Advertisement

ರಜೆಯಲ್ಲಿ ಸೈನಿಕರ ಆಗಮನಕ್ಕೆ ಅವಕಾಶ ನೀಡಿ: ಹರೀಶ್‌ ಪೂಂಜ

11:28 PM May 29, 2020 | Sriram |

ಬೆಳ್ತಂಗಡಿ: ದೇಶ ರಕ್ಷಣೆಗಾಗಿ ವಿವಿಧ ಭಾಗಗಳಲ್ಲಿರುವ ಸೈನಿಕರಿಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ಅವಕಾಶ ಕಲ್ಪಿಸಿಕೊಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶಾಸಕ ಹರೀಶ್‌ ಪೂಂಜ ಗುರುವಾರ ಮನವಿ ಮಾಡಿದರು.

Advertisement

ತಮ್ಮ ವಾರ್ಷಿಕ ರಜೆಯ ನಿಮಿತ್ತ ತಮ್ಮ ತಮ್ಮ ಊರುಗಳಿಗೆ ಅಗಮಿಸುವುದು ಸಾಮಾನ್ಯ. ಆದರೆ ಕೋವಿಡ್‌-19  ಸೋಂಕಿನ ಕಾರಣದಿಂದ ಹೊರ ರಾಜ್ಯದಿಂದ ಬರುವವರಿಗೆ ನೇರ ಆಗಮನ ಸಾಧ್ಯವಿಲ್ಲ ಇದು ಸೈನಿಕರಿಗೆ ಕುಟುಂಬ ಸೇರಲು ಅಡ್ಡಿಯಾಗಿದೆ. ಇದರ ನಿವಾರಣೆಗೆ ಪೋರ್ಟಲ್‌ನಲ್ಲಿ ಸೈನಿಕರು ಹೆಸರು ನೋಂದಣಿಗೆ ಅವಕಾಶ ನೀಡಿ, ಪ್ರಯಾಣಕ್ಕೆ ಅವಕಾಶ ಕೊಡಬೇಕೆಂದು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಉಪಸ್ಥಿತರಿದ್ದರು.

 

 

Advertisement

Udayavani is now on Telegram. Click here to join our channel and stay updated with the latest news.

Next