ಮೂಡಬಿದಿರೆ: ಆಳ್ವಾಸ್ ನುಡಿಸಿರಿ ಸಮ್ಮೇಳನದೊಂದಿಗೆ ಸಂಯೋಜಿಸಲಾಗಿರುವ 5ನೇ ವರ್ಷದ “ಆಳ್ವಾಸ್ ಕೃಷಿ ಸಿರಿ’ಯನ್ನು ರಾಜ್ಯ ಕೃಷಿ ಸಚಿವ ಎನ್.ಎಚ್. ಶಿವಶಂಕರ ರೆಡ್ಡಿ ಗುರುವಾರ ಸಂಜೆ ಪಂಚ ದೀವಟಿಗೆ ಬೆಳಗಿ ಉದ್ಘಾಟಿಸಿದರು.
ಶಿಕ್ಷಣದ ಜತೆಗೆ ವಿದ್ಯಾರ್ಥಿಗಳಿಗೆ ಕಲೆ, ಸಾಹಿತ್ಯ, ಸಂಸ್ಕೃತಿಯ ವಿಚಾರಗಳನ್ನೂ ಜೋಡಿಸಿ ಕೊಡುವ ಕಾರ್ಯದಲ್ಲಿ ಸಾರ್ಥಕತೆ ಕಾಣುತ್ತಿರುವ ಮೂಡಬಿದಿರೆಯ ಆಳ್ವಾಸ್ ನುಡಿಸಿರಿ ಸಮ್ಮೇಳನ ದೊಂದಿಗೆ ಕೃಷಿ ಸಿರಿಯನ್ನೂ ಜೋಡಿಸಿ ಕೊಂಡು ಮಕ್ಕಳಿಗೆ ಕೃಷಿಯ ಬಗ್ಗೆ ಗೌರವ, ಅಭಿಮಾನ, ಆಸಕ್ತಿ ಮೂಡಿಸುತ್ತಿರುವುದು ಶ್ಲಾಘನೀಯ ಎಂದರು.
ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಚಿವರನ್ನು ಆಳ್ವಾಸ್ ಸಂಸ್ಥೆ ವತಿಯಿಂದ ಗೌರವಿಸಲಾಯಿತು.
ಡಾ| ಎಂ. ಮೋಹನ ಆಳ್ವ, ಮಾಜಿ ಸಚಿವ ಕೆ. ಅಭಯಚಂದ್ರ, ಉದ್ಯಮಿ-ಕೃಷಿಕ ಕೆ. ಶ್ರೀಪತಿ ಭಟ್, ಸಂಪತ್ ಸಾಮ್ರಾಜ್ಯ, ರಾಜವರ್ಮ ಬೈಲಂಗಡಿ, ಸುಭಾಶ್ಚಂದ್ರ ಚೌಟ, ಧನಕೀರ್ತಿ ಬಲಿಪ, ಮಂಗಳೂರು ಮೀನು ಗಾರಿಕೆ ಇಲಾಖೆಯ ಡೀನ್ ಪ್ರೊ| ಎಚ್. ಶಿವಾನಂದ ಮೂರ್ತಿ ಉಪಸ್ಥಿತರಿದ್ದರು. ಉಪನ್ಯಾಸಕ ವೇಣು ಗೋಪಾಲ ಶೆಟ್ಟಿ ನಿರೂಪಿಸಿದರು. ಕೃಷಿ ಸಂಬಂಧಿ ವಿವಿಧ ಪ್ರದರ್ಶನ -ಮಾರಾಟ ಮಳಿಗೆಗಳು ನ.18ರ ವರೆಗೆ ತೆರೆದಿರುತ್ತವೆ.