Advertisement
ಆಲೂರು ಗ್ರಾ.ಪಂ. ಮೀನು ಮಾರಾಟಕ್ಕಾಗಿ ಪೇಟೆ ಹೃದಯ ಭಾಗದಲ್ಲಿ ಮಾರುಕಟ್ಟೆ ಕಟ್ಟಡ ನಿರ್ಮಿಸಿದ್ದು, ನಾಲ್ಕಾರು ದಶಕದಿಂದ ಮೀನು ಮಾರಾಟ ಮಾಡಿ ಮಹಿಳೆಯರು ಕುಟುಂಬ ನಿರ್ವಹಣೆ ಮಾಡಿಕೊಂಡಿದ್ದಾರೆ. ಆಲೂರು ಗ್ರಾ.ಪಂ. ಮೀನು ಮಾರುಕಟ್ಟೆ ತೆರಿಗೆ ಸಂಗ್ರಹಿಸುತ್ತಿದ್ದು, ಅದೇ ರೀತಿ ಇದರ ಅಭಿವೃದ್ಧಿಗೂ ಮುಂದಾಗಲಿ ಎನ್ನುವುದಾಗಿ ಮಹಿಳಾ ವ್ಯಾಪಾರಸ್ಥರು ಒತ್ತಾಯಿಸಿದ್ದಾರೆ.
Related Articles
Advertisement
ದುರಸ್ತಿಗೆ ಪ್ರಸ್ತಾವನೆ: ಮಾರುಕಟ್ಟೆಯ ಅಭಿವೃದ್ಧಿಗೆ ಈಗಾಗಲೇ ತಾಲೂಕು ಪಂಚಾಯತ್ ಸಹಿತ ಸಂಬಂಧ ಪಟ್ಟವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನು ಈಗ ಬೇಡಿಕೆಯಿರುವ ಶೌಚಾಲಯ ಪಂಚಾಯತ್ ನಿಂದ ನಿರ್ಮಿಸಿಕೊಡಲಾಗುವುದು. ಆಲೂರು ಪಂಚಾಯತ್ ಮೀನು ಮಾರುಕಟ್ಟೆಯಲ್ಲದೆ ಬೇರೆ ಕಡೆ ಮೀನು ಮಾರಾಟಕ್ಕೆ ಅವಕಾಶ ಕೊಟ್ಟಿರುವುದು ಹಿಂದಿನ ಆಡಳಿತ ವ್ಯವಸ್ಥೆಯಲ್ಲಿ. ಬೇರೆ ಯಾರೂ ಮೀನು ಮಾರಾಟ ಮಾಡಬಾರದು ಎಂದು ಹೇಳಲಿಕ್ಕೆ ಬರೋದಿಲ್ಲ. ಈ ಸಮಸ್ಯೆ ಸೌಹಾರ್ದವಾಗಿ ಪರಿಹರಿಸುವ ಪ್ರಯತ್ನ ಮಾಡಲಾಗುವುದು. – ರವಿ ಶೆಟ್ಟಿ, ಉಪಾಧ್ಯಕ್ಷರು, ಆಲೂರು ಗ್ರಾ.ಪಂ