ಸಿದ್ದಾಪುರ: ಅಮಾಸೆಬೈಲು ಗ್ರಾ.ಪಂ.ನ 2017-18ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಅಮಾಸೆಬೈಲು ವ್ಯ.ಸೇ.ಸ. ಸಂಘದ ಸಭಾಂಗಣದಲ್ಲಿ ಗ್ರಾ. ಪಂ. ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು.
ಗ್ರಾಮ ಸಭೆಯ ಆರಂಭವಾಗುತ್ತಿದ್ದಂತೆ ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ, ಸಮರ್ಪಕವಾಗಿ ಮಾಡದ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಯ ಬಗ್ಗೆ ಉತ್ತರ ನೀಡುವಂತೆ ಆಗ್ರಹಿಸಿದಾಗ, ಚರ್ಚೆಗೆ ಗ್ರಾಸವಾಯಿತು. ಮಾರ್ಗದರ್ಶಿ ಅಧಿಕಾರಿ ಮಧ್ಯ ಪ್ರವೇಶಿಸಿ, ಗ್ರಾಮಸ್ಥರ ನಡುವೆ ಚರ್ಚೆಗಳು ಬೇಡ. ಪ್ರಶ್ನೆಗಳಿಗೆ ಅಧಿಕಾರಿಗಳು ಸಮರ್ಪಕ ಉತ್ತರ ನೀಡಬೇಕು ಎಂದು ಹೇಳಿದಾಗ ಸಭೆಯು ಮುಂದುವರಿಯಿತು.
ವಿಧವೆಯರು ಹಾಗೂ ವಿಕಲಚೇತನರಿಗೆ ಸರಕಾರದಿಂದ ಮಂಜೂರಾಗಿ ಬಂದ ಮನೆಗಳು ಗ್ರಾ. ಪಂ. ನಿರ್ಲಕ್ಷ್ಯದಿಂದ ವಾಪಾಸಾದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ, ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ನಮ್ಮಿಂದ ತಪ್ಪಾಗಿದೆ ಎಂದು ಕ್ಷÒಮೆಯಾಚಿಸಿದರು. ಮುಂದಿನ ದಿನಗಳಲ್ಲಿ ಹೀಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಸರಕಾರಿ ಜಾಗದಲ್ಲಿ ಬಾರ್ ನಡೆಸುತ್ತಿರುವ ಮತ್ತು ಎಲ್ಲ ಬಾರ್‌ಗಳಲ್ಲಿ ಮದ್ಯಕ್ಕೆ ಮೂಲ ಬೆಲೆಗಿಂತ ಹೆಚ್ಚು ಹಣ ಪಡೆಯುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಅಬಕಾರಿ ವೃತ್ತ ನಿರೀಕ್ಷಕ ಮಂಜುನಾಥ ಅವರು ಮಾತನಾಡಿ, ಮೂಲ ಬೆಲೆಗಿಂತ ಹೆಚ್ಚಿನ ದರ ತೆಗೆದುಕೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಂತಹ ಬಾರ್‌ಗಳ ಬಗ್ಗೆ ದೂರು ನೀಡಿದಲ್ಲಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದರು.
ಚರ್ಚೆ: ಗ್ರಾ. ಪಂ. ಸರಿಯಾಗಿ ನಿರ್ಣಯಿಸದ ಪರಿಣಾಮ ಗ್ರಾಮಸ್ಥರಿಗೆ ಹಕ್ಕು ಪತ್ರ ಸಿಗದಿರುವ ಬಗ್ಗೆ, ಕಾಡುಪ್ರಾಣಿಗಳ ಹಾವಳಿ, ರೈತರಿಗೆ ಬೆಳೆ ಪರಿಹಾರ, ತೊಂಬಟ್ಟುವಿನಲ್ಲಿ ಆಶಾ ಕಾರ್ಯಕರ್ತೆಯರು ಯಾರು?. ಅವರು ಸರಿಯಾಗಿ ಕರ್ತವ್ಯ ನಿರ್ವಹಿಸದಿರುವ ಬಗ್ಗೆ, ಕೆಳಾಸುಂಕ ಪರಿಸರದ ಎಸ್‌ಟಿ ಕಾಲೋನಿ ರಸ್ತೆ ಸಂಪರ್ಕ ಇಲ್ಲದಿರುವುದು ಮುಂತಾದ ವಿಚಾರಗಳ ಬಗ್ಗೆ ಚರ್ಚೆಗಳು ನಡೆದವು.
ಗ್ರಾಮಸ್ಥರ ಪರವಾಗಿ ತಿಮ್ಮಪ್ಪ ಪೂಜಾರಿ ಮಂಡಾಡಿ, ಸದಾನಂದ ಶೆಟ್ಟಿ ರಟ್ಟಾಡಿ, ತಮ್ಮಯ್ಯ ನಾಯ್ಕ ಜಡ್ಡಿನಗದ್ದೆ, ಸೂರ್ಯನಾರಾಯಣ ಐತಾಳ್, ಶೇಖರ ಪೂಜಾರಿ ಅಮಾಸೆಬೈಲು, ಗಣಪತಿ ಪೂಜಾರಿ ತೊಂಬಟ್ಟು, ಟಿ. ಚಂದ್ರಶೇಖರ ಶೆಟ್ಟಿ, ಚಂದ್ರ ಶೆಟ್ಟಿ ಕೆಲಾ, ಸೀನಾ ನಾಯ್ಕ, ಜಯಪ್ರಕಾಶ ಶೆಟ್ಟಿ ರಟ್ಟಾಡಿ, ಪ್ರಭಾಕರ ನಾಯ್ಕ ಕೆಳಾಸುಂಕ, ಗುರುಪ್ರಸಾದ ಶೆಟ್ಟಿ ತೊಂಬಟ್ಟು ಮೊದಲಾದವರು ಗ್ರಾಮದ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರು.
ಕುಂದಾಪುರ ಸಹಾಯಕ ಕೃಷಿ ಅಧಿಕಾರಿ ವಿಟuಲ ರಾವ್ ಮಾರ್ಗದರ್ಶಿ ಅಧಿಕಾರಿ ಭಾಗವಹಿಸಿದರು.ಗ್ರಾ. ಪಂ. ಸದಸ್ಯರಾದ ಆರ್. ರಾಮಣ್ಣ ಹೆಗ್ಡೆ, ವೈ. ಕುಶಲ ತೋಳಾರ್, ಬಾಲಕೃಷ್ಣ ಶೆಟ್ಟಿ, ಗಣೇಶ್ ಶೆಟ್ಟಿ, ಕೃಷ್ಣ ಪೂಜಾರಿ ಕೊೃಲಾಡಿ, ಸಂದೀಪ ನಾಯ್ಕ, ಪ್ರಸನ್ನ ಶೆಟ್ಟಿ, ಶ್ರೀನಿವಾಸ ಪೂಜಾರಿ ತೊಂಬಟ್ಟು, ಬಾಬಿ, ಗಿರೀಶ್ ಪೂಜಾರಿ, ಕಸ್ತೂರಿ ಶೆಟ್ಟಿ, ಶೀಲಾವತಿ, ಶಾರದಾ, ಸುಮಂಗಲಾ, ವಸಂತಿ, ಜ್ಯೋತಿ, ಎಡಲಿನ್ ರೋಸಿ, ಉಪ ವಲಯಾರಣ್ಯಾಧಿಕಾರಿ ವೀರಣ್ಣ, ಮೆಸ್ಕಾಂ ಜೆಇ ಮಂಜುನಾಥ ಶ್ಯಾನುಭಾಗ್, ಪಂಚಾಯತ್‌ರಾಜ್ ಎಂಜಿನಿಯರ್ ಶ್ರೀಧರ ಪಾಲೇಕರ್, ಪಶು ವೈದ್ಯಾಧಿಕಾರಿ ಡಾ| ರಾಕೇಶ್ ಎಂ., ವೈದ್ಯಾಧಿಕಾರಿ ಡಾ| ಹೇಮಲತಾ, ವನ್ಯಜೀವಿ ವಿಭಾಗದ ವಿನಯ ಜಿ. ನಾಯ್ಕ, ಪ್ರವೀಣ್‌ಕುಮಾರ್, ಅಂಗನವಾಡಿ ಮೇಲ್ವಿಚಾರಕಿ ಯೋಗಿನಿ ನಾಯಕ್, ಅಬಕಾರಿ ಇನ್‌ಸ್ಪೆಕ್ಟರ್ ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.ಪಿಡಿಒ ಭಾಸ್ಕರ ಶೆಟ್ಟಿ ವರದಿ ವಾಚಿಸಿ, ಕಾರ್ಯಕ್ರಮ ನಿರೂಪಿಸಿದರು.