Advertisement
ಆಲೂರು ತಾಲೂಕಿನ ಸ್ಥಳೀಯ ಪತ್ರಕರ್ತ ವೀರಭದ್ರ ಸ್ವಾಮಿ ಹಲ್ಲೆಗೊಳಗಾದವರು.
Related Articles
Advertisement
ಈ ಹಿಂದೆ ರವಿಕುಮಾರ್ ಗ್ರಾ.ಪಂ. ನಲ್ಲಿ ಹಣ ಮಾಡುವ ಉದ್ದೇಶದಿಂದ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸೇರಿ ಹಲವು ಭ್ರಷ್ಟಾಚಾರ ತೊಡಗಿದ್ದರು ಎಂದು ತಿಳಿದು ಬಂದಿದ್ದು, ಹಲವು ಭ್ರಷ್ಟಾಚಾರದ ದೂರುಗಳು ಅವರ ಮೇಲೆ ದಾಖಲಾಗಿದೆ.
ಎರಡು ವರ್ಷಗಳ ಹಿಂದೆ ಹಿರಿಯ ಪತ್ರಕರ್ತ ಟಿ.ಕೆ. ಕುಮಾರಸ್ವಾಮಿ ಅವರ ಮೇಲೇಯೂ ಮಾರಣಾಂತಿಕ ಹಲ್ಲೆ ನಡಸಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಯಾರು ಈತನ ಭ್ರಷ್ಟಚಾರದ ಬಗ್ಗೆ ಸುದ್ದಿ ಮಾಡುವರೋ ಅವರ ವಿರುದ್ಧ ಹಲ್ಲೆ ಮಾಡಿಸುವ ಮೂಲಕ ಬೆದರಿಕೆ ಹಾಕಿಸುತ್ತಿದ್ದಾನೆ ಎಂದು ಹೇಳಲಾಗುತ್ತದೆ.
ಕಾರ್ಯನಿರತ ಪತ್ರಕರ್ತರ ಧ್ವನಿ ಖಂಡನೆ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ತಾಲೂಕು ಅಧ್ಯಕ್ಷ ಟಿ.ಕೆ.ಕುಮಾರಸ್ವಾಮಿ ಮಾತನಾಡಿ, ಬೈರಾಪುರ ಗ್ರಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ರವಿಕುಮಾರ್ ಮತ್ತು ಆತನ ಸಹಚರರು ಸ್ಥಳೀಯ ಪತ್ರಕರ್ತ ವೀರಭದ್ರಸ್ವಾಮಿ ಮೇಲೆ ಹಲ್ಲೆ ನಡೆಸಿರುವುದು ಖಂಡನೀಯ.
ರವಿಕುಮಾರ್ ಭ್ರಷ್ಟಾಚಾರ ಎಸಿಗಿದ್ದಾನೆ ಎನ್ನಲಾಗಿದ್ದ ಪ್ರಕರಣವೊಂದರಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಮುಂದಾಗಿದ್ದು, ಈ ಹಿನ್ನೆಲೆ ವರದಿ ಮಾಡಲು ತೆರಳಿದ್ದ ವೀರಭದ್ರಸ್ವಾಮಿ ಮೇಲೆ ಅಧಿಕಾರಿಗಳ ಎದುರಿನಲ್ಲಿಯೇ ಹಲ್ಲೆ ಮಾಡಿರುವುದು ಸಂಘ ಖಂಡಿಸುತ್ತದೆ. ನಿಷ್ಠಾವಂತಿಕೆಯಿಂದ ಕಾರ್ಯನಿರ್ವಹಿಸುವ ಪತ್ರಕರ್ತರ ಮನಸ್ಥಿತಿಯನ್ನು ಕುಗ್ಗಿಸುವ ಕೆಲಸ ಮಾಡಿದಂತಾಗಿದೆ. ಆದ್ದರಿಂದ ರವಿಕುಮಾರ್ ಹಾಗೂ ಆತನ ಸಹಚರರನ್ನು ತಕ್ಷಣ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.