Advertisement

ಮಾಜಿ ಎಸ್‌ಪಿ ನಾಯಕ ಅಮರ್‌ ಸಿಂಗ್‌ರಿಂದ ಆರ್‌ಎಸ್‌ಎಸ್‌ಗೆ ಭೂ ದಾನ!

04:40 PM Nov 29, 2018 | |

ಲಕ್ನೋ: ಎಸ್‌ಪಿ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಮರ್‌ ಸಿಂಗ್‌ ಅವರು ಆರ್‌ಎಸ್‌ಎಸ್‌ನ ಸಹ ಸಂಸ್ಥೆ  ಸೇವಾ ಭಾರತಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ದಾನ ಮಾಡುವ ಮೂಲಕ ರಾಜಕೀಯದಲ್ಲಿ ಇನ್ನೊಂದು ಇನ್ನಿಂಗ್ಸ್‌ ಆರಂಭಿಸುವ ಸೂಚನೆ ನೀಡಿದ್ದಾರೆ. 

Advertisement

ವರದಿಯಾದಂತೆ, ಅಮರ್‌ಸಿಂಗ್‌ ಅವರು ಅಝಂಗಡ್‌ನ‌  ತರ್ವಾನ್‌ನಲ್ಲಿರುವ ತನ್ನ ಪೂರ್ವಿಕರ 15 ಕೋಟಿ ರೂಪಾಯಿ ಮೌಲ್ಯ ಆಸ್ತಿಯನ್ನು ದಾನ ಮಾಡಿದ್ದಾರೆ. ಆಸ್ತಿಯಲ್ಲಿ 4 ಕೋಟಿ ರೂಪಾಯಿ ಮೌಲ್ಯದ ಮನೆ ಸೇರಿದೆ. 

ತನ್ನ ರಾಜಕೀಯ ಜೀವನದ ಉದ್ದಕ್ಕೂ ಆರ್‌ಎಸ್‌ಎಸ್‌ ಸಿದ್ದಾಂತಗಳನ್ನು ಬಲವಾಗಿ ವಿರೋಧಿಸುತ್ತಿದ್ದ ಸಿಂಗ್‌ ಅವರು ತನ್ನ ದಿವಂಗತ ತಂದೆಯ ನೆನಪಿನಲ್ಲಿ ಈ ದಾನ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ.

ಸಮಾಜಸೇವೆ ಮಾಡುತ್ತಿರುವ ಸಂಸ್ಥೆಗೆ ನಾನು ನನ್ನ ಕೊಡುಗೆಯನ್ನು ನೀಡಿದ್ದೇನೆ ಎಂದು ಸಿಂಗ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಮೂಲಕ ಬಿಜೆಪಿ ಸೇರ್ಪಡೆಯಾಗಲು ಯತ್ನಿಸುತ್ತಿದ್ದೀರಿ ಎನ್ನುವ ಮಾತುಗಳು ಕೇಳಿ ಬಂದಿವೆ ಎಂದು ಪ್ರಶ್ನಿಸಿದಾಗ ನಾನು ಅಂತಹದ್ದಕ್ಕೆಲ್ಲ ಉತ್ತರಿಸುವುದಿಲ್ಲ ಎಂದರು. 

Advertisement

ಆಯೋಧ್ಯೆಯ ರಾಮ ಮಂದಿರದ ವಿಚಾರ ಪ್ರಶ್ನಿಸಿದಾಗ, ಅಯೋಧ್ಯೆಯಲ್ಲಿ ಈಗಾಗಲೇ ರಾಮ ಮಂದಿರವಿದೆ. ಅದನ್ನು ಇನ್ನಷ್ಟು ಭವ್ಯ ಮಂದಿರವನ್ನಾಗಿಸಬೇಕಷ್ಟೇ ಎಂದರು. 

ಅಮರ್‌ ಸಿಂಗ್‌ ಸಮಾಜವಾದಿ ಪಕ್ಷದಲ್ಲಿ ಮುಲಾಯಂ ಸಿಂಗ್‌ ಆಪ್ತರಾಗಿ ಗುರುತಿಸಿಕೊಂಡಿದ್ದವರು. ಪ್ರಬಲ ನಾಯಕರಾಗಿದ್ದ ಅವರು 2010 ರಲ್ಲಿ ರಾಷ್ಟ್ರೀಯ ಲೋಕ ಮಂಚ ಪಕ್ಷವನ್ನು ಸ್ಥಾಪಿಸಿ ಎಸ್‌ಪಿಗೆ ಸೆಡ್ಡು ಹೊಡೆದಿದ್ದರು. ಆದರೆ ಹೊಸ ಪಕ್ಷ ಚುನಾವಣೆ ಒಂದು ಸ್ಥಾನಗಳಿಸಲು ಸಾಧ್ಯವಾಗದೆ ಸ್ವಯಂ ಸೋತು ಸುಣ್ಣವಾಗಿದ್ದರು. 2016 ರಲ್ಲಿ ಮತ್ತೆ ಎಸ್‌ಪಿ ಬಾಗಿಲು ತಟ್ಟಿ ಪ್ರವೇಶ ಪಡೆದಿದ್ದರು. ಆದರೆ ಅಖೀಲೇಶ್‌ ಯಾದವ್‌ ಮತ್ತೆ ಅವರನ್ನು ಪಕ್ಷದಿಂದ ಹೊರ ಹಾಕಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next