ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮದ ಸಾವಿರ ದೇವರ ಮಠದ ಶ್ರೀ ಸದ್ಗುರು ಸಿದ್ದರಾಮೇಶ್ವರ ಪ್ರಥಮ ಜಾತ್ರೆ ರಥೋತ್ಸವನ್ನು ಭಕ್ತರು ಸಡಗರ ಸಂಭ್ರಮದಿಂದ ಎಳೆದು ಸಂಭ್ರಮಿಸಿದರು.
ಸಾವಿರ ದೇವರ ಮಠದ ಶ್ರೀ ಲಿಂ| ಸದ್ಗುರು ಸಿದ್ದರಾಮೇಶ್ವರ ಪ್ರಥಮ ಜಾತ್ರೆ ಉತ್ಸವ ಹಾಗೂ ಪ್ರಥಮ ರಥೋತ್ಸವ ಸಮಾರಂಭದಲ್ಲಿ ತಾಲೂಕಿನ ಅಲ್ಲೂರ, ಸಂಕನೂರ, ದಂಡಗುಂಡ, ಸಾತನೂರ, ಕರದಾಳ, ಬೊಮ್ಮನಹಳ್ಳಿ, ಹಣ್ಣಿಕೇರಾ, ಹೊಸ್ಸೂರ, ಭಂಕಲಗಿ, ಡೋಣಗಾಂವ ಸೇರಿದಂತೆ ಸುತ್ತಮುತ್ತಲಿನ ನೂರಾರು ಗ್ರಾಮಗಳ ಅಪಾರ ಭಕ್ತರ ನೆರದು ರಥೋತ್ಸವ ಸಂಭ್ರಮಕ್ಕೆ ಭಾಗಿಯಾದರು.
ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಮುಗಳನಾಗಾಂವ ಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮಿಗಳು, ದೇಶದ ಸಂಸ್ಕೃತಿ ಉಳಿಯಲು ಜಾತ್ರೆ ಉತ್ಸವಗಳು ಕಾರಣವಾಗಿವೆ. ಮಠ ಮಂದಿರಗಳು ಮಾನವನಿಗೆ ಸಂಸ್ಕಾರ ನೀಡುವ ಕೇಂದ್ರಗಳಾಗಿವೆ ಎಂದು ಹೇಳಿದರು.
ನೇತೃತ್ವ ವಹಿಸಿ ಮಾತನಾಡಿದ ಮಠದ ಸಂಗಮನಾಥ ಸ್ವಾಮೀಜಿ, ಸಿದ್ದರಾಮೇಶ್ವರ ಸ್ವಾಮಿಗಳ ಕನಸನ್ನು ಮಠದ ಭಕ್ತರು ಜಾತ್ರೆ ರಥೋತ್ಸವ ಮಾಡುವ ಮೂಲಕ ಈಡೇರಿಸಿದ್ದಾರೆ ಎಂದು ಹೇಳಿದರು. ಸೇಡಂ ಶಿವಶಂಕರ ಮಠದ ಶ್ರೀ ಶಿವಶಂಕರ ಶಿವಾಚಾರ್ಯರರು, ಹಲಕರ್ಟಿ ಅಭಿನವ ಮುನೇಂದ್ರ ಶಿವಾಚಾರ್ಯರು, ರಾಜಶೇಖರ ಸ್ವಾಮಿ, ದಿಗ್ಗಾಂವ ಕಂಚಗಾರಹಳ್ಳದ ಮಲ್ಲಯ್ಯ ಸ್ವಾಮಿ ಸೇರಿದಂತೆ ಅನೇಕ ಮಠಾಧೀಶರು ಭಾಗವಹಿಸಿದ್ದರು.
ಜಿಲ್ಲಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ ಮಾತನಾಡಿದರು. ತಾಪಂ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ, ಜಿಪಂ ಸದಸ್ಯ ಶಿವರುದ್ರ ಭೀಣಿ, ಡಾ| ಗುಂಡಣ್ಣ ಬಾಳಿ, ಶರಣಗೌಡ ಪಾಟೀಲ, ಹಣಮಂತ ಸಂಕನೂರ, ತಾಪಂ ಸದಸ್ಯ ರವಿ ಪಡ್ಲ, ಗ್ರಾಪಂ ಅಧ್ಯಕ್ಷ ರಾಜಶೇಖರ ಗೋಗಿ,
ಬಿಜೆಪಿ ಅಧ್ಯಕ್ಷ ಮಲ್ಲಿಕಾರ್ಜುನ ಎಮ್ಮೆನೋರ, ಬಸಣ್ಣ ಭಜಂತ್ರಿ, ಮಾಜಿ ತಾಪಂ ಅಧ್ಯಕ್ಷ ಶಾಂತಪ್ಪ ಚಾಳಿಕಾರ, ಗ್ರಾಮದ ಮುಖಂಡರಾದ ರಾಜಶೇಖರ ಗೌಡ, ಸೋಮಶೇಖರ ಮೋಶನಿ, ನಿಜಲಿಂಗಯ್ಯ ಸ್ವಾಮಿ, ಮಹಾದೇವಪ್ಪ ಡೋಣಗಾಂವ, ರಾಜಶೇಖರ ಡೋಣಗಾಂವ, ಭಿಮರಾಯ ಆಡಕಿ, ಶಿವಣ್ಣ ಹೂಗಾರ ಇದ್ದರು. ಸಂಗಣ್ಣಗೌಡ ಅನುವಾರ ಸ್ವಾಗತಿಸಿದರು. ಶಾಂತಪ್ಪ ಚಾಳಿಕಾರ ನಿರೂಪಿಸಿದರು.