಸ್ಯಾಟ್‌;  ಈ ವರ್ಷಾಂತ್ಯ ವಿದ್ಯಾರ್ಥಿ ರೂಪಿತ 75 ಉಪಗ್ರಹ ಉಡಾವಣೆ

11:32 PM Jan 12, 2022 | Team Udayavani |

ಹೊಸದಿಲ್ಲಿ: ಖಾಸಗಿ ಸಂಸ್ಥೆಗಳಾದ ಸ್ಪೇಸ್‌ಎಕ್ಸ್‌ ಮತ್ತು ಅಮೆಜಾನ್‌ ಸಂವಹನ ವ್ಯವಸ್ಥೆ ಸುಧಾರಣೆಗಾಗಿ ವೆಬ್‌ ಲಾಂಚಿಂಗ್‌ ಸ್ಯಾಟ್‌ಲೈಟ್‌ ಉಡಾವಣೆ ಮಾಡಿದ್ದು, ಭಾರತ ಕೂಡ ಈ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆ ಇರಿಸಿದೆ.

Advertisement

ಈ ವರ್ಷಾಂತ್ಯದ ವೇಳೆಗೆ ದೇಶದ ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ರೂಪಿಸಿರುವ 75 ಕೃತಕ ಉಪಗ್ರಹ ಗಳನ್ನು ಭಾರತ ಉಡಾವಣೆ ಮಾಡಲಿದೆ. ಈ ಮೂಲಕ ಲೋ ಅರ್ಥ್ ಆರ್ಬಿಟ್‌ (ಎಲ್‌ಇಒ) ಸ್ಪರ್ಧೆಯಲ್ಲಿ ತಾನೂ ಇದ್ದೇನೆ ಎಂಬುದನ್ನು ಸಾಬೀತುಪಡಿಸಲಿದೆ.

ಈ ಕೃತಕ ಉಪಗ್ರಹಗಳಿಗೆ ಯೂನಿಟಿ ಸ್ಯಾಟ್‌ ಎಂಬ ಹೆಸರು ನೀಡಲಾಗಿದೆ. ವಿದ್ಯಾರ್ಥಿಗಳೇ ಇವುಗಳನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದ್ದು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಆಗಿರುವುದು ಈ ಹೆಸರಿಡಲು ಕಾರಣ.

ಇದನ್ನೂ ಓದಿ:ಚೀನದಲ್ಲಿ ಕೋವಿಡ್‌ ಸೋಂಕು ಏರಿಕೆ: ಮೆಟಲ್‌ ಬಾಕ್ಸ್‌ನಲ್ಲಿ ಕ್ವಾರಂಟೈನ್‌

ಈ ಉಪಗ್ರಹಗಳನ್ನು ರೂಪಿಸುವಲ್ಲಿ ಚಂಡೀಗಢ ವಿ.ವಿ., ಕಾನ್ಪುರ ಐಐಟಿ, ಐಐಟಿ ಬಾಂಬೇ ಮತ್ತಿತರ 11 ಸಂಸ್ಥೆಗಳು ಪ್ರಧಾನ ಪಾತ್ರ ವಹಿಸಿವೆ. ಇವು ಬಾಹ್ಯಾಕಾಶದಲ್ಲಿ “ಇಂಟರ್ನೆಟ್‌ ಆಫ್ ಥಿಂಗ್ಸ್‌’ಗೆ ವೇಗ ನೀಡುವ ಕೆಲಸ ಮಾಡಲಿವೆ.

Advertisement

ಒಮ್ಮೆ ಉಡಾವಣೆಯಾದ ಬಳಿಕ ಈ ಉಪಗ್ರಹಗಳು ಎರಡರಿಂದ ನಾಲ್ಕು ವರ್ಷಗಳ ಕಾಲ ಕಾರ್ಯಾಚರಿಸಲಿವೆ. ಈ ಹಿಂದೆ ಭಾರತ 50 ಉಪಗ್ರಹಗಳನ್ನು ಏಕಕಾಲದಲ್ಲಿ ಉಡಾವಣೆ ಮಾಡಿತ್ತು. ಈಗ 75 ಉಪಗ್ರಹಗಳನ್ನು ಯಾವ ವಾಹಕದಲ್ಲಿ ಉಡಾವಣೆ ಮಾಡಲಿದೆ ಎಂಬ ಕುತೂಹಲವಿದೆ.

ವಿಶ್ವಸಂಸ್ಥೆಯಲ್ಲಿ  ಉಲ್ಲೇಖ
2021ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ  ಅಮೃತೋತ್ಸವ ನಿಮಿತ್ತ 75 ಉಪಗ್ರಹ ಉಡಾವಣೆ ಬಗ್ಗೆ ಪ್ರಸ್ತಾವಿಸಿದ್ದರು. ಇವುಗಳನ್ನು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳೇ ರೂಪಿಸಿದ್ದಾರೆ ಎಂದಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next