Advertisement

ಕೇಂದ್ರ ಗೃಹಸಚಿವರಿಂದ ಅಮರಗಿರಿ ಲೋಕಾರ್ಪಣೆ

12:48 AM Feb 12, 2023 | Team Udayavani |

ಈಶ್ವರಮಂಗಲ: ಶ್ರೀ ಕ್ಷೇತ್ರ ಹನುಮಗಿರಿ ಯಲ್ಲಿ ನಿರ್ಮಿಸಲಾದ ಶ್ರೀ ಭಾರತೀ ಅಮರ ಜ್ಯೋತಿ ಮಂದಿರ ಅಮರಗಿರಿಯನ್ನು ಕೇಂದ್ರ ಗೃಹಸಚಿವ ಅಮಿತ್‌ ಶಾ ಶನಿವಾರ ಪುಷ್ಪರ್ಚನೆ ಮೂಲಕ ಲೋಕಾರ್ಪಣೆಗೊಳಿಸಿದರು.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಸಹಿತ ಗಣ್ಯರು ಜತೆಗಿದ್ದರು.

ಕೇರಳದ ಕಣ್ಣೂರಿನಿಂದ ಸೇನಾ ಹೆಲಿಕಾಪ್ಟರ್‌ನಲ್ಲಿ ಹನುಮಗಿರಿಯ ಗಜಾನನ ಆಂಗ್ಲ ಮಾಧ್ಯಮ ಶಾಲೆಯ ಮೈದಾನಕ್ಕೆ ಅಪರಾಹ್ನ 3 ಗಂಟೆ 8 ನಿಮಿಷಕ್ಕೆ ಶಾ ಆಗಮಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು, ಉಸ್ತುವಾರಿ ಸಚಿವ ಸುನಿಲ್‌ ಕುಮಾರ್‌, ಸಚಿವ ಎಸ್‌. ಅಂಗಾರ, ಶಾಸಕ ಸಂಜೀವ ಮಠಂದೂರು, ಜಿÇÉಾಧಿಕಾರಿ ರವಿ ಕುಮಾರ್‌, ಎಸಿ ಗಿರೀಶ್‌ ನಂದನ್‌, ಇಒ ನವೀನ್‌ ಭಂಡಾರಿ ಸ್ವಾಗತಿಸಿದರು.

ಅನಂತರ ಶ್ರೀ ಪಂಚಮುಖೀ ಆಂಜನೇಯ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಶಾ ಅವರು ಆಂಜನೇಯ ಸ್ವಾಮಿಗೆ ಪಂಚರತ್ನ ಸಹಿತದ ರಜತ ಗದೆಯನ್ನು ಸಮರ್ಪಿಸಿದರು. ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಅವರು ಗೃಹಸಚಿವರು, ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳನ್ನು ಶಾಲು ಹೊದೆಸಿ ಗೌರವಿಸಿದರು. ಶಾ ಅವರಿಗೆ ಆಂಜನೇಯನ ರಕ್ಷೆ ಕಟ್ಟಿ ಪ್ರಸಾದ ನೀಡಲಾಯಿತು.

ಲೋಕಾರ್ಪಣೆ
ಆಂಜನೇಯ ಕ್ಷೇತ್ರದಿಂದ ಅಮರಗಿರಿಗೆ ಆಗಮಿಸಿದ ಅಮಿತ್‌ ಶಾ ಶ್ರೀ ಭಾರತಿ ಅಮರ ಜ್ಯೋತಿ ಮಂದಿರವನ್ನು ಲೋಕಾರ್ಪಣೆ ಗೊಳಿಸಿದರು. ಅನಂತರ ವಿಜಯದ ಸಂಕೇತದ ಯೋಧನ ಕೈಯ ರಾಷ್ಟ್ರಧ್ವಜಕ್ಕೆ ಪುಷ್ಪಾರ್ಚನೆ ಮಾಡಿದರು. ಅಷ್ಟಭುಜಾ ಕೃತಿಯ ವಿಶೇಷ ಆಲಯದ ಒಳಗೆ ದೀಪ ಪ್ರಜ್ವಲನ ಮಾಡಿ ಭಾರತ ಮಾತೆಯ ಪ್ರತಿಮೆ, ಯೋಧ ಹಾಗೂ ರೈತನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಸಂದರ್ಶಕರ ಪುಸ್ತಕದಲ್ಲಿ ಶಾ ಹಾಸ್ತಾಕ್ಷರ ಮಾಡಿ ಶುಭ ಕೋರಿದರು. ಅನಂತರ ಅಮರಗಿರಿಯ ಮುಂಭಾಗಕ್ಕೆ ಬಂದು ನೆರೆದವರಿಗೆ ಕೈ ಬೀಸಿ ತೆರಳಿದರು.

Advertisement

ಜನರಿಗೆ ಖುಷಿ
ಪಾಸ್‌ ಪಡೆದು ಮಧ್ಯಾಹ್ನವೇ ಹೆಲಿಪ್ಯಾಡ್‌ ಮೇಲ್ಭಾಗದ ಶಾಲಾ ಅವರಣದಲ್ಲಿ ಸೇರಿದ ಸಾರ್ವಜನಿಕರು ಶಾ ಆಗಮಿಸುತ್ತಿದ್ದಂತೆ ಜೈಕಾರ ಹಾಕಿದರು. ನೆರೆದವರತ್ತ ಶಾ ಕೈ ಬೀಸುತ್ತಾ ಹನುಮಗಿರಿಗೆ ಪ್ರವೇಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next