ಜಮ್ಮು: ಮುಂದಿನ ತಿಂಗಳ ಅಂತ್ಯದಿಂದ ಶುರುವಾಗುವ ಅಮರನಾಥ ಯಾತ್ರೆಗೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸಲಾಗುತ್ತದೆ ಎಂದು ಸಿಆರ್‌ಪಿಎಫ್ ಮಂಗಳವಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮಾತನಾಡಿದ ಸಿಆರ್‌ಪಿಎಫ್ ಡಿಐಜಿ ರಾಜೇಂದ್ರ ಪ್ರಸಾದ್ “ಯಾತ್ರಾರ್ಥಿಗಳು ತಂಗುವಂಥ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗುತ್ತಿದೆ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಸಾರ್ವಜನಿಕರು ಕೂಡ ಸಮಾಜ ವಿರೋಧಿ ಅಂಶಗಳ ಬಗ್ಗೆ ಪೊಲೀಸರಿಗೆ ಮತ್ತು ಸೇನೆಗೆ ಮಾಹಿತಿ ನೀಡಬೇಕು’ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ:ಜಮ್ಮು- ಕಾಶ್ಮೀರ: ಹಳ್ಳಕ್ಕೆ ಬಿದ್ದ ಸಮಂತಾ-ವಿಜಯ್ ದೇವರಕೊಂಡ ವಾಹನ
ಕೆಲ ದಿನಗಳಿಂದ ಈಚೆಗೆ ಕೇಂದ್ರಾಡಳಿತ ಪ್ರದೇಶದಲ್ಲಿ ಹಿಂದೂಗಳ ಮೇಲೆ ಮತ್ತು ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ.