Advertisement
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರ ಸಾರಥ್ಯದ ಈ ನುಡಿಸಿರಿಯು ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಎಂಬ ಅಭಿಧಾನ ಹೊಂದಿದ್ದರೂ ಈಗ ಇದು ವಸ್ತುಶಃ ಅಂತಾರಾಷ್ಟ್ರೀಯ ಖ್ಯಾತಿಯ ಸಮ್ಮೇಳನವೇ ಆಗಿದೆ. ವಿದ್ಯಾಗಿರಿಯ ಸುಮಾರು ನೂರು ಎಕರೆ ಪರಿಸರ ತುಂಬಾ ಕನ್ನಡ ನಾಡುನುಡಿ ಸಂಸ್ಕೃತಿಯ ಪರಿಮಳ ವ್ಯಾಪಿಸಿದೆ. ಪ್ರತೀ ವರ್ಷ ಬೇರೆ ಬೇರೆ ಆಶಯಗಳನ್ನು ನುಡಿಸಿರಿ ಪರಿಕಲ್ಪಿಸುತ್ತಿದ್ದು ಈ ಬಾರಿಯ ಆಶಯ: ಕರ್ನಾಟಕ- ಬಹುತ್ವದ ನೆಲೆಗಳು. ನುಡಿಸಿರಿ ಎಂಬುದು ಕೇವಲ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದ್ದಲ್ಲ; ಅದು ಬದುಕಿನ ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿದೆ. ಉದಾಹಣೆ: ಜತೆಯಲ್ಲೇ ನಡೆಯುವ ಕಲಾಸಿರಿ, ಕೃಷಿಸಿರಿ, ವಿದ್ಯಾರ್ಥಿ ಸಿರಿ ಇತ್ಯಾದಿ.
ಆಳ್ವಾಸ್ ನುಡಿಸಿರಿಯ ಪ್ರತಿಯೊಂದು ಆವೃತ್ತಿಯೂ ಅಪೂರ್ವ ಯಶಸ್ಸು ಪಡೆ ಯುವುದನ್ನು ಕಂಡಾಗ ಧನ್ಯತೆಯ ಭಾವ ಸ್ಪುರಣವಾಗುವುದೆಂದು ಹೇಳಿದರು ಡಾ| ಎಂ. ಮೋಹನ ಆಳ್ವ. ಜನತೆಯ ಸ್ಪಂದನೆ ಕಂಡಾಗ ಅಪಾರ ಹರ್ಷವಾಗುತ್ತದೆ. ಈ ಯಶಸ್ಸಿಗೆ ಕಾರಣಕರ್ತರನ್ನೆಲ್ಲಾ ಅಭಿನಂದಿಸುವುದಾಗಿ ಹೇಳಿದರು. ಸಾಹಿತ್ಯ ಮಂಥನದ ಜತೆಯಲ್ಲೇ ಸಾಂಸ್ಕೃತಿಕ ಹಬ್ಬ ನುಡಿಸಿರಿಯ ವೈಶಿಷ್ಟ. ಮೂರು ದಿನ, ಹನ್ನೊಂದು ವೇದಿಕೆಗಳಲ್ಲಿ 6,000 ಕಲಾವಿದರು ಭಾಗವಹಿಸುತ್ತಾರೆ ಅನ್ನು ವುದೇ ಒಂದು ಅದ್ಭುತ. ಎಲ್ಲಕ್ಕೂ ಮಿಗಿ ಲಾಗಿ ಈ ಎಲ್ಲ ವ್ಯವಸ್ಥೆಗಳ ಅಚ್ಚುಕಟ್ಟುತನ ಅಪೂರ್ವವೇ ಆಗಿದೆ. ಸಮಯಪಾಲನೆ, ವೈವಿಧ್ಯ ಮುಂತಾದವು ಸಂಘಟನೆಯ ವಿಶೇಷಗಳು.
Related Articles
ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಮಾತ್ರವಲ್ಲ, ದೇಶ ವಿದೇಶಗಳಿಂದಲೂ ಪ್ರತಿನಿಧಿಗಳು ನೋಂದಾಯಿಸುತ್ತಿದ್ದಾರೆ ಎಂಬುದು ಇಲ್ಲಿ ಗಮನಾರ್ಹ. ಗುರುವಾರ ಸಂಜೆಯ ವೇಳೆಗೆ ನೇರ ಮತ್ತು ನೋಂದಾಯಿತ ಪ್ರತಿನಿಧಿಗಳ ಸಂಖ್ಯೆ 40,000 ಸಮೀಪಿಸಿದೆ! ನಾಳೆ 50,000 ದಾಟಲಿದೆ. ಲಕ್ಷ ಪ್ರತಿನಿಧಿಗಳಿಗೂ ಇಲ್ಲಿ ವ್ಯವಸ್ಥೆ ಮಾಡಿಕೊಡಲಾಗುತ್ತದೆ! ಮನರಂಜನೆಗೂ ಆದ್ಯತೆ ನೀಡಲಾಗಿದೆ. ರೋಬೋಟ್ ಚಾಲಿತ ಕೃತಕ ಪ್ರಾಣಿಗಳು ಒಂದು ಉದಾಹರಣೆ.
Advertisement
ಮನೋಹರ ಪ್ರಸಾದ್